ಅಮೆಜಾನ್ ಡೇಟಾ ಕೇಂದ್ರಗಳ ಮೇಲೆ ಡ್ರೋನ್ ದಾಳಿ: ತಾರಕಕ್ಕೇರಿದ ಅಮೆರಿಕ–ಇಸ್ರೇಲ್ ಮತ್ತು ಇರಾನ್ ಸಂಘರ್ಷ

Date:

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತಾರಕಕ್ಕೇರಿರುವ ನಡುವೆಯೇ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ (ಯುಎಇ) ಅಮೆಜಾನ್‌ನ ಎರಡು ಪ್ರಮುಖ ಡೇಟಾ ಕೇಂದ್ರಗಳ ಮೇಲೆ ಡ್ರೋನ್ ದಾಳಿ ನಡೆದಿದೆ. ಇದರ ಜೊತೆಗೆ ಬಹ್ರೇನ್‌ನಲ್ಲಿರುವ ಮತ್ತೊಂದು ಘಟಕದ ಬಳಿಯೂ ನಡೆದ ಪ್ರತ್ಯೇಕ ಡ್ರೋನ್ ದಾಳಿಯಿಂದ ಮೂಲಸೌಕರ್ಯಗಳಿಗೆ ಭೌತಿಕ ಹಾನಿಯಾಗಿದೆ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಅಮೆಜಾನ್ ಕಂಪನಿ ಸ್ಪಷ್ಟಪಡಿಸಿದೆ.

- Advertisement -

ಪೂರ್ಣ ಪ್ರಮಾಣದಲ್ಲಿ ಸೇವೆಗಳನ್ನು ಮರುಸ್ಥಾಪಿಸಲು ಶ್ರಮಿಸುತ್ತಿದ್ದೇವೆ, ಆದರೆ ಹಾನಿಯ ಪ್ರಮಾಣ ದೊಡ್ಡದಿರುವುದರಿಂದ, ಚೇತರಿಕೆಗೆ ಸುದೀರ್ಘ ಸಮಯ ಹಿಡಿಯಲಿದೆ ಎಂದು ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಆದರೆ, ಈ ದಾಳಿಯನ್ನು ಯಾರು ನಡೆಸಿದ್ದಾರೆ ಎಂಬ ಬಗ್ಗೆ ಅಮೆಜಾನ್ ಆಗಲಿ ಅಥವಾ ಮೂಲ ವರದಿಗಳಾಗಲಿ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ; ದಾಳಿಕೋರರ ಗುರುತು ಇನ್ನೂ ನಿಗೂಢವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

​ಇತ್ತ ಇಸ್ರೇಲ್ ಪಡೆಗಳು ಇರಾನ್‌ನ ಟೆಹ್ರಾನ್ ಮತ್ತು ಲೆಬನಾನ್‌ನ ಬೈರುತ್ ಮೇಲೆ ಸತತ ದಾಳಿಗಳನ್ನು ಮುಂದುವರಿಸಿದ್ದು, ಇರಾನ್‌ನ ಸರ್ಕಾರಿ ಪ್ರಸಾರ ಕೇಂದ್ರದ ಮೇಲೂ ಎರಗಿದ್ದಾರೆ. ಈ ದಾಳಿಗಳಿಂದಾಗಿ ಸಾವಿನ ಸಂಖ್ಯೆ 600ರ ಗಡಿ ದಾಟಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಬುಶೆಹ್ರ್ ಪ್ರಾಂತ್ಯದ ಜಾಮ್ ಮತ್ತು ದಿರ್ ನಗರಗಳಲ್ಲಿ ನಡೆಸಿದ ದಾಳಿಯಲ್ಲಿ ಇರಾನ್‌ನ ವಾಯುಪಡೆ ಮತ್ತು ನೌಕಾಪಡೆಯ ಐವರು ಯೋಧರು ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮ (ISNA) ವರದಿ ಮಾಡಿದೆ.

ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್‌ನಾದ್ಯಂತ ದಾಳಿಗಳನ್ನು ಮುಂದುವರಿಸಿದ್ದು, ಪಶ್ಚಿಮ ಜೆರುಸಲೇಂ, ಟೆಲ್ ಅವಿವ್ ಮತ್ತು ಐಲಾಟ್ ಮೇಲೆ ಉಡಾವಣೆಗೊಂಡಿದ್ದ ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಶನಿವಾರದಿಂದ ಈವರೆಗೆ ಇಸ್ರೇಲ್‌ನಲ್ಲಿ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ.

​ಮತ್ತೊಂದೆಡೆ, ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಗೆ ಎರಡು ಡ್ರೋನ್‌ಗಳು ಅಪ್ಪಳಿಸಿದ್ದು, ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಅಲ್ಪ ಹಾನಿಯಾಗಿದೆ. ಭದ್ರತಾ ಹಿತದೃಷ್ಟಿಯಿಂದ ಕೆನಡಾ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿದ್ದು, ಮಾರ್ಚ್ 6ರ ವರೆಗಿನ ಎಲ್ಲಾ ನೇರ ಭೇಟಿಗಳನ್ನು ರದ್ದುಗೊಳಿಸಿದೆ. ಇರಾನ್ ಇದೀಗ ಕೊಲ್ಲಿ ರಾಷ್ಟ್ರಗಳಾದ್ಯಂತ ಇಂಧನ ನೆಲೆಗಳ ಮೇಲೆ ದಾಳಿ ಮಾಡಿದ್ದು, ಜಾಗತಿಕವಾಗಿ ತೈಲ ಮತ್ತು ಅನಿಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ದಾಳಿಯ ಭೀತಿಯಿಂದ ಕತಾರ್‌ನ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಯು ತನ್ನೆಲ್ಲಾ ದ್ರವೀಕೃತ ನೈಸರ್ಗಿಕ ಅನಿಲ (LNG) ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ಇದನ್ನು ಓದಿದ್ದೀರಾ? ಇರಾನ್‌ನ ‘ಉಕ್ಕಿನ ಮನುಷ್ಯ’ ಆಯತೊಲ್ಲಾ ಅಲಿ ಖಮೇನಿ

ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಪೂರೈಕೆಯಾಗುವ ಪ್ರಮುಖ ಕೊಂಡಿಯಾದ ‘ಹೊರ್ಮುಜ್ ಜಲಸಂಧಿ’ಯನ್ನು ಮುಚ್ಚಲಾಗಿದೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಘೋಷಿಸಿದ್ದು, ಈ ಜಲಮಾರ್ಗದ ಮೂಲಕ ಸಾಗಲು ಯತ್ನಿಸುವ ಯಾವುದೇ ಹಡಗುಗಳ ಮೇಲೂ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದೆ.

​ಈ ಮಿಲಿಟರಿ ಕಾರ್ಯಾಚರಣೆ ಸುಮಾರು ನಾಲ್ಕು ವಾರಗಳ ಕಾಲ ಮುಂದುವರಿಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಇರಾನ್‌ನ ಕ್ಷಿಪಣಿ ಮತ್ತು ಪರಮಾಣು ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಲು ವಾಷಿಂಗ್ಟನ್ ಯಾವುದೇ ಕಠಿಣ ಹೆಜ್ಜೆ ಇಡಲು ಸಿದ್ಧವಿದೆ ಎಂದು ಶಪಥ ಮಾಡಿದ್ದಾರೆ. ಆದರೆ, ವಾಷಿಂಗ್ಟನ್‌ನ ಈ ಹೇಳಿಕೆಗಳು ಅಮೆರಿಕದ ವಿದೇಶಾಂಗ ನೀತಿಯು ಕೇವಲ ‘ಇಸ್ರೇಲ್ ಇಚ್ಛೆಯಂತೆ’ ನಡೆಯುತ್ತಿದೆ ಎಂಬ ಅನುಮಾನವನ್ನು ಹುಟ್ಟುಹಾಕಲಿವೆ ಎಂದು ಅಮೆರಿಕದ ಮಾಜಿ ರಾಯಭಾರಿ ಹೆನ್ರಿ ಎನ್ಶರ್ ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ಮೇಲಿನ ದಾಳಿಯನ್ನು ಟ್ರಂಪ್ ಆಡಳಿತ ಸಮರ್ಥಿಸಿಕೊಂಡಿರುವುದನ್ನು ಡೆಮಾಕ್ರಟಿಕ್ ನಾಯಕರು ತೀವ್ರವಾಗಿ ಟೀಕಿಸಿದ್ದು, ಇರಾನ್‌ನಿಂದ ಅಮೆರಿಕಕ್ಕೆ ಯಾವುದೇ ಸನ್ನಿಹಿತ ಅಪಾಯ ಇರಲಿಲ್ಲ, ಅಪಾಯವಿದ್ದರೂ ಅದು ಇಸ್ರೇಲ್‌ಗೆ ಇತ್ತೇ ಹೊರತು ಅಮೆರಿಕಕ್ಕಲ್ಲ ಎಂದು ಸೆನೆಟರ್ ಮಾರ್ಕ್ ವಾರ್ನರ್ ಮತ್ತು ಪ್ರತಿನಿಧಿ ಜೋಕ್ವಿನ್ ಕ್ಯಾಸ್ಟ್ರೊ ವಾದಿಸಿದ್ದಾರೆ. ಇಸ್ರೇಲ್ ಅಮೆರಿಕನ್ ಪಡೆಗಳನ್ನು ಅಪಾಯಕ್ಕೆ ಸಿಲುಕಿಸಿದೆ ಮತ್ತು ಅಮೆರಿಕದ ಆಡಳಿತವು ಮಿತ್ರರಾಷ್ಟ್ರವನ್ನು ಸಮಾಧಾನಪಡಿಸುವ ಬದಲು ಅವರ ಯುದ್ಧದಲ್ಲಿ ತಾನೇ ಭಾಗಿಯಾಗುತ್ತಿರುವುದು ಒಪ್ಪುವಂಥದ್ದಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​2024ರಲ್ಲಿ ಮರುಆಯ್ಕೆ ಬಯಸಿ ಪ್ರಚಾರ ಮಾಡುವಾಗ, ತಾನು ಯಾವುದೇ ಹೊಸ ಯುದ್ಧಗಳನ್ನು ಪ್ರಾರಂಭಿಸುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದರು. ಆದರೆ, ಇದೀಗ ಹತ್ತಾರು ಸಾವಿರ ಅಮೆರಿಕನ್ ಯೋಧರನ್ನು ಮಧ್ಯಪ್ರಾಚ್ಯದಲ್ಲಿ ನಿಯೋಜಿಸಲಾಗಿದೆ. ಅಮೆರಿಕದ ಜನರು ಇರಾನ್ ವಿರುದ್ಧದ ಯುದ್ಧವನ್ನು ಒಪ್ಪುತ್ತಿಲ್ಲ ಎಂಬುದನ್ನು ಇತ್ತೀಚಿನ ಸಮೀಕ್ಷೆಗಳು ದೃಢಪಡಿಸಿವೆ. ಈಗಾಗಲೇ ಆರು ಅಮೆರಿಕನ್ ಯೋಧರು ಪ್ರಾಣ ಕಳೆದುಕೊಂಡಿದ್ದು, ಅವರ ಪ್ರಾಣವನ್ನು ಏಕೆ ಪಣಕ್ಕಿಡಲಾಗುತ್ತಿದೆ ಎಂಬುದಕ್ಕೆ ಆಡಳಿತದಿಂದ ಸ್ಪಷ್ಟ ವಿವರಣೆ ಸಿಕ್ಕಿಲ್ಲ. ಈ ಬಗ್ಗೆ ಅಮೆರಿಕದ ಜನತೆಗೆ ತ್ವರಿತವಾಗಿ ಸರಿಯಾದ ಸಮರ್ಥನೆ ನೀಡದಿದ್ದರೆ, ಇದು ಅಧ್ಯಕ್ಷ ಟ್ರಂಪ್ ಅವರಿಗೆ ಮುಂದಿನ ದಿನಗಳಲ್ಲಿ ದೊಡ್ಡ ರಾಜಕೀಯ ಹೊಡೆತವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ವಾಷಿಂಗ್ಟನ್‌ನಿಂದ ರೊಸಾಲಿಂಡ್ ಜೋರ್ಡಾನ್ ವರದಿ ಮಾಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂದು ಬೆಂಬಲ, ಇಂದು ಪಶ್ಚಾತಾಪ: 2023ರ ಚುನಾವಣಾ ಆಯುಕ್ತರ ಕಾಯ್ದೆಗೆ ಬೆಂಬಲ ನೀಡಿ ತಪ್ಪು ಮಾಡಿದೆ ಎಂದ ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶದ ರಾಜಕಾರಣದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆ ನಡೆದಿದೆ. ಮಾಜಿ...

ಯಾದಗಿರಿ | ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಯುವಜನರು ಪ್ರಜಾಪ್ರಭುತ್ವದ ಆಶಯಗಳು ಹಾಗೂ ಸಂವಿಧಾನದ ಮೌಲ್ಯಗಳನ್ನು ಅರಿತುಕೊಂಡು ಅವುಗಳನ್ನು ತಮ್ಮ...

ಬೀದರ್‌ | ಅ.20ರಂದು ರೇಕುಳಗಿಯಲ್ಲಿ 70ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ

ಬೀದರ್ ತಾಲ್ಲೂಕಿನ ರೇಕುಳಗಿ ಗ್ರಾಮದ ಧಮ್ಮಾಂಕುರ ಮೌಂಟ್‌ನ ಅನಾಥ ಪಿಂಡಕ ಬುದ್ಧ...

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ ಸ್ಥಾನ?

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು...