ಜೋರ್ಡನ್, ಬಹ್ರೇನ್, ಕತಾರ್, ರಿಯಾದ್, ಯುಎಇ ಮೇಲೇಕೆ ದಾಳಿ ನಡೆಸಿದೆ ಇರಾನ್!

Date:

ಅಮೆರಿಕ -ಇಸ್ರೇಲ್ ದಾಳಿಗೆ ಪ್ರತಿಯಾಗಿ ಅರಬ್ ದೇಶಗಳ ಮೇಲೇಕೆ ದಾಲಿ ನಡೆಸಿದೆ ಇರಾನ್? ಈ ದಾಳಿಯ ಮರ್ಮವೇನು ತಿಳಿಯೋಣ ಬನ್ನಿ.

- Advertisement -

ಇರಾನ್ ಸುತ್ತಮುತ್ತ ಅಮೆರಿಕದ ಭಾರೀ ಮಿಲಿಟರಿ ಜಮಾವಣೆಯು ಗಲ್ಫ್ ರಾಷ್ಟ್ರಗಳ ಸುತ್ತ ಉಲ್ಬಣಗೊಳ್ಳುತ್ತಿರುವ ಗಂಭೀರ ಪರಿಸ್ಥಿತಿಯತ್ತ ಕೈ ಮಾಡಿತ್ತು. ಒಂದು ನಿರ್ದಿಷ್ಟ ಹಂತದ ನಂತರ ದೊಡ್ಡ ಪ್ರಮಾಣದಲ್ಲಿ ಸೈನಿಕ ಸಂಪನ್ಮೂಲಗಳು, ಯುದ್ಧೋಪಕರಣಗಳು, ನೌಕಾಪಡೆ, ವಾಯುಪಡೆ ಹಾಗೂ ಕ್ಷಿಪಣಿ ವ್ಯವಸ್ಥೆಗಳು ಒಂದು ಪ್ರದೇಶದಲ್ಲಿ ಜಮೆಯಾಗಿದೆಯೆಂದರೆ, ಅದು ‘ಹಿಂತಿರುಗಲಾರದ ಹಂತ’ವನ್ನು ತಲುಪುತ್ತದೆ. ಆ ಮಟ್ಟದ ಸಿದ್ಧತೆಯ ನಂತರ ಯುದ್ಧವನ್ನು ತಪ್ಪಿಸುವುದು ಬಹುತೇಕ ಅಸಾಧ್ಯ. ಸೇನಾ ಕಾರ್ಯಾಚರಣೆಗಳ ಚರಿತ್ರೆಯಿಂದ ಹೊಮ್ಮುವ ಈ ಪ್ರಮುಖ ತತ್ವ ಇದೀಗ ನಿಜವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಅಮೆರಿಕ ಮತ್ತು ಇಸ್ರೇಲ್‌ ಏಕ ಕಾಲಕ್ಕೆ ಲೆಬನಾನ್‌, ಯೆಮನ್‌, ಇರಾಕ್‌ ಹಾಗೂ ಮುಖ್ಯವಾಗಿ ಇರಾನ್‌ ಮೆಲೆ ದಾಳಿ ಮಾಡಲು ಯೋಜನೆ ರೂಪಿಸಿದ್ದವು. ಇದೇ ಸಂದರ್ಭದಲ್ಲಿ, ಇರಾನ್ ದೇಶವು ಯುನೈಟೆಡ್ ಅರಬ್‌ ಎಮಿರೇಟ್ಸ್‌, ಜೋರ್ಡನ್‌, ಬಹ್ರೇನ್‌ ಹಾಗೂ ಕತಾರ್ ಮೇಲೆ ದಾಳಿಯನ್ನು ಯೋಜಿಸುತ್ತಿತ್ತು. ಕೆಲವು ಅರಬ್ ರಾಷ್ಟ್ರಗಳು ಸ್ವತಃ ಇರಾನ್‌ಗೆ ಯುಎಇ (UAE) ಯನ್ನು ಗುರಿಯಾಗಿಸಲು ಪ್ರಚೋದಿಸಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಇದು ಆ ಪ್ರದೇಶದ ಒಳರಾಜಕೀಯ ವೈಷಮ್ಯ ಮತ್ತು ಭಿನ್ನಾಭಿಪ್ರಾಯಗಳನ್ನು ತೋರಿಸುತ್ತದೆ.

ಇತ್ತೀಚಿಗಷ್ಟೆ, ಸೌದಿ ಅರೇಬಿಯಾ ಮಾತ್ತು ಯುಎಇ ನಡುವೆ ತೀವ್ರ ಸ್ವರೂಪದ ಬಿಕ್ಕಟ್ಟು ಏರ್ಪಟ್ಟಿತ್ತು. ಬಹ್ರೇನ್‌ನಲ್ಲಿ ಅಮೇರಿಕಾದ Fifth Fleet ಮತ್ತು ಬ್ರಿಟಿಷ್ ನೌಕಾಪಡೆಯ ಪ್ರಮುಖ ನೆಲೆಗಳಿವೆ. ಅಮೆರಿಕಾದ ಸೆಂಟ್ರಲ್‌ ಕಮಾಂಡ್‌ ಮಾತ್ತು ಅಮೆರಿಕದ ಅತಿದೊಡ್ಡ ಮಿಲಿಟರಿ ನೆಲೆ ಕತಾರ್ ನ ಅಲ್-ಉದಿದ್‌. ಬಹ್ರೇನ್ ಮಾತ್ತು ಕತಾರ್ ಪಶ್ಚಿಮ ರಾಷ್ಟ್ರಗಳಿಗೆ ಅತ್ಯಂತ ಪ್ರಮುಖ ಮಿಲಿಟರಿ ನೆಲೆಗಳು. ಇನ್ನೊಂದು ಪ್ರಮುಖ ದೇಶ ಜೋರ್ಡನ್. ಪ್ಯಾಲೆಸ್ತೀನ್‌ ಸಮಸ್ಯೆಯ ಹಿನ್ನೆಲೆಯಲ್ಲಿ ಜೋರ್ಡನ್‌ನ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ ಮಾತ್ತು ಇಲ್ಲಿ ಯುದ್ಧೋಪಕರಣಗಳು, ವಾಯುಪಡೆ ದೊಡ್ಡ ಪ್ರಮಾಣದಲ್ಲಿ ನಿಯುಕ್ತಿಗೊಂಡಿದ್ದವು. ಈ ಎಲ್ಲ ಅಂಶಗಳು ಸೇರಿ, ಗಲ್ಫ್ ಮತ್ತು ಮಧ್ಯಪ್ರಾಚ್ಯದಲ್ಲಿ ಸಂಭವಿಸಬಹುದಾದ ಯಾವುದೇ ಯುದ್ಧ ಅಥವಾ ಸಂಘರ್ಷವು ಕೇವಲ ಎರಡು ದೇಶಗಳ ನಡುವೆ ಸೀಮಿತವಾಗದೇ, ಸಂಪೂರ್ಣ ಪ್ರದೇಶವನ್ನು ಒಳಗೊಂಡ ದೊಡ್ಡ ಪ್ರಾದೇಶಿಕ ಸಂಘರ್ಷವಾಗಿ ವಿಸ್ತರಿಸುವ ಸಾಧ್ಯತೆಯನ್ನು ಸೂಚಿಸಿದ್ದವು.

ಈ ಲೇಖನ ಓದಿದ್ದೀರಾ?: ಎಪ್‌ಸ್ಟೀನ್‌ ಪ್ರಕರಣ: ಟ್ರಂಪ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕಡತಗಳೇ ನಾಪತ್ತೆ

ಬಲಿಷ್ಠ ಶತ್ರುವನ್ನು ದೀರ್ಘಕಾಲ ದುರ್ಬಲಗೊಳಿಸುವ ಪರೋಕ್ಷ ಮತ್ತು ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಣಾಮಕಾರಿ ಸವಾಲು ಒಡ್ಡುವ ಯುದ್ಧನೀತಿಯನ್ನು ಇರಾನ್ ಅವಲಂಬಿಸಿದೆ. ಮುಖ್ಯವಾಗಿ ‘ವಿಶ್ವದ ತೈಲ ಜೀವನಾಡಿ’ ಎಂದು ಕರೆಲ್ಪಡುವ, ವಿಶ್ವದ 20% ರಿಂದ 30% ರಷ್ಟು ಕಚ್ಚಾ ತೈಲ ಹಾದು ಹೋಗುವ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣ ಬಂದ್‌ ಮಾಡಲು ನಮಗೆ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದು ಎಚ್ಚರಿಕೆ ಕೊಡುತ್ತಲೇ ಬಂದಿದೆ.

ಈಗಾಗಲೆ, ಕೆಂಪು ಸಮುದ್ರದ ಮೆಲೆ ಗಾಝಾ ನರಮೇದದ ವಿರುದ್ದ ಯೆಮನ್‌ನ ಹೌತಿ (Houthi) ಪಡೆಗಳು ಹಾಕಿರುವ ನಿರ್ಬಂಧದಿಂದ ತ್ತತ್ತರಿಸಿಹೋಗಿರುವ ಜಾಗತಿಕ ವ್ಯಾಪಾರ, ಜಾಗತಿಕ ತೈಲ ಸಾಗಣೆ ಮತ್ತು ವಾಣಿಜ್ಯ ಇನ್ನಷ್ಟು ಬಿಕ್ಕಟ್ಟು ಎದುರಿಸಲಿವೆ. ಅನೇಕ ಹಡಗುಗಳು ಕೆಂಪು ಸಮುದ್ರದ ಮಾರ್ಗವನ್ನು ತಪ್ಪಿಸಿ, ಆಫ್ರಿಕಾದ ದಕ್ಷಿಣ ತುದಿಯಾದ ಕೇಪ್ ಆಫ್ ಗುಡ್ ಹೋಪ್ ಮೂಲಕ ದೀರ್ಘ ಮಾರ್ಗವನ್ನು ಬಳಸಲು ಪ್ರಾರಂಭಿಸಿವೆ. ಇದರಿಂದ ಸಾಗಣೆ ವೆಚ್ಚ ಹೆಚ್ಚಾಗಿದೆ ಮತ್ತು ಸರಕು ಸಾಗಣೆಯಲ್ಲಿ ವಿಳಂಬ ಉಂಟಾಗಿದೆ.

ಒಟ್ಟಾರೆ, ಈ ಮಿಲಿಟರಿ ಬಿಲ್ಡಪ್ ಪ್ರಾದೇಶಿಕ ಮತ್ತು ಜಾಗತಿಕ ರಾಜಕೀಯದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯನ್ನು ಹೊಂದಿದೆ. ನೊರು ವರ್ಷಗಳ ಹಿಂದೆ ಬ್ರಿಟನ್‌ ಮತ್ತು ಫ್ರಾನ್ಸ್‌ ವಸಾಹುತುಗಳು ಎಳೆದ್ದಿದ್ದ ರಾಷ್ಟ್ರೀಯ ಗಡಿ ರೇಖೆಗಳು ಮತ್ತೊಮ್ಮೆ ಬದಲಾವಣೆಗೆ ಸಿದ್ದವಾಗುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಟಾರ್ಕ್ಟಿಕದಲ್ಲಿ ಪೆಂಗ್ವಿನ್ ಎಣಿಸುವ ಅಪರೂಪದ ಉದ್ಯೋಗ: ಲಕ್ಷಗಳ ಸಂಭಾವನೆ, ಹೇಗಿರುತ್ತದೆ ಹಿಮದ ನಾಡಿನ ಬದುಕು?

ಜನಜಂಗುಳಿ, ಟ್ರಾಫಿಕ್ ಕಿರಿಕಿರಿ ಹಾಗೂ ದೈನಂದಿನ ಯಾಂತ್ರಿಕ ಬದುಕಿನಿಂದ ದೂರ ಸರಿದು,...

ಯಮೆನ್ ರಾಷ್ಟ್ರಪತಿ ಭವನದ ಮೇಲೆ ಹೂತಿಗಳ ಕ್ಷಿಪಣಿ ದಾಳಿ: ಐವರ ಸಾವು

ಯಮೆನ್‌ನ ದಕ್ಷಿಣ ಭಾಗದ ಪ್ರಮುಖ ನಗರವಾದ ಅದನ್‌ನಲ್ಲಿರುವ ಅಲ್-ಮಾಶಿಕ್ ರಾಷ್ಟ್ರಪತಿ ಭವನದ...

ಭಾರತದ ಮೇಲೆ ಶೇ.100 ಸುಂಕ: 10 ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅಂತಿಮ ತೀರ್ಮಾನ!

ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಶೇ. 100ರಷ್ಟು ಭಾರಿ ಆಮದು...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ – ಜಯಂತ್‌ ಪರ್ಮಾರ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ...