2023ರ ತೆಲಂಗಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಸದ್ಯ ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದು, ಇದೀಗ ಚಾರ್ಮಿನಾರ್ ಕ್ಷೇತ್ರದಲ್ಲಿ ಓವೈಸಿ ಅವರ ಎಐಎಂಐಎಂ ಅಭ್ಯರ್ಥಿ ಜುಲ್ಫಿಕರ್ ಅಲಿ ಗೆಲುವು ಸಾಧಿಸಿದ್ದಾರೆ.
ಸದ್ಯ ತೆಲಂಗಾಣದಲ್ಲಿ ಕಾಂಗ್ರೆಸ್ 71 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, 3 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಆರ್‌ಎಸ್ 36 ಸ್ಥಾನಗಳಲ್ಲಿ ಮುನ್ನುಗ್ಗುತ್ತಿದೆ.
ಕಾಂಗ್ರೆಸ್ ಗೆಲುವು
119 ಕ್ಷೇತ್ರಗಳ ಪೈಕಿ ಮ್ಯಾಜಿಕ್ ನಂಬರ್ ದಾಟಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್, ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಅಶ್ವರಾವ್ ಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆದಿನಾರಾಯಣ ಗೆಲುವು ಸಾಧಿಸಿದ್ದಾರೆ. ಖಮ್ಮಂ ಜಿಲ್ಲೆಯ ಅಶ್ವರಾವ್ ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜೇರಿ ಆದಿನಾರಾಯಣ 28,000 ಬಹುಮತದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಅವರು ಪ್ರತಿಸ್ಪರ್ಧಿ ಬಿಆರ್‌ಎಸ್ ಅಭ್ಯರ್ಥಿ ಮೆಚ್ಚಾ ನಾಗೇಶ್ವರ ರಾವ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ; ಅಶ್ವರಾವ್ ಪೇಟೆಯಲ್ಲಿ ಆದಿನಾರಾಯಣ ಗೆಲುವು
ಮೇಚಾ ನಾಗೇಶ್ವರ ರಾವ್ 2018ರ ಚುನಾವಣೆಯಲ್ಲಿ ಟಿಡಿಪಿಯಿಂದ ಗೆದ್ದಿದ್ದರು. ನಂತರ ಅವರು ಬಿಆರ್‌ಎಸ್ ಸೇರಿದರು. ಹಾಲಿ ಶಾಸಕರಾಗಿರುವ ಅವರಿಗೆ ಬಿಆರ್‌ಎಸ್ ಟಿಕೆಟ್ ನೀಡಿತ್ತು. ಕಾಂಗ್ರೆಸ್ ಪಕ್ಷ ಜಾರೆ ಆದಿನಾರಾಯಣ ಅವರಿಗೆ ಟಿಕೆಟ್ ನೀಡಿತ್ತು. ಈ ಸ್ಥಾನದಲ್ಲಿ ಸಿಪಿಐ ಅಭ್ಯರ್ಥಿಗೆ ಮೂರನೇ ಸ್ಥಾನ ಸಿಕ್ಕಿದೆ.
ಇಲ್ಲಾಂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು
ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಂದು ಸ್ಥಾನ ಗೆದ್ದಿದೆ. ಇಲ್ಲಾಂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೋರಂ ಕನಕಯ್ಯ ಅವರು ಬಿಆರ್‌ಎಸ್ ಅಭ್ಯರ್ಥಿ ಹರಿಪ್ರಿಯಾ ವಿರುದ್ಧ 38 ಸಾವಿರ ಭಾರೀ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.
ರಾಮಗುಂಡಂನಲ್ಲಿ ಕಾಂಗ್ರೆಸ್ ಗೆಲುವು
ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಸತತ ಮೂರು ಸ್ಥಾನಗಳನ್ನು ಗೆದ್ದಿದೆ. ರಾಮಗುಂಡಂ ಹಾಗೂ ಅಶ್ವರಾವ್‌ಪೇಟೆ, ಇಲ್ಲಾಂಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ರಾಮಗುಂಡಂ ಕಾಂಗ್ರೆಸ್ ಅಭ್ಯರ್ಥಿ ರಾಜ್ ಠಾಕೂರ್ ಬಿಆರ್ ಎಸ್ ಅಭ್ಯರ್ಥಿ ಚಂದರ್ ವಿರುದ್ಧ ಜಯಗಳಿಸಿದ್ದಾರೆ.
ಭದ್ರಾಚಲಂನಲ್ಲಿ ಬಿಆರ್‌ಎಸ್ ಗೆಲುವು
ಭದ್ರಾಚಲಂ ಕ್ಷೇತ್ರದಲ್ಲಿ ಬಿಆರ್‌ಎಸ್ ಪಕ್ಷದ ಶಾಸಕ ಡಾ.ತೆಲ್ಲಂ ವೆಂಕಟರಾವ್ ಅವರು 4466 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಕಾಮರೆಡ್ಡಿಯಲ್ಲಿ ರೇವಂತ್ ರೆಡ್ಡಿ ಮುನ್ನಡೆ
ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿದಿದೆ. ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ರೇವಂತ್ ರೆಡ್ಡಿ ಮುನ್ನಡೆಯಲ್ಲಿದ್ದಾರೆ. 8 ಸುತ್ತುಗಳ ಅಂತ್ಯಕ್ಕೆ ರೇವಂತ್ ರೆಡ್ಡಿ 26,437 ಮತಗಳನ್ನು ಪಡೆದರೆ, ಸಿಎಂ ಕೆಸಿಆರ್ 24,091 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗೆ 23,802 ಮತಗಳು. ಇದರೊಂದಿಗೆ ರೇವಂತ್ ರೆಡ್ಡಿ 2346 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಪೋಚಾರಂ 8,632 ಮತಗಳ ಮುನ್ನಡೆ
ಕಾಮರೆಡ್ಡಿ ಜಿಲ್ಲೆಯ ಬಾನ್ಸವಾಡ ಕ್ಷೇತ್ರದಲ್ಲಿ ಬಿಆರ್‌ಎಸ್ ಮುನ್ನಡೆ ಸಾಧಿಸಿದೆ. ಬಿಆರ್‌ಎಸ್ ಅಭ್ಯರ್ಥಿ ಪೋಚಾರಂ ಶ್ರೀನಿವಾಸ್ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿ ಏಣುಗು ರವೀಂದರ್ ರೆಡ್ಡಿ ಅವರಿಗಿಂತ 8,632 ಮತಗಳ ಬಹುಮತದಿಂದ ಮುನ್ನಡೆ ಸಾಧಿಸಿದ್ದಾರೆ.