ಬೀದರ್ ಜಿಲ್ಲೆಯ ಕಮಲನಗರ ತಾಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ವ್ಯವಸ್ಥೆ ಪರಿವರ್ತನೆ ವೇದಿಕೆ ತಾಲೂಕು ಘಟಕ ಆಗ್ರಹಿಸಿದೆ.
ಈ ಕುರಿತು ವೇದಿಕೆಯ ತಾಲೂಕಾಧ್ಯಕ್ಷ ವೈಜಿನಾಥ ವಡ್ಡೆ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಕಮಲನಗರ ತಹಶೀಲ್ದಾರ್ ಅಮೀತಕುಮಾರ ಕುಲಕರ್ಣಿ ಅವರಿಗೆ ಸಲ್ಲಿಸಿದರು.
ಕಮಲನಗರ ನೂತನ ತಾಲೂಕು ಘೋಷಣೆಯಾಗಿ ಐದಾರು ವರ್ಷಗಳು ಕಳೆದಿವೆ, ಆದರೂ ತಾಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿಲ್ಲ. ಮೊದಲೇ ಬೆಲೆ ಏರಿಕೆಯಿಂದಾಗಿ ಬಡ, ನಿರ್ಗತಿಕ, ಕೂಲಿಕಾರರು ತತ್ತರಿಸಿದ್ದಾರೆ. ಆದರೆ, ರಿಯಾಯಿತಿ ದರದಲ್ಲಿ ಉಪಾಹಾರ ನೀಡುವ ರಾಜ್ಯ ಸರ್ಕಾರದ ಮಹತ್ವದ ಯೋಜನೆ ತಾಲೂಕಿನ ಜನರಿಗೂ ” ಎಂದು ಆಗ್ರಹಿಸಿದರು.
ತಾಲೂಕಿನ ನೂರಾರು ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಅನ್ಯ ಪಟ್ಟಣ, ಗ್ರಾಮಗಳಿಗೆ ತೆರಳುತ್ತಾರೆ. ಬೇರೆ ಬೇರೆ ಗ್ರಾಮಗಳಿಂದ ಕಮಲನಗರದ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುತ್ತಾರೆ. ಎಲ್ಲರಿಗೂ ಹೋಟೆಲ್ ಗಳಲ್ಲಿ ದುಬಾರಿ ದರದ ಊಟ ಮಾಡುವ ಸಾಮರ್ಥ್ಯ ಇರಲ್ಲ. ಆದ್ದರಿಂದ ಕಡುಬಡವರಿಗೆ ಉಪಯುಕ್ತವಾಗಲೆಂದು ಜಾರಿಗೊಳಿಸಿದ ಇಂದಿರಾ ಕ್ಯಾಂಟೀನ್ ಯೋಜನೆ ಕಮಲನಗರದಲ್ಲಿ ಆರಂಭಿಸಿ ಬಡವರ ಹೊಟ್ಟೆ ತಣಿಸಬೇಕೆಂದು” ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ: ಗೆಲ್ಲುವ ಅವಕಾಶ ಕೈಚೆಲ್ಲಿದ ಕಾಂಗ್ರೆಸ್
ಈ ಸಂದರ್ಭದಲ್ಲಿ ಭೀಮರಾವ ಕಣಜೆ, ಪ್ರವೀಣ ಕುಲಕರ್ಣಿ ಸೇರಿದಂತೆ ಇತರರಿದ್ದರು.
ವರದಿ : ಜನಾರ್ಧನ ಸಾವರ್ಗೆಕರ್