ಯಾದಗಿರಿ | ಕೋಲಿ ಸಮಾಜ ಎಸ್‌ಟಿಗೆ ಸೇರ್ಪಡೆಯಾಗದೇ ಇರಲು ರಾಜ್ಯ ಕೇಂದ್ರ ಸರ್ಕಾರಗಳೇ ಕಾರಣ; ಉಮೇಶ ಮುದ್ನಾಳ್‌ ಆರೋಪ

Date:

Advertisements

ಸಮಾಜದ ಅಭಿವೃದ್ಧಿಗೆ ತಮ್ಮ ಜೀವಮಾನವನ್ನೇ ಅರ್ಪಣೆ ಮಾಡಿದ ವಿಠಲ್ ಹೇರೂರು ಅವರ ಹೆಸರನ್ನು ಉಳಿಸಬೇಕಾಗಿದೆ. ಹಿಂದುಳಿದ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್‌ಟಿ)ಗಳಿಗೆ ಸೇರ್ಪಡೆ ಪ್ರಮುಖ ಬೇಡಿಕೆಯಾಗಿದ್ದು, ಇದಕ್ಕಾಗಿ ಹಗಲಿರುಳು ಶ್ರಮಿಸಿ ತಮ್ಮ ಜೀವನವನ್ನೇ ಸವೆಸಿದ ಧೀಮಂತ ನಾಯಕರು ವಿಠಲ್ ಹೇರೂರು ಎಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಹೇಳಿದರು.

ಯಾದಗಿರಿ ನಗರದ ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯ ಸಚೇತಕ್ ದಿ. ವಿಠಲ್ ಹೇರೂರು‌ ಅವರ 10ನೇ ಪುಣ್ಯ ಸ್ಮರಣೆ ವೇಳೆ ಮಾತನಾಡಿದರು.

“ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೋಲಿ ಸಮಾಜ ಸ್ಪಂದನೆ ನೀಡದೇ ಇರುವುದರಿಂದ ಈವರೆಗೆ ಹೇರೂರು ಅವರ ಆಸೆ ಈಡೇರದಂತಾಗಿದೆ” ಎಂದರು.

Advertisements

“ಕೆಲವು ರಾಜಕಾರಣಿಗಳು ಕುತಂತ್ರದಿಂದ ನಮ್ಮ ಸಮುದಾಯ ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮುಂದೆ ಬಾರದಂತಾಗಿದೆ. ಆದರೆ ಸ್ವಾತಂತ್ರ್ಯ ನಂತರ ಇಂದಿಗೂ ವೋಟ್ ಬ್ಯಾಂಕ್ ಆಗಿ ನಮ್ಮನ್ನು ಬಳಸಿಕೊಂಡಿದ್ದಾರೆ. ಸೌಲಭ್ಯ ನೀಡಲು, ಸಮಾಜಿಕ ನ್ಯಾಯ ಕೊಡುವಲ್ಲಿ ವಿಫಲರಾಗಿದ್ದಾರೆ” ಎಂದು ಆರೋಪಿಸಿದರು.

“ಅಂಬಿಗರ ಚೌಡಯ್ಯನವರನ್ನು ರಾಜ್ಯದ ಎಲ್ಲ ಕಡೆ ಪರಿಚಯಿಸಿದ ಮಹಾನ್ ಧೀಮಂತ  ಪುರುಷರಾಗಿದ್ದು, ಪ್ರತಿಯೊಬ್ಬರೂ ಇವರ ಸ್ಮರಣೆ ಮಾಡಬೇಕು. ಇವರಿಂದಾಗಿ ಜಯಂತ್ಯೋತ್ಸವ ಆಯಿತು. ಚೌಡಯ್ಯ ನಿಗಮ ಆಗಲು ಇವರು ಕಾರಣಕರ್ತರಾಗಿದ್ದಾರೆ. ಹಾವೇರಿಯಲ್ಲಿ ಅಂಬಿಗರ ಚೌಡಯ್ಯ ಪೀಠ ಆಗಲು ಇವರು ಕಾರಣಕರ್ತರಾಗಿದ್ದಾರೆ” ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ಮೋದಿ ಸೆಲ್ಫಿ ಪಾಯಿಂಟ್ ಸ್ಥಾಪನೆಗೆ ಯುಜಿಸಿ ಸೂಚನೆ; ಎಐಡಿಎಸ್ಒ ಆಕ್ಷೇಪ

ಈ ಸಂದರ್ಭದಲ್ಲಿ ಬಸವರಾಜ ಇಟಗಿ ವಡಗೇರಿ, ಯಲ್ಲಪ್ಪ ವಂಟೂರ, ಬನ್ನಯ್ಯ ಸ್ವಾಮಿ ಯರಗೋಳ, ಶಹಾಪೂರ ಎಪಿಎಂಸಿ ಅದ್ಯಕ್ಷ ಅಯ್ಯಣ್ಣ ಹಾಲಗೇರಿ, ಆಂಜಿನೇಯ ಬೆಳಗೇರಿ, ಬಾಬುಖಾನ್ ಹೊಸಳ್ಳಿ, ರಫೀಕ್ ಪಟೇಲ್, ಬನ್ನಪ್ಪ, ಸುನಿಲ್ ಕುಮಾರ, ಶರಣಪ್ಪ ಉಳ್ಳೆಸುಗೂರ, ಮಲ್ಲಿಕಾರ್ಜುನ ಅರಿಕೇರಿ, ಯಲ್ಲಾಲಿಂಗ ಚಾಮನಳ್ಳಿ, ಕಾಶಿನಾಥ ಕೆ ಎಸ್. ಲಕ್ಷಣ, ಭೀಮರಾಯ, ಲಿಂಗಪ್ಪ ಸಣ್ಣ ಶಿವಪ್ಪ, ಗುಂಜಲಪ್ಪ, ಶಿವರಾಜ, ನಿಂಗಪ್ಪ, ತಿಮಮಣ್ಣ ನಾಗಪ್ಪ, ಮಾದೇವಪ್ಪ, ಗುರುನಾಥ, ತಿಮ್ಮಣ್ಣ ದಳಪತಿ, ದೇವಿಂದ್ರಪ್ಪ, ಬಸವರಾಜ ಹೋರುಂಚಿ, ಕೋಟೇಶ, ಶರಣು, ಭೀಮರಾಯ, ವಿಶ್ವನಾಥ, ದೇವಿಂದ್ರ, ಶರಣಪ್ಪ, ಅಶೋಕ, ರಡ್ಡಿ ಜಮಾಲ್, ರಫೀ, ಮಿಸ್ಕಿನ್, ಬನಶಂಕರ, ಅಜೀಜ್, ಅರುಣ, ಅಂಬ್ರೆಸ್ ತಿಮ್ಮಣ್ಣ ಖಾನಾಪೂರ ಸೇರಿದಂತೆ ಸಮಾಜದ ಹಿರಿಯುರು, ಯುವಕರು ವಿಠಲ್ ಹೇರೂರ ಅವರ ಅಭಿಮಾನಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X