ವಿಶೇಷಚೇತನರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಅನೇಕ ಯೋಜನೆಗಳು ಅಧಿಕಾರಿಗಳ ನಿರ್ಲಕ್ಷದಿಂದ ನಿಷ್ಪಲವಾಗುವಂತಾಗಿದೆ. ರಾಯಚೂರು ಜಿಲ್ಲೆಯಲ್ಲಿ ವಿಶೇಷಚೇತರಿಗೆ ನೀಡಲು ಉದ್ದೇಶಿದಂ ತಂದಿದ್ದ ತ್ರಿಚಕ್ರವಾಹನಗಳು ಫಲಾನುಭವಿಗಳಿಗೆ ವಿತರಣೆಯಾಗದೆ ನಗರಸಭೆಯ ಗೋದಾಮಿನಲ್ಲೇ ಧೂಳು ಹಿಡಿಯುತ್ತಿದ್ದು, ನಿಂತಲ್ಲೇ ಕೆಟ್ಟುಹೋಗುವ ಸ್ಥಿತಿ ನಿರ್ಮಾಣವಾಗಿದೆ.
“ರಾಯಚೂರು ಜಿಲ್ಲಾ ಅಂಗವಿಕಲರ ಯೋಜನೆಗಳ ಜಾರಿಗೆ ಪ್ರತ್ಯೇಕ ಇಲಾಖೆ ಅಸ್ತಿತ್ವಕ್ಕೆ ತರಲಾಗಿದೆ. ಆದರೆ ಅನೇಕ ಯೋಜನೆಗಳು ಅರ್ಹರಿಗೆ ತಲುಪಿಲ್ಲ ಎಂಬುದಕ್ಕೆ ನಿದರ್ಶನವೆಂಬಂತೆ ಜಿಲ್ಲಾ ಪಂಚಾಯತ್ ಸಭಾಂಗಣದ ಕೆಳಮಹಡಿಯಲ್ಲಿ ಲಕ್ಷಾಂತರ ಮೌಲ್ಯದ ವಾಹನಗಳು ದಾಸ್ತಾನು ಸೇರಿವೆ” ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕೂಲಿಕಾರರ ಮಕ್ಕಳಿಗೆ ಆಸರೆಯಾದ ಸಾವಿತ್ರಿಬಾಯಿ ಫುಲೆ ಕಲಿಕಾ ಕೇಂದ್ರ
“ವಿಕಲಚೇತನ ದಿನಾಚರಣೆಯಂದು ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರದ ಸೌಲಭ್ಯ ಅರ್ಹರಿಗೆ ಒದಗಿಸುವುದಾಗಿ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಬಳಕೆಯಾಗದೇ ಉಳಿದರುವ ವಾಹನ ವಿಲೇವಾರಿಗೆ ಸಮಸ್ಯೆಯೇನು ಎಂಬದೇ ತಿಳಿಯದಾಗಿದೆ. ಸರ್ಕಾರ ಕೇವಲ ಅಂಕಿ ಆಂಶಗಳಲ್ಲಿಯೇ ವಿಕಲಚೇತನರಿಗೆ ಸೌಲಭ್ಯ ನೀಡುವುದಾಗಿ ಸುಳ್ಳು ಹೇಳುತ್ತಿರುವದು ನಿದರ್ಶನವಾಗಿದೆ” ಎಂದು ಆರೋಪಿಸಿದರು.
ವರದಿ : ಹಫೀಜುಲ್ಲ