ತೆಲಂಗಾಣದ ದುಂಡಿಗಲ್‌ನಲ್ಲಿರುವ ವಾಯುಪಡೆ ಸಂಸ್ಥೆಯ ತರಬೇತಿ ವಿಮಾನ ಅಪಘಾತಕ್ಕೀಡಾಗಿ ಪೈಲಟ್ ಹಾಗೂ ಪೈಲಟ್ ತರಬೇತುದಾರ ಸಾವನ್ನಪ್ಪಿದ್ದಾರೆ. ಪೈಲಟ್‌ಗಳಲ್ಲಿ ಒಬ್ಬ ಬೋಧಕ ಮತ್ತು ಒಬ್ಬ ಕೆಡೆಟ್ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಒಬ್ಬರು ಪೈಲಟ್ ಹಾಗೂ ಒಬ್ಬರು ಪೈಲಟ್ ತರಬೇತುದಾರರು ಇದ್ದ ವಾಯುಪಡೆ ಅಕಾಡಮಿಯ ತರಬೇತಿ Pilatus PC 7 Mk Il ವಿಮಾನ ಹೈದರಾಬಾದ್‌ನಲ್ಲಿ ಇಂದು ಬೆಳಗ್ಗೆ ದಿನನಿತ್ಯದ ತರಬೇತಿಯ ಸಮಯದಲ್ಲಿ ಅಪಘಾತಕ್ಕೀಡಾಗಿ ಇಬ್ಬರು ಮೃತಪಟ್ಟಿದ್ದಾರೆ” ಎಂದು ಭಾರತೀಯ ವಾಯುಪಡೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಮಿಜೋರಾಂ ಮತ ಎಣಿಕೆ: ಬಹುಮತದತ್ತ ಝೆಡ್‌ಪಿಎಂ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೈಲಟ್‌ಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. “ಹೈದರಾಬಾದ್ ಬಳಿ ನಡೆದ ಈ ಅಪಘಾತದಿಂದ ದುಃಖವಾಗಿದೆ. ಇಬ್ಬರು ಪೈಲಟ್‌ಗಳು ಪ್ರಾಣ ಕಳೆದುಕೊಂಡಿರುವುದು ತುಂಬಾ ದುಃಖಕರವಾಗಿದೆ. ಈ ದುರಂತ ಸಮಯದಲ್ಲಿ, ದುಃಖಿತ ಕುಟುಂಬಗಳೊಂದಿಗೆ ನಾವು ಇರಲಿದ್ದೇವೆ” ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಘಟನೆಯಿಂದ ಯಾವುದೇ ನಾಗರಿಕ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ. ಅಪಘಾತದ ಕಾರಣವನ್ನು ಪತ್ತೆ ಹಚ್ಚಲು ವಿಚಾರಣೆಗೆ ಆದೇಶಿಸಲಾಗಿದೆ.