ಬೈಸಿಕಲ್ ಬಳಸುವುದು ಆರೋಗ್ಯಕ್ಕೂ, ಪರಿಸರಕ್ಕೂ ಒಳ್ಳೆಯದು ಎಂದಿರುವ ಬೀದಿರ್ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೋಮವಾರ ತಮ್ಮ ಕಚೇರಿಗಳಿಗೆ ಬೈಸಿಕಲ್‌ನಲ್ಲಿ ತೆರಳಿದ್ದಾರೆ. ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಬೀದರ್‌ನ ಬಹಮನಿ ಕೋಟೆಯ ಬಳಿ ಇರುವ ತಮ್ಮ ನಿವಾಸಗಳಿಂದ ತಮ್ಮ ಕಚೇರಿಗಳಿಗೆ ಇಬ್ಬರು ಅಧಿಕಾರಿಗಳೂ ಬೈಸಿಕಲ್‌ನಲ್ಲಿ ಹೋಗಿದ್ದಾರೆ. ಅವರು ಬೈಸಿಕಲ್ ತುಳಿಯುತ್ತಿದ್ದುದ್ದನ್ನು ಕಂಡು ಸಾರ್ವಜನಿಕರು ಆಶ್ಚರ್ಯದಿಂದ ನೋಡಿದ್ದಾರೆ.
“ಬೈಸಿಕಲ್ ಬಳಸುವುದರಿಮದ ಆರೋಗ್ಯ ಉತ್ತಮವಾಗಿರುತ್ತದೆ. ಪರಿಸರಕ್ಕೂ ಒಳ್ಳೆಯದು. ಹೀಗಾಗಿ, ನಾನು ಮತ್ತು ಎಸ್‌ಪಿ ಅವರು ಬೈಸಿಕಲ್‌ನಲ್ಲಿ ಕಚೇರಿಗೆ ಬಂದಿದ್ದೇವೆ” ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದ್ದಾರೆ.
“ಪೋಷಕರು ತಮ್ಮ ಮಕ್ಕಳಿಗೆ ಬೈಕ್ ಕೊಡಿಸುವ ಬದಲು ಬೈಸಿಕಲ್ ಕೊಡಿಸಬೇಕು. ಇದರಿಂದ, ಅಪ್ರಾಪ್ತರಿಗೆ ಆಗುವ ಅಪಘಾತಗಳನ್ನು ತಪ್ಪಿಸಬಹುದು” ಎಂದಿದ್ದಾರೆ.
“ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬೈಸಿಕಲ್‌ಗಳನ್ನು ಉಪಯೋಗಿಸಬೇಕು. ಪೋಷಕರು ಕೂಡ ತಮ್ಮ ಮಕ್ಕಳಿಗೆ ಬೈಸಿಕಲ್‌ಗಳನ್ನೇ ಕೊಡಿಸಬೇಕು” ಎಂದು ಎಸ್‌ಪಿ ಚನ್ನಬಸವಣ್ಣ ಎಸ್.ಎಲ್ ಹೇಳಿದ್ದಾರೆ.