- ಯಡಿಯೂರಪ್ಪ, ವಿಜಯೇಂದ್ರ, ಯತ್ನಾಳ ಯಾರೇ ಭ್ರಷ್ಟಾಚಾರ ಮಾಡಿದ್ರೂ ತಪ್ಪು
- ಉಮೇಶ್ ಕಂಡಕ್ಟರ್ ಯಾರು ಅಂತ ಗೊತ್ತಿಲ್ವಾ? 2 ನೋಟ್ ಕೌಂಟಿಂಗ್ ಯಂತ್ರ ಸಿಕ್ಕಿದೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಪತ್ನಿಯ ಸಹೋದರನ ಮೇಲೆ ಲೋಕಾಯುಕ್ತ ದಾಳಿ ಮಾಡಿರುವ ಬಗ್ಗೆ ಬಸನಗೌಡ ಪಾಟೀಲ ಯತ್ನಾಳ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಯಡಿಯೂರಪ್ಪ, ವಿಜಯೇಂದ್ರ, ಯತ್ನಾಳ ಯಾರೇ ಭ್ರಷ್ಟಾಚಾರ ಮಾಡಿದ್ರೂ ತಪ್ಪು ತಪ್ಪೇ. ವಿಜಯೇಂದ್ರ ಹೆಸರನ್ನು ನನ್ನ ಬಾಯಲ್ಲಿ ಯಾಕೆ ಹೇಳಿಸುವ ಪ್ರಯತ್ನ ಮಾಡ್ತೀರಿ?” ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
“ಭ್ರಷ್ಟಾಚಾರವನ್ನು ಯಾವುದೇ ಪಕ್ಷದವರು ಮಾಡಿದರೂ ಕ್ರಮ ಆಗಬೇಕು. ಭ್ರಷ್ಟಾಚಾರ ಮಾಡಿದವರನ್ನೇ ನಾಯಕರನ್ನಾಗಿ ಮಾಡಿದರೆ ಪ್ರಾಮಾಣಿಕರು ಹೇಗೆ ಇರಲು ಸಾಧ್ಯ?” ಎಂದರು.
“ಉಮೇಶ್ ಕಂಡಕ್ಟರ್ ಯಾರು ಅಂತ ನಮಗೆ ಗೊತ್ತಿಲ್ವಾ? ಅವರ ಮನೆಯಲ್ಲಿ ಎರಡು ನೋಟ್ ಕೌಂಟಿಂಗ್ ಯಂತ್ರ ಸಿಕ್ಕಿದ್ದು ಗೊತ್ತಿಲ್ವಾ? ಅವನ ಬಳಿ ಸಾವಿರಾರು ಕೋಟಿ ಹೇಗೆ ಬಂತು? ಎರಡು ನೋಟು ಎಣಿಕೆ ಯಂತ್ರ
ಏಕಿತ್ತು?” ಎಂದು ಆಕ್ರೋಶ ವ್ಯಕ್ತಪಡಿಸಿದರು.
”ಕರ್ನಾಟಕವನ್ನು ಲೂಟಿ ಮಾಡಿ ಸಿಂಗಾಪುರ, ಮಾರಿಶಸ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಅದರ ಬಗ್ಗೆ ತನಿಖೆ ಆಗಬೇಕು. ಅವರನ್ನು ಜೈಲಿಗೆ ಹಾಕಬೇಕು. ಯಡಿಯೂರಪ್ಪ ಅಥವಾ ವಿಜಯೇಂದ್ರ ಎಂದು ಕೇಳಬೇಡಿ. ಸನ್ಮಾನ್ಯ ಡಿಕೆ ಶಿವಕುಮಾರ್ ಭ್ರಷ್ಟ ಇದ್ದರೂ ಭ್ರಷ್ಟರೇ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸಿನ ಚಳಿ ಬಿಡಿಸಲಿದೆಯೇ ಬಿಜೆಪಿ?
ವೀರಶೈವ ಮಹಾಸಭಾ ಕಾಂಗ್ರೆಸ್ ನವರದ್ದಾಗಿದೆ. ಅಲ್ಲಿರೋರು ಕಾಂಗ್ರೆಸ್ ನಲ್ಲಿರುವವರೇ, ಅದು ಸಮುದಾಯದ ಪರವಾಗಿ ಉಳಿದಿಲ್ಲ. ನಾವು ಸಮುದಾಯಕ್ಕೆ ಮೀಸಲಾತಿ ಕೊಡಿಸಿದ್ದೆವು, ಹೋರಾಟವನ್ನು ಮಾಡಿ ಮೀಸಲಾತಿ ಕೊಡಿಸಿದ್ದೆವು, ಇವರು ಹೋರಾಟ ಮಾಡಿ ಕೊಡಿಸಲಿ ನೋಡೋಣ” ಎಂದು ಸವಾಲು ಹಾಕಿದರು.
ಅಲ್ಪಸಂಖ್ಯಾತರಿಗೆ ಅನುದಾನ ಬಿಡುಗಡೆ ಮಾಡುವ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, “ಪಾಕಿಸ್ತಾನದವರ ಸರ್ಕಾರ ಬಂದಂತಾಗಿದೆ, ಇಂತಹ ಸರ್ಕಾರ, ಇದೇ ಉದ್ಧಟತನ ಮುಂದುವರಿಸಿದರೆ ಅತೀ ಹೆಚ್ಚು ಮತಗಳಿಂದ ಬಿಜೆಪಿ ಗೆಲ್ಲಲಿದೆ” ಎಂದರು.
”ಪೊಲೀಸರು ಕಾಂಗ್ರೆಸ್ ನವರ ಕೈಗೊಂಬೆಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ್ರೆ ಕರ್ನಾಟಕ ಪಾಕಿಸ್ತಾನ ಆಗುತ್ತದೆ. ಇದುವರೆಗೆ ತಪ್ಪಿತಸ್ಥರನ್ನ ಬಂಧಿಸಿಲ್ಲ. ದೆಹಲಿಯಲ್ಲೊಬ್ರು ಮೇಡಮ್, ಬೆಳಗಾವಿಯಲ್ಲೊಬ್ರು ಮೇಡಮ್ ಇದ್ದಾರೆ. ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲೆ ಹಲ್ಲೆ ನಡೆದಿದೆ. ಇಷ್ಟೆಲ್ಲಾ ದಾಖಲೆ ಇರುವಾಗ
ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು, ಪೊಲೀಸ್ ಇಲಾಖೆ ಇಲ್ಲಿಯ ಮೇಡಂ
ಕೈಗೊಂಬೆಯಾಗಿದ್ದಾರೆ” ಎಂದು ಟೀಕಿಸಿದರು.