ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕಳೆದವಾರ ನಾಪತ್ತೆಯಾಗಿದ್ದ ಮೀನುಗಾರಿಕಾ ಬೋಟ್ ಮತ್ತೆಯಾಗಿದೆ. ಬೋಟ್‌ನಲ್ಲಿದ್ದ 27 ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಗೋವಾದ ಪಣಜಿಯಿಂದ ಮೀನುಗಾರಿಕಾ ಬೋಟ್ ನವೆಂಬರ್ 19ರಂದು ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ, ಹವಮಾನ ವೈಪರೀತ್ಯದಿಂದಾಗಿ ಇಂಜಿನ್‌ನಲ್ಲಿ ಸಮಸ್ಯೆಯಾಗಿದ್ದು, ಬೋಟ್ ನಾಪತ್ತೆಯಾಗಿತ್ತು.
ಬೋಟ್ ಮತ್ತು ಮೀನುಗಾರರಿಗಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಇದೀಗ, ಉತ್ತರ ಕನ್ನಡ ಜಿಲ್ಲೆಯ ಬೇಲಿಕೇರಿ ಬಂದರ್‌ನಿಂದ 30 ನಾಟಿಕಲ್ ಮೈಲಿದೂರದಲ್ಲಿ ಬೋಟ್ ಪತ್ತೆಯಾಗಿದೆ.
ಬೋಟ್‌ನಲ್ಲಿದ್ದ 27 ಮಂದಿ ಮೀನುಗಾರರನ್ನು ರಕ್ಷಿಸಲಾಗಿದ್ದು, ಎಲ್ಲರನ್ನು ಬೇಲಿಕೇರಿ ಬಂದರಿಗೆ ಕರೆತರಲಾಗಿದೆ.