ಚೆನ್ನೈ ಚಂಡಮಾರುತದಲ್ಲಿ ನೀರು, ವಿದ್ಯುತ್ ಇಲ್ಲದೆ ಸಂಕಷ್ಟದಲ್ಲಿದ್ದ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಅಗ್ನಿಶಾಮಕ ಹಾಗೂ ರಕ್ಷಣಾ ಪಡೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ತಮ್ಮ ತಾಯಿಯ ಚಿಕಿತ್ಸೆಯ ಸಲುವಾಗಿ ಬಾಲಿವುಡ್ ನಟ ಅಮೀರ್ ಖಾನ್ ಕೆಲ ತಿಂಗಳ ಹಿಂದೆ ಚೆನ್ನೈ ನಗರದಲ್ಲಿ ಬಂದು ನೆಲಸಿದ್ದರು.
ಮಿಚಾಂಗ್ ಚಂಡಮಾರುತದಿಂದ ನೀರು ಎಲ್ಲಡೆ ನುಗ್ಗಿದ ಕಾರಣ ಬಾಲಿವುಡ್ ನಟ ಅಮೀರ್ ಖಾನ್ ಅವರು ಚೆನ್ನೈನ ಕರಪಾಕ್ಕಂ ಪ್ರದೇಶದಲ್ಲಿ ತಮಿಳು ಸಿನಿಮಾ ನಟರಾದ ವಿಷ್ಣು ವಿಶಾಲ್ ಹಾಗೂ ಜ್ವಾಲಾ ಗುಟ್ಟಾ ಅವರ ಮನೆಯಲ್ಲಿ ಉಳಿದುಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಸ ರೊಟ್ಟಿಯನು ಹೆಂಚಿಗೆ ಹಾಕಿದ ಮಿಜೋ ಮತದಾರರು
ಕಳೆದ 24 ಅವರಿಗೆ ವಿದ್ಯುತ್, ನೀರು, ವೈಫೈ, ಫೋನ್ ಸಂಪರ್ಕ ಯಾವುದು ಸಿಕ್ಕಿರದೆ ತುಂಬ ತೊಂದರೆಯಲ್ಲಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ಹಾಗೂ ರಕ್ಷಣಾ ಪಡೆ ಅಮೀರ್ ಖಾನ್, ವಿಷ್ಣು ವಿಶಾಲ್ ಹಾಗೂ ಜ್ವಾಲಾ ಗುಟ್ಟಾ ಸೇರಿದಂತೆ ತೊಂದರೆಯಲ್ಲಿದ್ದ ಸ್ಥಳೀಯರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿದ್ದಾರೆ.
“ನಮಗೆ ಸಹಾಯ ಮಾಡಿದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಧನ್ಯವಾದಗಳು. ಕರಪಾಕ್ಕಂನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾಗಿವೆ. ಈಗಾಗಲೇ 3 ಬೋಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಕಷ್ಟದ ಸಮಯದಲ್ಲಿ ತಮಿಳುನಾಡು ಸರ್ಕಾರ ಉತ್ತಮ ಕೆಲಸ ಮಾಡಿದೆ. ನಿರಂತರ ಕೆಲಸ ಮಾಡುತ್ತಿರುವ ಎಲ್ಲ ಆಡಳಿತ ಜನರಿಗೆ ಧನ್ಯವಾದಗಳು” ಎಂದು ನಟ ವಿಷ್ಣು ವಿಶಾಲ್ ಟ್ವಿಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಚೆನ್ನೈನಲ್ಲಿ 8 ಸಾವು
ಭಾನುವಾರ (ಡಿ.3) ರಾತ್ರಿ ಚಂಡಮಾರುತ ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಿಗೆ ಮಿಚಾಂಗ್ ಅಬ್ಬರಿಸಿದ ಕಾರಣ ಮಹಾನಗರದಾದ್ಯಂತ ಸಾವಿರಾರು ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರ ಆಸ್ತಿ ನಾಶಪಡಿಸಿದೆ. ವಿದ್ಯುತ್ ಸ್ಪರ್ಶ, ಮರ ಬೀಳುವಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಎಂಟು ಮಂದಿ ಸಾವನ್ನಪ್ಪಿದ್ದಾರೆ.
ಸೋಮವಾರ ರಾತ್ರಿ ಮಿಚಾಂಗ್ ಚಂಡಮಾರುತವು ಚೆನ್ನೈ ಕರಾವಳಿಯನ್ನು ದಾಟಿದ ನಂತರವೂ ಅರುಂಬಕ್ಕಂ, ಎಂಎಂಡಿಎ, ಚೂಲೈಮೇಡು, ಅಮಿಂಜಿಕಾರಿ ಸುತ್ತಮುತ್ತಲಿನ ಪ್ರದೇಶಗಳ ವಸತಿ ಪ್ರದೇಶಗಳು ಇನ್ನೂ ಜಲಾವೃತವಾಗಿವೆ. ಕಳೆದ 2 ದಿನಗಳಲ್ಲಿ ನಗರದಲ್ಲಿ 45 ಸೆಂ.ಮೀ ಮಳೆಯಾಗಿದೆ.
ಚೆನ್ನೈನಲ್ಲಿ ಚಂಡಮಾರುತದ ಪರಿಣಾಮದಿಂದ ವಿಪರೀತ ಮಳೆ ಸುರಿದು, ರಸ್ತೆಗಳು ನದಿಯಂತಾಗಿವೆ. ವಾಹನಗಳು ಕೊಚ್ಚಿಕೊಂಡು ಹೋಗುವ ವಿಡಿಯೋಗಳು ವೈರಲ್ ಆಗಿವೆ. ಇದರಿಂದಾಗಿ ಮಳೆ ಅಪಾಯವಿರುವ ಪ್ರದೇಶಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೂ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಮಾಡುವಂತೆ ಸಂಸ್ಥೆಗಳು ಸೂಚಿಸಿದೆ.
ವಿದ್ಯುತ್ ಪೂರೈಕೆ ಮತ್ತು ಇಂಟರ್ನೆಟ್ ಸಂಪರ್ಕದ ವ್ಯತ್ಯಯದಿಂದ ದೈನಂದಿನ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ತೊಡಕಾಗಿದೆ. ಭಾರಿ ಗಾಳಿಯಿಂದಾಗಿ ಮರಗಳು, ಗೋಡೆಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಸರ್ಕಾರಿ ಆಸ್ಪತ್ರೆಗಳಿಗೆ ನೀರು ನುಗ್ಗಿದ್ದರಿಂದ ಆರೋಗ್ಯ ಸೇವೆಗಳಿಗೆ ತಾತ್ಕಾಲಿಕ ತಡೆ ಬಿದ್ದಿದೆ. ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣಗಳಿಗೂ ನೀರು ನುಗ್ಗಿ ಜಲಾವೃತವಾಗಿದೆ.
Thanks to the fire and rescue department in helping people like us who are stranded
Rescue operations have started in karapakkam..
Saw 3 boats functioning alreadyGreat work by TN govt in such testing times
Thanks to all the administrative people who are working relentlessly https://t.co/QdoW7zaBuI pic.twitter.com/qyzX73kHmc
— VISHNU VISHAL – VV (@TheVishnuVishal) December 5, 2023