ಆಳ ಸಮುದ್ರದಲ್ಲೂ ಸಿಗುತ್ತಿಲ್ಲ ಮೀನುಗಳು; ಬಂದರ್‌ನಲ್ಲೇ ಲಂಗರು ಹಾಕಿವೆ ಬೋಟ್‌ಗಳು

Date:

Advertisements

ಚಳಿಗಾಲದಲ್ಲಿ ಮೀನುಗಾರಿಕೆಯಲ್ಲಿ ತೊಡಗಬೇಕಿದ್ದ ಬೋಟ್‌ಗಳು ಕಡಲ ತೀರದಲ್ಲೇ ನಿಂತಿವೆ. ಮೀನು ಹಿಡಿಯುವ ಕಾಯಕದಲ್ಲಿ ತೊಡಗಬೇಕಿದ್ದ ಮೀನುಗಾರರು ಬೋಟ್‌ಗಳು ಮತ್ತು ಬಲೆಗಳ ರಿಪೇರಿ ಕೆಲಸ ಮಾಡುತ್ತಾ ಕುಳಿತಿದ್ದಾರೆ. ಸಮುದ್ರದಲ್ಲಿ ಹೆಚ್ಚಾಗಿ ಮೀನುಗಳು ಸಿಗದ ಕಾರಣ, ಮೀನುಗಾರಿಕೆ ಕುಂಟಿತಗೊಂಡಿದೆ ಎಂದು ಹೇಳಲಾಗಿದೆ.

ಸರ್ಕಾರದ ಆದೇಶದಂತೆ ಆಗಸ್ಟ್‌ 1ರಿಂದ ಮೀನುಗಾರಿಕೆ ಆರಂಭವಾಗುತ್ತದೆ. ಪ್ರತಿವರ್ಷ ಜೂನ್ 1ರಿಂದ ಜುಲೈ 30ರವರೆಗೆ ಎರಡು ತಿಂಗಳುಗಳ ಕಾಲ ಮೀನುಗಾರಿಕೆಗೆ ನಿರ್ಬಂಧವಿರುತ್ತದೆ. ಮೀನುಗಳು ಮೊಟ್ಟೆ ಇಟ್ಟು, ಮರಿ ಮಾಡುವ ಕಾರಣದಿಂದಾಗಿ ಆ ಅವಧಿಯಲ್ಲಿ ಮೀನುಗಾರಿಕೆ ಮಾಡಿದರೆ, ಮೀನುಗಳ ಸಂತತಿ ವೃದ್ಧಿಯಾಗುವುದಿಲ್ಲ ಎಂಬ ಕಾರಣಕ್ಕೆ ನಿರ್ಬಂಧ ಹೇರಲಾಗಿರುತ್ತದೆ. ಇಳಿದಂತೆ ಆಗಸ್ಟ್‌ 1ರಿಂದ ಮೇ 31ರವರೆಗೆ ಮೀನುಗಾರಿಕೆ ಅವಕಾಶ ಇರುತ್ತದೆ. ಮೀನುಗಾರರು ಸಮುದ್ರದಲ್ಲಿ ಮೀನು ಹಿಡಿಯುವಲ್ಲಿ ತೊಡಗುತ್ತಾರೆ.

ಆದರೆ, ಈ ಬಾರಿ, ಮೀನುಗಾರಿಕೆ ಆರಂಭವಾಗಿ ನಾಲ್ಕು ತಿಂಗಳು ಕಳೆದಿಲ್ಲ. ಆಗಲೇ, ಮೀನುಗಾರಿಕಾ ಬೊಟ್‌ಗಳು ಬಂದರಿನಲ್ಲಿ ಲಂಗರು ಹಾಕುತ್ತಿವೆ. 30 ನಾಟಿಕಲ್ ಮೈಲ್‌ಗಳ ಆಳ ಸಮುದ್ರಕ್ಕೆ ಹೋದರೂ ಕೂಡ ಮೀನುಗಳು ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಮೀನುಗಾರರು.

Advertisements

“ಆಳ ಸಮುದ್ರದಲ್ಲಿ ಒಮ್ಮೆ ಮೀನುಗಾರಿಕೆಗೆ ತೆರಳಲು 40-50 ಸಾವಿರ ರೂ. ವೆಚ್ಚವಾಗುತ್ತದೆ. ಆದರೆ, ಆದ ವೆಚ್ಚ ಹಿಂದಿರುಗುವಷ್ಟು ಮೀನುಗಳು ಸಿಗುತ್ತಿಲ್ಲ. ಹಾಕಿದ ಬಂಡವಾಳದ ಅರ್ಧದಷ್ಟು ಮಾತ್ರವೇ ಹಣ ದೊರೆಯುತ್ತಿದೆ. ಮೀನುಗಾರಿಕೆಯಲ್ಲಿ ನಷ್ಟ ಎದುರಾಗಿದೆ” ಎಂದು ಮೀನುಗಾರರು ಹೇಳುತ್ತಿದ್ದಾರೆ.

“ಪ್ರತಿವರ್ಷವೂ ಆಳ ಸಮುದ್ರದಲ್ಲಿ ತರಹೇವಾರಿ ಮೀನುಗಳು ಸಿಗುತ್ತಿದ್ದವು. ಹಾಕಿದ್ದ ಬಂಡವಾಳಕ್ಕಿಂತ ಹೆಚ್ಚಿನ ಆದಾಯ ಸಿಗುತ್ತಿತ್ತು. ಜೀವನವೂ ಉತ್ತಮವಾಗಿ ನಡೆಯುತ್ತಿತ್ತು. ಆದರೆ, ಈ ಬಾರಿ, 40 ಸಾವಿರ ರೂ. ಬಂಡವಾಳ ಹಾಕಿ ಮೀನುಗಾರಿಕೆ ಹೋದರೆ, 15-20 ಸಾವಿರ ರೂ.ಗಳಷ್ಟು ಮೌಲ್ಯದ ಮೀನುಗಳು ದೊರೆಯುತ್ತಿವೆ. ಬೋಟ್‌ಗಳಿಗೆ ಹಾಕಿದ ಡೀಸೆಲ್‌ ಹಣವೂ ವಾಪಸ್‌ ಬರುತ್ತಿಲ್ಲ” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X