ವಿಜಯಪುರ ನಗರದ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಕಚೇರಿಯಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ 67ನೇ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮೊಂಬತ್ತಿ ಬೆಳಗಿ ಸಂತಾಪ ಸೂಚಿಸುವ ಮೂಲಕ ಸರಳವಾಗಿ ಆಚರಿಸಿದ್ದಾರೆ.
ಈ ವೇಳೆ ಮಾತನಾಡಿದ, ಜ್ಞಾನವನ್ನು ಹೊಂದದೇ ವಿವೋಚನೆ ಹೊಂದಲು ಸಾಧ್ಯವಿಲ್ಲ, ಸಂಘಟನಾತ್ಮಕ ಹೋರಾಟವಿಲ್ಲದೇ ಘನತೆಯ ಬದುಕು ಬದಕಲು ಸಾಧ್ಯವಿಲ್ಲ, ಜ್ಞಾನ ದೀವಿಗೆಯು ಶೋಷಣೆಯ ಕತ್ತಲನ್ನು ಸೀಳಿ ಈಡೀ ಪೀಳಿಗೆಗೆಯನ್ನು ಬೆಳಕಿನಡೆಗೆ ಕೊಂಡೊಯ್ಯುತ್ತದೆ, ಎಂಬ ಸಂದೇಶವನ್ನು ಬಡವರು, ಶೋಷಿತ ಅಸ್ಪೃಶ್ಯರು , ದುರ್ಬಲ ವರ್ಗದ ಜನರ ಬದುಕಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹಾನ ಚೇತನ ಬಾಬಾ ಸಾಹೇಬರು ಇಂದು ನಮ್ಮೊಂದಿಗೆ ಇಲ್ಲ, ಆದರೆ ಅವರು ಹಾಕಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್‍ನ ರಾಜ್ಯಾಧ್ಯಕ್ಷರಾದ ಶ್ರೀನಾಥ ಪೂಜಾರಿ, ಮುಖಂಡರಾದ ಸಂಘರ್ಷ ಹೊಸಮನಿ, ಕಾಶಿನಾಥ ಕಟ್ಟಿಮನಿ, ಮಾದೇಶ ಬಾಗೇವಾಡಿ, ಸತೀಶ ಅಂಜುಟಗಿ, ಪ್ರದಾನಿ ನಾಯಕ, ಸೇರಿದಂತೆ ಇತರರು ಇದ್ದರು.