ಹೈಸೂಡ್ಲುರು ಗ್ರಾಮದಲ್ಲಿ ಆಶ್ರಯ ನಿವೇಶನಕ್ಕೆಂದು ಮೀಸಲಿರುವ ಜಾಗದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳು ಆರು ವರ್ಷದಿಂದ ವಾಸವಾಗಿದ್ದಾರೆ. ಅವರಿಗೆ ಮನೆ ನಿರ್ಮಿಸಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ದಸಂಸ) ಪ್ರತಿಭಟನೆ ನಡೆಸಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಪ್ರತಿಭಟನೆ ನಡೆಸಿರುವ ದಸಂಸ ಕಾರ್ಯಕರ್ತರು ತಹಸೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಸೂಡ್ಲುರು ಗ್ರಾಮದ, ಸರ್ಕಾರಿ ಪೈಸಾರಿ ಜಾಗದ ಸರ್ವೇ ನಂಬರ್ 181/1P1 8 ಎಕರೆ ಜಾಗವು ಪೊನ್ನಂಪೇಟೆ ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿಯವರ ಹೆಸರಿನಲ್ಲಿದ್ದು ಸುಮಾರು 74 ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳು ಆರು ವರ್ಷದಿಂದ ವಾಸವಾಗಿದ್ದಾರೆ” ಎಂದು ತಿಳಿಸಿದ್ದಾರೆ.
“ಹೈಸೂಡ್ಲುರು ಗ್ರಾಮದ ಸರ್ಕಾರಿ ಜಾಗದ ಸರ್ವೆ ನಂಬರ್ 181/1P1 ಜಾಗದಲ್ಲಿ ಪರಿಶಿಷ್ಟ ಪಂಗಡದವರು ಸುಮಾರು 6-7 ವರ್ಷಗಳಿಂದ ಪ್ಲಾಸ್ಟಿಕ್ ಗುಡಿಸಲುಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಇವರೆಲ್ಲರೂ ಈ ತಾಲೂಕಿನ ಶ್ರೀಮಂತರ ಲೈನ್ ಮನೆಯಲ್ಲಿ ದುಡಿಯುತ್ತಾರೆ. ಆದರೆ, ಇಲ್ಲಿಯವರೆಗೂ ನಮ್ಮನ್ನು ಆಳುತ್ತಿದ್ದ ಸರ್ಕಾರ ವಿದೇಶಿಯರಂತೆ ಇವರನ್ನು ನೋಡುತ್ತಿದ್ದು, ಮೂಲಭೂತ ಸೌಲಭ್ಯಗಳನ್ನು ಕೊಡುಲು ಹಿಂದೆಟ್ಟು ಹಾಕುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಇಷ್ಟು ವರ್ಷಗಳಿಂದ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು ಇದುವರೆಗೂ ಯಾರೂ ಗಮನಹರಿಸಿಲ್ಲ. ಮಾಜಿ ಶಾಸಕರ ಕುಮಕ್ಕಿನಿಂದ ಇಲ್ಲಿ ವಾಸ ಮಾಡುತ್ತಿದ್ದ ಜನರಿಗೆ ಯಾವುದೇ ಮೂಲ ಸೌಲಭ್ಯಗಳನ್ನು ಕೊಡಿಸುವುದರಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳಿಗೆ ಕುಮ್ಮಕು ನೀಡಿ ವಾಸ ಮಾಡುತ್ತಿದ್ದ ಜನರಿಗೆ ಸೌಲಭ್ಯಗಳನ್ನು ಕೊಡಲು ವಂಚಿಸಿರುತ್ತಾರೆ.
ಆದ್ದರಿಂದ ತಾವುಗಳು ಇಲ್ಲಿವಾಸ ಮಾಡುತ್ತಿರುವ ಜನರು ಸ್ವಾತಂತ್ರ್ಯ ಬಂದು 75ವರ್ಷ ಕಳೆದರೂ, ಕತ್ತಲೆಯಲ್ಲಿ ಇದ್ದಾರೆ. ಇವರುಗಳಿಗೆ ಕರೆಂಟ್ ವ್ಯವಸ್ಥೆಯಾಗಲಿ, ಕುಡಿಯುವ ನೀರಿನ ಸೌಲಭ್ಯವಾಗಲಿ, ವಾಸ ಮಾಡಲು ಮನೆಯಾಗಲಿ ಸಿಕ್ಕಿರುವುದಿಲ್ಲ. ಆದ್ದರಿಂದ ತಾವುಗಳು ಇಲ್ಲಿ ವಾಸ ಮಾಡುತ್ತಿರುವ ಪರಿಶಿಷ್ಟ ಪಂಗಡದವರ ಮೇಲೆ ಕರುಣೆ ಇಟ್ಟು ಈ ಸರ್ಕಾರಿ ಜಾಗವನ್ನು ಸರ್ಕಾರದ ಸುಪ್ಪತ್ತಿಗೆಗೆ ತೆಗೆದುಕೊಂಡು ಹದ್ದುಬಸ್ತು ಸರ್ವೆ ನಡೆಸಿ ಸರ್ಕಾರದಿಂದ ಇಲ್ಲಿ ವಾಸ ಮಾಡುತ್ತಿರುವ ಜನರಿಗೆ ಅನುಕೂಲ ಮಾಡಿ ಕೊಡಬೇಕಾಗಿದೆ ಎಂದು ಸಂಘಟನೆ ಒತ್ತಾಯಿಸಿದೆ.
ಕೆ.ಬಾಗಡದಲ್ಲಿ ವಾಸಮಾಡುತ್ತಿರುವ ಪರಿಶಿಷ್ಠ ಪಂಗಡದವರು, ಸರ್ಕಾರಿ ಜಾಗದ ಸರ್ವೇ ನಂಬರ್ 29ರಲ್ಲಿ 18ಎಕರೆ 48ಸೇಂಟ್ ಸರ್ಕಾರಿ ಜಾಗವಿದ್ದು, ಈ ಜಾಗವನ್ನು ಸರ್ವೇ ನಡೆಸಿ ಪರಿಶಿಷ್ಠ ಪಂಗಡದವರಿಗೆ ನಿವೇಶನ ಕೊಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಬೇಡಿಕೆಗಳು
- ಹೈಸುಡ್ಲೂರು ಗ್ರಾಮದಲ್ಲಿ 74 ಪರಿಶಿಷ್ಟ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವ ಜನರಿಗೆ ಮೂಲಭೂತ ಸೌಲಭ್ಯ ಎಂದರೆ ಕುಡಿಯುವ ನೀರು, ವಿದ್ಯುತ್, ವಸತಿ, ಶೌಚಾಲಯ ಇನ್ನು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
- ಕೆ ಬಾಡಗ ಗ್ರಾಮದ ಸರ್ವೆ ನಂಬರ್ 29 ರ 18 ಎಕರೆ 48 ಸೇಂಟ್ ಸರ್ಕಾರಿ ಜಾಗವನ್ನು ಸರ್ಕಾರ ವಶಕ್ಕೆ ಪಡೆದುಕೊಂಡು ಇಲ್ಲಿ ವಾಸವಿದ್ದ ಪರಿಶಿಷ್ಟ ಪಂಗಡದವರಿಗೆ ನಿವೇಶನ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಬೇಕು.
- ದಲಿತ ಕಾಲೂನಿಗಳಿಗೆ ಅವರ ಉಪಯೋಗಕ್ಕಾಗಿ ಅಂಬೇಡ್ಕರ್ ಭವನ ನಿರ್ಮಿಸಿ ಕೊಡಬೇಕು.
- ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ಕೊಲ್ಲಿ ದಲಿತ ಕಾಲೋನಿಗೆ ತಿರುಗಾಡುತ್ತಿದ್ದ ರಸ್ತೆಯನ್ನು ಮೇಲ್ವರ್ಗದವರು ತಡೆಯಿಡಿದಿದ್ದು ಈ ರಸ್ತೆಯನ್ನು ದಲಿತರು ತಿರುಗಾಡಲು ಸರ್ಕಾರ ಅನುವು ಮಾಡಿಕೊಡಬೇಕು.
ಪ್ರತಿಭಟನೆಯಲ್ಲಿ ವಿಭಾಗೀಯ ಸಂಚಾಲಕರಾದ ಕೃಷ್ಣಪ್ಪ, ರಜನಿಕಾಂತ್, ಸತೀಶ್, ರಂಜಿತಾ, ಸುರೇಶ, ಬಾಳಲೆ ಯೋಗಣ್ಣ, ಯೋಗೇಶ್ ಕುಮಾರ್, ಕರ್ಕು, ಮಾರ, ಚಂದ್ರು ವಸಂತ ಮುತಾದವರು ಭಾಗಿಯಾಗಿದ್ದರು.