40 ವರ್ಷಗಳ ಕಾಲ ವಿಶ್ವ ಮಾಧ್ಯಮ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆ ಬಿಬಿಸಿಯಲ್ಲಿ ಕೆಲಸ ಮಾಡಿದ ಭಾರತ ಮೂಲದ ಡಾ ಸಮೀರ್ ಶಾ ಅವರು ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೇಮಕರಾಗಿದ್ದಾರೆ.
ಔಪಚಾರಿಕವಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ನೇಮಕಾತಿ ಪೂರ್ವ ಪರಿಶೀಲನೆಗಾಗಿ ಹೌಸ್ ಆಫ್ ಕಾಮನ್ಸ್ ಮೀಡಿಯಾ ಕಲ್ಚರ್, ಮೀಡಿಯಾ ಮತ್ತು ಸ್ಪೋರ್ಟ್ಸ್ ಸೆಲೆಕ್ಟ್ ಕಮಿಟಿಯ ಕ್ರಾಸ್-ಪಾರ್ಟಿ ಸಂಸದರು ಸಮೀರ್ ಶಾ ಅವರನ್ನು ಸಂದರ್ಶಿಸಿ ಸಮ್ಮತಿ ಸೂಚಿಸಿದ್ದಾರೆ.
“ಟಿವಿ ನಿರ್ಮಾಣ ಮತ್ತು ಪತ್ರಿಕೋದ್ಯಮದಲ್ಲಿ 40 ವರ್ಷಗಳಿಗೂ ಹೆಚ್ಚು ವೃತ್ತಿಜೀವನವನ್ನು ಹೊಂದಿರುವ ಡಾ. ಸಮೀರ್ ಶಾ ಅವರು ಬಿಬಿಸಿ ಅಧ್ಯಕ್ಷ ಸ್ಥಾನಕ್ಕೆ ಏರಲು ಅಪಾರ ಅನುಭವದ ಸಂಪತ್ತು ಹೊಂದಿದ್ದಾರೆ” ಎಂದು ಇಂಗ್ಲೆಂಡಿನ ಸಂಸ್ಕೃತಿ ಕಾರ್ಯದರ್ಶಿ ಲೂಸಿ ಫ್ರೇಜರ್ ತಿಳಿಸಿದ್ದು, ನೇಮಕಾತಿ ಪ್ರಕ್ರಿಯೆಯ ಪ್ರಕಾರ ಆಯ್ಕೆಯನ್ನು ದೃಢಪಡಿಸಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ 1952ರಲ್ಲಿ ಜನಿಸಿದ ಸಮೀರ್ ಷಾ ಅವರು 1970 ರ ದಶಕದಲ್ಲಿ ವಿದ್ಯಾಭ್ಯಾಸದ ಕಾರಣದಿಂದಾಗಿ ಇಂಗ್ಲೆಂಡ್‌ಗೆ ಆಗಮಿಸಿ ಬಿಬಿಸಿಯಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣ ಮುಖ್ಯಮಂತ್ರಿಯಾಗಿ ಎ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ
“ವೇಗವಾಗಿ ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ಬಿಬಿಸಿ ಯಶಸ್ವಿಯಾಗುವುದನ್ನು ನೋಡುವ ಸ್ಪಷ್ಟ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದಾರೆ. ಭವಿಷ್ಯದ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ಬಿಬಿಸಿಗೆ ಅಗತ್ಯವಿರುವ ಬೆಂಬಲ ಮತ್ತು ಪರಿಶೀಲನೆಯನ್ನು ಅವರು ಒದಗಿಸುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಲೂಸಿ ಫ್ರೇಜರ್ ಹೇಳಿದರು.
71 ವರ್ಷದ ಸಮೀರ್ ಶಾ ಅವರು ಬಿಬಿಸಿಯಲ್ಲಿ ಸಲ್ಲಿಸಿರುವ ಅತ್ಯಮೂಲ್ಯ ಸೇವೆಗಳಿಗಾಗಿ 2019 ರಲ್ಲಿ 2ನೇ ರಾಣಿ ಎಲಿಜಬೆತ್ ಅವರಿಂದ ಗೌರವಿಸಲ್ಪಟ್ಟಿದ್ದರು.
ಬಿಬಿಸಿ ನೂತನ ಅಧ್ಯಕ್ಷರಾಗಿರುವ ಸಮೀರ್ ಶಾ ಅವರು ವಾರ್ಷಿಕ 1.60 ಲಕ್ಷ ಪೌಂಡ್(1.67 ಕೋಟಿ ರೂ.) ವೇತನ ಪಡೆಯಲಿದ್ದಾರೆ. ವಾರಕ್ಕೆ ಮೂರು ದಿನ ಮಾತ್ರ ಕೆಲಸ ನಿರ್ವಹಿಸಲಿದ್ದಾರೆ. ಈ ಮೊದಲು ಶಾ ಅವರು ಬಿಬಿಸಿಯಲ್ಲಿ 2007 ಮತ್ತು 2010 ರ ನಡುವೆ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.