ಈ ದಿನ ಸಂಪಾದಕೀಯ | ಅಂಚೆ- ಪಾರ್ಸೆಲುಗಳ ತೆರೆಯುವ ನಿರಂಕುಶ ಅಧಿಕಾರ ಅಪಾಯಕರ

Date:

Advertisements
ಖಾಸಗಿತನದ ಹಕ್ಕು, ಸಮಾನತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರಯದ ಮೂಲಭೂತ ಹಕ್ಕುಗಳು ಅಧಿಕೃತವಾಗಿಯೇ ಮತ್ತೊಂದು ಸುತ್ತಿನ ಹಗಲುದರೋಡೆಗೆ ಗುರಿಯಾಗಲಿವೆ. ಹೌದು, ಕೇಂದ್ರ ಸರ್ಕಾರ ಸದ್ಯದಲ್ಲೇ ನಿಮ್ಮ ಅಂಚೆಯನ್ನು ತೆರೆದು ನೋಡಲಿದೆ


ಅಂಚೆಯ
ಅಣ್ಣ ಅಥವಾ ಅಂಚೆಯ ಅಕ್ಕನನ್ನು ಸಾರ್ವಜನಿಕರು ಅನುಮಾನಿಸುವ ದಿನಗಳು ದೂರವಿಲ್ಲ
. ಅಂಚೆ ಇಲಾಖೆಯ ಉದ್ಯೋಗಿಗಳು ನಿಮ್ಮ ಅಂಚೆಯನ್ನು ತೆರೆದು ಓದಬಹುದು. ಪಾರ್ಸೆಲ್‌ಗಳನ್ನು ತೆರೆದು ಪರಿಶೀಲಿಸಬಹುದು. ದೇಶದ ಸುರಕ್ಷತೆ ಅಥವಾ ಸಾರ್ವಜನಿಕ ಸುರಕ್ಷೆಯ ಕಾರಣ ಮುಂದೆ ಮಾಡಿ ಅದನ್ನು ಹಿಡಿದಿಟ್ಟುಕೊಳ್ಳಬಹುದು, ನಾಶ ಮಾಡಲೂಬಹುದು.

ತುರ್ತುಪರಿಸ್ಥಿತಿ, ಸಾರ್ವಜನಿಕ ಸುವ್ಯವಸ್ಥೆ, ವಿದೇಶಗಳೊಡನೆ ಸೌಹಾರ್ದ ಸಂಬಂಧ ಕಾನೂನು ಕಾಯಿದೆ ಉಲ್ಲಂಘನೆ, ಕಸ್ಟಮ್ ಸುಂಕ ಪಾವತಿಯ ಕಾರಣಗಳ ಅಡಿಯಲ್ಲೂ ಅಂಚೆ ಪಾರ್ಸೆಲ್ ಗಳನ್ನು ತೆರೆಯಬಹುದಾಗಿದೆ. ಖಾಸಗಿ ‘ಕೊರಿಯರ್’ ಸೇವೆಗಳನ್ನು ಈ ವಿಧೇಯಕದ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ನಿಮ್ಮ ಅಂಚೆ ಅಥವಾ ಪಾರ್ಸೆಲ್ ಕಳೆದು ಹೋದರೆ, ತಪ್ಪಾಗಿ ಮತ್ತೊಬ್ಬರ ವಿಳಾಸಕ್ಕೆ ಬಟವಾಡೆಯಾದರೆ, ಬಟವಾಡೆಯಲ್ಲಿ ವಿಳಂಬವಾದರೆ ಇಲ್ಲವೇ ಹಾನಿಗೀಡಾದರೆ ಇನ್ನು ಮುಂದೆ ಅಂಚೆ ಅಧಿಕಾರಿ ಜವಾಬ್ದಾರನಲ್ಲ. ಉದ್ದೇಶಪೂರ್ವಕವಾಗಿ ಮತ್ತೊಬ್ಬರಿಗೆ ಬಟವಾಡೆ ಮಾಡಲಾಗಿದೆ ಇಲ್ಲವೇ ನಷ್ಟಗೊಳಿಸಲಾಗಿದೆ ಎಂದು ನೀವು ರುಜುವಾತು ಮಾಡಿದರೆ ಮಾತ್ರ ಇಲಾಖೆ ಜವಾಬುದಾರ. ಉತ್ತರದಾಯಿತ್ವದಿಂದ ಸರ್ಕಾರ ಸಂಪೂರ್ಣವಾಗಿ ಕೈ ತೊಳೆದುಕೊಳ್ಳುತ್ತಿದೆ. ಅಂಚೆ ಇಲಾಖೆಯ ಕಾರ್ಯದಕ್ಷತೆ ಕುಸಿದರೂ ಕೇಳುವವರಿಲ್ಲವಾದೀತು. 1898ರ ಕಾಯಿದೆಯಲ್ಲಿ ಅಂಚೆ ಇಲಾಖೆಯಿಂದ ಜರುಗಬಹುದಾದ ಇಂತಹ ತಪ್ಪುತಡೆಗಳಿಗೆ ದಂಡಶುಲ್ಕ ಇಲ್ಲವೇ ಜೈಲುಶಿಕ್ಷೆ ಅಥವಾ ಎರಡನ್ನೂ ನಿಗದಿ ಮಾಡಲಾಗಿತ್ತು.

Advertisements

ಖಾಸಗಿತನದ ಹಕ್ಕು, ಸಮಾನತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳು ಅಧಿಕೃತವಾಗಿಯೇ ಮತ್ತೊಂದು ಸುತ್ತಿನ ಹಗಲುದರೋಡೆಗೆ ಗುರಿಯಾಗಲಿವೆ. ಹೌದು, ಕೇಂದ್ರ ಸರ್ಕಾರ ಸದ್ಯದಲ್ಲೇ ನಿಮ್ಮ ಅಂಚೆಯನ್ನು ತೆರೆದು ನೋಡಲಿದೆ. ಆಕ್ಷಾಪಾರ್ಹವೇನಾದರೂ ಕಂಡು ಬಂದರೆ ನಿಮ್ಮ ಅಂಚೆ ಬಟವಾಡೆಯಾಗದು. ಸರ್ಕಾರ ಹಿಡಿದಿಟ್ಟುಕೊಳ್ಳಲಿದೆ ಇಲ್ಲವೇ ಕಸ್ಟಮ್ಸ್ ಪ್ರಾಧಿಕಾರಕ್ಕೆ ಒಪ್ಪಿಸಿ ನಾಶಪಡಿಸಲಿದೆ. ಇಂತಹ ಹಲವು ಕಳವಳಕಾರಿ ಅಧಿಕಾರಗಳನ್ನು ಕೇಂದ್ರ ಸರ್ಕಾರಕ್ಕೆ ನೀಡುವ 2023ರ ಅಂಚೆ ಕಚೇರಿ ವಿಧೇಯಕವನ್ನು ರಾಜ್ಯಸಭೆ ಇದೇ ಸೋಮವಾರ ಅಂಗೀಕರಿಸಿತು.

ನಾಗರಿಕ ಕೇಂದ್ರಿತ ಸೇವೆಗಳ ಕೇಂದ್ರವಾಗಿ ಅಂಚೆ ಕಚೇರಿಗಳನ್ನು ವಿಕಾಸಗೊಳಿಸುವ ಅವಕಾಶವನ್ನೂ ಈ ವಿಧೇಯಕ ಹೊಂದಿದೆ.

ಕೇಂದ್ರ ಈ ನಡೆಯುವ ಕಾಲಾನುಕ್ರಮದಲ್ಲಿ ಖಾಸಗೀಕರಣಕ್ಕೂ ಬಾಗಿಲು ತೆರೆದರೆ ಅಚ್ಚರಿಯಿಲ್ಲ.ಅಂಚೆ ಇಲಾಖೆಯ ಕೆಲಸ ಕಾರ್ಯಗಳು ಹಂತ ಹಂತವಾಗಿ ಖಾಸಗಿ ಕೈಗಳಿಗೆ ಹೋಗಲಿವೆ. ಅಷ್ಟರಮಟ್ಟಿಗೆ ಸರ್ಕಾರಿ ಉದ್ಯೋಗಗಳಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ನ್ಯಾಯಯುತ ವೇತನ ಭತ್ಯೆಗಳಿಂದ ಕೇಂದ್ರ ಸರ್ಕಾರಿ ಒಡೆತನದ ಮತ್ತೊಂದು ಬೃಹತ್ ವಲಯ ವಂಚಿತವಾಗಲಿದೆ. ಖಾಸಗಿಯವರ ಶೋಷಣೆಗೆ ತುತ್ತಾಗಲಿದೆ. ಅಂಚೆ ದರಗಳನ್ನು ತೀರ್ಮಾನಿಸಿ ಜಾರಿಗೊಳಿಸುವ ಅಧಿಕಾರವೂ ಇನ್ನು ಮುಂದೆ ಸಂಸತ್ತಿಗೆ ಇರುವುದಿಲ್ಲ. ಅಂಚೆ ಇಲಾಖೆಯ ಮಹಾನಿರ್ದೇಶಕರ ಕೈಗೆ ಒಪ್ಪಿಸಲಾಗುತ್ತಿದೆ. ಅಂಚೆದರಗಳ ಏರಿಕೆ ಇಲ್ಲಿಯವರೆಗೆ ಸಂಸತ್ತಿನಲ್ಲಿ ಚರ್ಚೆಯಾಗಿ ತರುವಾಯ ಜಾರಿಗೆ ಬರುತ್ತಿದ್ದವು.

ಲೋಕಸಭೆಯ ಒಪ್ಪಿಗೆಯ ನಂತರ ಸದ್ಯದಲ್ಲೇ ಜಾರಿಗೆ ಬರುವ ಈ ‘ಕಾಯಿದೆ’ಯು, ‘ದುರುಪಯೋಗ’ದ ಹೆಬ್ಬಾಗಿಲನ್ನೇ ತೆರೆಯಲಿದೆ. ನಿಸ್ಸಂದೇಹವಾಗಿ ಪ್ರಜೆಗಳನ್ನು ಪ್ರಭುತ್ವದ ಕಣ್ಗಾವಲಿಗೆ ಗುರಿಪಡಿಸುವ ಜನತಂತ್ರ ವಿರೋಧಿ ಕೃತ್ಯ. ಮೂಲಭೂತ ಹಕ್ಕುಗಳು ಮತ್ತು ಗಣರಾಜ್ಯ ತತ್ವಗಳನ್ನು ಉಲ್ಲಂಘಿಸುವ ನಡೆ. ಈ ಕುರಿತು ಪ್ರತಿಪಕ್ಷಗಳು ಸದನದಲ್ಲಿ ವ್ಯಕ್ತಪಡಿಸಿದ ಪ್ರತಿಭಟನೆಯನ್ನು ಸರ್ಕಾರ ಲೆಕ್ಕಕ್ಕೇ ತೆಗೆದುಕೊಂಡಿಲ್ಲ.

ಅಂಚೆಯನ್ನು ತಾನು ತೆರೆದು ನೋಡಲು, ವಶಕ್ಕೆ ಪಡೆದು ನಾಶ ಮಾಡಲು ಸರ್ಕಾರ ಸಂಬಂಧಪಟ್ಟವರಿಗೆ ಸಾಕ್ಷ್ಯಪುರಾವೆಗಳನ್ನು ಒದಗಿಸಬೇಕಿಲ್ಲ. ಹಾಗಿದ್ದರೆ ಅಂಚೆ ಪಾರ್ಸೆಲ್ ಗಳನ್ನು ತೆರೆದು ನೋಡುವ ಅಧಿಕಾರ ಸರ್ಕಾರಕ್ಕೆ ಈವರೆಗೆ ಇರಲಿಲ್ಲವೇ? ಬ್ರಿಟಿಷರ ಕಾಲದಲ್ಲಿ ಜಾರಿಗೆ ತರಲಾದ 1898ರ ಭಾರತೀಯ ಅಂಚೆ ಕಾಯಿದೆಯ 26ನೆಯ ಸೆಕ್ಷನ್ ಪ್ರಕಾರ ಇಂತಹ ಅಧಿಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಇತ್ತು. ಆದರೆ ಇಂತಿಂತಹ ವಿಶೇಷ ವರ್ಗದ ಅಂಚೆಗಳನ್ನು ಇಲ್ಲವೇ ನಿರ್ದಿಷ್ಟ ಅಂಚೆಪಾರ್ಸೆಲುಗಳನ್ನು ತೆರೆದು ನೋಡುವಂತೆ ನಿರ್ದಿಷ್ಟ ಅಧಿಕಾರಿಯನ್ನು ಗೊತ್ತುಪಡಿಸಿ ಲಿಖಿತ ಆದೇಶವನ್ನು ಹೊರಡಿಸಲೇಬೇಕಿತ್ತು. ಸಾರ್ವಜನಿಕ ಸುರಕ್ಷತೆ ಅಥವಾ ತುರ್ತುಪರಿಸ್ಥಿತಿಯ ಕಾರಣವನ್ನೂ ಲಿಖಿತವಾಗಿ ನೀಡಬೇಕಿತ್ತು. ಹೊಸ ವಿಧೇಯಕವು ಇಂತಹ ನಿರ್ಬಂಧಗಳನ್ನು ಕಿತ್ತು ಹಾಕಿದೆ.

ಗಮನಿಸಲೇಬೇಕಿರುವ ಮತ್ತೊಂದು ಸಂಗತಿ. ತೆರೆದುನೋಡಲು, ಹಿಡಿದಿಡಲು, ನಾಶಪಡಿಸಲು ಅಗತ್ಯವಿರುವ ನಿಯಮಗಳು, ವಿಧಾನಗಳು ವಿಧೇಯಕದಲ್ಲಿ ಇಲ್ಲ. ಇಂತಹ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಅಂಚೆ ಇಲಾಖೆಯ ಮಹಾನಿರ್ದೇಶಕರಿಗೆ ನೀಡಲಾಗಿದೆ. ಅರ್ಥಾತ್ ಈ ನಿಯಮಗಳನ್ನು ಸಂಸತ್ತಿನ ಪರಿಶೀಲನೆಚರ್ಚೆಯ ಪರಿಧಿಯಿಂದ ದೂರ ಇರಿಸಲಾಗಿದೆ. ಜೊತೆಗೆ ಮಹಾನಿರ್ದೇಶಕರ ಹುದ್ದೆ ಸ್ವಾಯತ್ತವೇನೂ ಅಲ್ಲ. ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳನ್ನೂ ತನ್ನ ತಾಳಕ್ಕೆ ಕುಣಿಸುತ್ತಿದೆ ಕೇಂದ್ರ ಸರ್ಕಾರ. ತನ್ನ ನೇರ ನಿಯಂತ್ರಣದ ಅಡಿ ಬರುವ ಅಂಚೆ ಇಲಾಖೆಯ ಮಹಾನಿರ್ದೇಶಕರು ಕೇಂದ್ರ ಸರ್ಕಾರಕ್ಕೆ ಯಾವ ಲೆಕ್ಕ?

ಬ್ರಿಟಿಷ್ ವಸಾಹತುಶಾಹಿ ಸರ್ಕಾರ ಜಾರಿಗೆ ತಂದ ಜನ ದಮನದ ಅನೇಕ ಕಾಯಿದೆಗಳು ಸ್ವತಂತ್ರ ಭಾರತದಲ್ಲೂ ಮುಂದುವರೆಯುತ್ತಿರುವುದು ಬಹುದೊಡ್ಡ ವಿಡಂಬನೆ. ಬ್ರಿಟಿಷರ ಕಾಲದ ಅಂಚೆ ಕಾಯಿದೆಗೆ ಕರಾಳ ಹಲ್ಲು ಉಗುರುಗಳನ್ನು ಸ್ವತಂತ್ರ ಭಾರತದ ಸರ್ಕಾರವೇ ಕೊಟ್ಟಿರುವುದು ಇನ್ನೂ ದೊಡ್ಡ ವ್ಯಂಗ್ಯ.

ಕೇಂದ್ರ ಸರ್ಕಾರದಿಂದ ಈ ‘ಕಾಯಿದೆ’ ಯನ್ನು ತನ್ನ ಸೈದ್ಧಾಂತಿಕ ಮತ್ತು ರಾಜಕೀಯ ವಿರೋಧಿಗಳ ಮೇಲೆ ತಾರತಮ್ಯ ಮತ್ತು ಸ್ವೇಚ್ಛಾಚಾರದಿಂದ ಪ್ರಯೋಗಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಇಂತಹ ದುರ್ಬಳಕೆಯನ್ನು ತಡೆಯುವ ಸ್ಪಷ್ಟ ಮಾರ್ಗಸೂಚಿಗಳು ಅಥವಾ ಅಡೆತಡೆಗಳನ್ನು ನಿಯಮಗಳಲ್ಲಿ ಅಳವಡಿಸುವಂತೆ ಸಾರ್ವಜನಿಕ ಒತ್ತಡ ಹೇರಿಕೆ ಅತ್ಯಗತ್ಯ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X