ತೆಲಂಗಾಣದ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಖಾತೆಗಳ ಹಂಚಿಕೆ ಮಾಡಲಾಗಿದೆ.
ಖಾತೆಗಳ ವಿವರ
ಉತ್ತಮ ಕುಮಾರ್ ರೆಡ್ಡಿ: ಗೃಹ ಇಲಾಖೆ
ದಾಮೋದರ ರಾಜನರಸಿಂಹ : ವೈದ್ಯಕೀಯ ಆರೋಗ್ಯ ಇಲಾಖೆ
ಭಟ್ಟಿ ವಿಕ್ರಮಾರ್ಕ : ಕಂದಾಯ ಇಲಾಖೆ
ಕೋಮಟಿರೆಡ್ಡಿ: ನಗರಸಭೆ ಇಲಾಖೆ
ತುಮ್ಮಲ ನಾಗೇಶ್ವರ ರಾವ್ : ರಸ್ತೆ, ಕಟ್ಟಡಗಳ ಇಲಾಖೆ
ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ: ನೀರಾವರಿ ಇಲಾಖೆ
ಶ್ರೀಧರ್ ಬಾಬು: ಹಣಕಾಸು ಇಲಾಖೆ
ಸೀತಕ್ಕ: ಗಿರಿಜನ ಕಲ್ಯಾಣ ಇಲಾಖೆ
ಜೂಪಲ್ಲಿ ಕೃಷ್ಣರಾವ್: ನಾಗರಿಕ ಸರಬರಾಜು ಇಲಾಖೆ
ಪೊನ್ನಂ ಪ್ರಭಾಕರ್: ಹಿಂದುಳಿದ ಕಲ್ಯಾಣ ಇಲಾಖೆ
ಕೊಂಡ ಸುರೇಖಾ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಸಿಎಂ ರೇವಂತ್ ರೆಡ್ಡಿ ನೇತೃತ್ವದಲ್ಲಿ ಸಂಜೆ 5 ಗಂಟೆಗೆ ತೆಲಂಗಾಣ ಸಚಿವಾಲಯದಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಯಲಿದೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ವಿಧಾನಸಭೆಗೆ ಆಯ್ಕೆಯಾಗಿದ್ದ ಇಬ್ಬರು ಕೇಂದ್ರ ಸಚಿವರು, 8 ಸಂಸದರ ರಾಜೀನಾಮೆ
2014ರಲ್ಲಿ ಅಸ್ತಿತ್ವಕ್ಕೆ ಬಂದ ತೆಲಂಗಾಣ ರಾಜ್ಯದ ಮೊದಲ ಕಾಂಗ್ರೆಸ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ರೇವಂತ್ ರೆಡ್ಡಿ ಪಾತ್ರರಾಗಿದ್ದಾರೆ. ಇತ್ತೀಚಿನ ನಡೆದ ವಿಧಾನಸಭೆ ಚುನಾವಣೆಯಲ್ಲಿ ರೇವಂತ್ ರೆಡ್ಡಿ ಅವರು ಪ್ರಬಲ ಪ್ರತಿಸ್ಪರ್ಧಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯನ್ನು ಮಣಿಸಿ ಕಾಂಗ್ರೆಸ್‌ಅನ್ನು ಗೆಲುವಿನತ್ತ ಮುನ್ನಡೆಸಿದರು. ಚುನಾವಣೆಯಲ್ಲಿ 119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 64 ಸ್ಥಾನಗಳನ್ನು ಗಳಿಸಿ ಬಹುಮತ ಪಡೆದರೆ, ಬಿಆರ್‌ಎಸ್ 39 ಸ್ಥಾನ ಮಾತ್ರ ಪಡೆಯಿತು.
ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಆರು ಭರವಸೆಗಳನ್ನು ಜಾರಿಗೊಳಿಸುವ ಹೊಸ ಅಭಯ ಹಸ್ತದ ಕಾಯ್ದೆಗೆ ಸಂಬಂಧಿಸಿದ ಎರಡು ಕಡತಗಳಿಗೆ ಸಹಿ ಹಾಕಿದರು.