ರಾಜ್ಯ ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, “ಮುಂದೆ ಇಂತಹ ಘಟನೆಗಳು ನಡೆಯದಿರಲು ಹಾಗೂ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸೇವೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಸಿಬ್ಬಂದಿ ಯಾವಾಗಲು ಸಿದ್ಧರಾಗಿದ್ದಾರೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ” ಎಂದು ಎಂದು ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, “ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಲು ನಮ್ಮ ಮೆಟ್ರೋ ಸಿದ್ಧವಾಗಿದೆ. ಭದ್ರತಾ ಸಿಬ್ಬಂದಿಯು ಯಾವಾಗಲೂ ಜಾಗರೂಕರಾಗಿದ್ದು, ತುರ್ತು ಸಂದರ್ಭದಲ್ಲಿ ಯಾವುದೇ ಸಹಾಯಕ್ಕಾಗಿ ಸಿದ್ಧರಾಗಿರುತ್ತಾರೆ. ಪ್ರಯಾಣಿಕರು ನಿಯಂತ್ರಣ ಕೇಂದ್ರವನ್ನು ದೂರವಾಣಿ ಸಂಖ್ಯೆ 080 2519 1208, 080 2216 2258 / 2208 ಮತ್ತು ಟೋಲ್ ಫ್ರೀ ಸಹಾಯವಾಣಿ 1800-425-12345ಗೆ ಸಂಪರ್ಕಿಸಬಹುದು” ಎಂದು ತಿಳಿಸಿದೆ.
“ಹೆಚ್ಚುವರಿಯಾಗಿ, ತುರ್ತು ಸಮಯದಲ್ಲಿ ಪ್ರಯಾಣಿಕರು ಸಹಾಯ ಪಡೆಯಲು ಎಲ್ಲ ಮೆಟ್ರೋ ಬೋಗಿಯಲ್ಲಿ (ಪ್ರತಿ ಬೋಗಿಯಲ್ಲಿ-4) ಅಳವಡಿಸಿರುವ ತುರ್ತು ಎಚ್ಚರಿಕೆ (Passenger Emergency Alarm) ವ್ಯವಸ್ಥೆಯನ್ನು ಬಳಸಿ, ರೈಲು ನಿರ್ವಾಹಕರೊಂದಿಗೆ ಸಂವಹನ ನಡೆಸಬಹುದು. ಇದರಿಂದಾಗಿ, ಸಮೀಪಿಸುತ್ತಿರುವ ಅಥವಾ ಮುಂದಿನ ನಿಲ್ದಾಣದಲ್ಲಿ ಸಹಾಯ ಒದಗಿಸಲು ಅನುಕೂಲವಾಗುತ್ತದೆ” ಎಂದು ಹೇಳಿದೆ.
“ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ, ನಿಯಂತ್ರಣ ಕೇಂದ್ರದ ದೂರವಾಣಿ ಸಂಖ್ಯೆಗಳು ಮತ್ತು ಪ್ಯಾಸೆಂಜರ್ ಎಮರ್ಜೆನ್ಸಿ ಅಲಾರ್ಮ್ (Passenger Emergency Alarm) ವ್ಯವಸ್ಥೆಯನ್ನು ಸಾರ್ವಜನಿಕರು ಬಳಸಿಕ್ಕೊಳ್ಳಬೇಕು” ಎಂದು ತಿಳಿಸಿದೆ.
ಡಿ.7 ರಂದು ಮುಂಜಾನೆ 9.40 ಗಂಟೆಗೆ ರಾಜಾಜಿನಗರದಿಂದ ಎಂ.ಜಿ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮಹಿಳಾ ಪ್ರಯಾಣಿಕರು, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಲ್ಲಿ ರೈಲಿನಿಂದ ಹೊರ ಬರುವ ಸಂದರ್ಭದಲ್ಲಿ ಓರ್ವ ವ್ಯಕ್ತಿ ದೌರ್ಜನ್ಯ ಎಸಗಿದ್ದಾನೆ ಎಂದು ಭದ್ರತಾ ಸಿಬ್ಬಂದಿಯ ಸಹಾಯ ಕೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎರಡಂತಸ್ತಿನ ಕಟ್ಟಡ ಜತೆಗೆ ಧರೆಗುರುಳಿದ ಮೊಬೈಲ್ ಟವರ್
ಕೂಡಲೇ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಹಿಡಿದು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಅಲ್ಲದೆ, ಆಕೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಕೂಡ ಸಹಾಯ ಮಾಡಿದ್ದಾರೆ.
ಈ ಹಿಂದೆ, 2023ರ ಏಪ್ರಿಲ್‌ನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನಿಂದ 20 ಮೊಬೈಲ್ ಫೋನ್ ಗಳು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಜಾಮೀನಿನ ಮೇಲೆ ಹೊರಬಂದಿದ್ದಾನೆ ಎಂದು ತಿಳಿಸಿದೆ.