ಗದಗ | ಎಂ.ಡಿ ಗೋಗೇರಿ ಅವರ ಬದುಕು-ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮ

Date:

Advertisements

ಮಕ್ಕಳ ಸಾಹಿತ್ಯ, ಹಾಸ್ಯ, ವಿಡಂಬನೆ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕವಿ ಎಂ.ಡಿ ಗೋಗೇರಿ ಅವರು ಮುಸ್ಲಿಂ ದೇಹ – ಕನ್ನಡ ಮನಸ್ಸು ಹೊಂದಿದವರಾಗಿದ್ದರು ಎಂದು ಪ್ರಾಧ್ಯಾಪಕ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೋಗೇರಿ ಗಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಸಾಪ ಆಯೋಜಿಸಿದ್ದ ಎಂ.ಡಿ ಗೋಗೇರಿ ಅವರ ಬದುಕು-ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಶಿಕ್ಷಣ ಕ್ಷೇತ್ರದಲ್ಲಿ ಹಗಲಿರುಳು ಕೆಲಸ ಮಾಡುತ್ತಾ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ ಗೋಗೇರಿ ಅವರು ಇಂದಿನ ಪೀಳಿಗೆಯವರಿಗೆ ಮಾದರಿಯಾಗಿದ್ದಾರೆ. ಕನ್ನಡ ಭಾಷಾ ಸಂಸ್ಕೃತಿಯ ಜೊತೆಗೆ ಸೌಹಾರ್ದ ಸಂಸ್ಕೃತಿಗೂ ಆದ್ಯತೆ ನೀಡಿದ್ದರು. ಇಂದಿಗೂ ಮಕ್ಕಳ ಸಾಹಿತ್ಯದ ರತ್ನತ್ರಯರ ಸಾಲಿನಲ್ಲಿ ಗೋಗೇರಿ ಅವರು ಇರುವುದು ಕನ್ನಡ ಸಾಹಿತ್ಯಕ್ಕೆ ಹೆಮ್ಮೆಯ ಗರಿ” ಎಂದರು.

Advertisements

ಕಾರ್ಯಕ್ರಮದಲ್ಲಿ ಮಾತನಾಡಿದ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, “ಗದಗ ಜಿಲ್ಲೆಯ ಸಮನ್ವಯ ಕವಿ ಎಂ.ಡಿ ಗೋಗೇರಿ ಅವರ ಎಲ್ಲ ಕೃತಿಗಳನ್ನು ಮರು ಮುದ್ರಣ ಮಾಡಿ ಮಕ್ಕಳಿಗೆ ಓದುವ ಸದಾವಕಾಶ ಮಾಡಬೇಕು. ಅವರ ಕೃತಿಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಜಿಲ್ಲೆಯ ಸಾಹಿತಿಗಳನ್ನು ಗುರುತುಸಿ ಪ್ರಶಸ್ತಿ ನೀಡುವ ಕೆಲಸವಾಗಬೇಕು” ಎಂದರು.

ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಅಮರೇಶ ಗಾಣಗೇರ, ಕವಿ ರಂಜಾನ ಹೆಬಸೂರ, ಗ್ರಾಮದ ಹಿರಿಯರಾದ ಬಸವರಾಜ ಮೂಲಿಮನಿ, ಹೇಮಾಪತಿ ಭೋಸಲೆ, ಕೆ ಎಂ ಅಡವಿ ಕೆ ಎಸ್ ಕೋಡತಗೇರಿ
ಮಲ್ಲಿಕಾರ್ಜುನ ಗಾರಗಿ, ಶಿಕ್ಷಕ ಆರ್ ಕೆ ಬಾಗವಾನ ಇದ್ದರು. ಸಮಾರರಂಭದಲ್ಲಿ ಮುಖ್ಯೋಪಾಧ್ಯರಾದ ಕೆ ಎಸ್ ರಾಜೂರ, ಆರ್ ಆಯ್ ಬಾಗವಾನ, ಕ.ಸಾ.ಪ ಸದಸ್ಯರಾದ ಗಂಗಪ್ಪ ಗುಂಡೆ, ಎಂ ಡಿ ಬಾಗವಾನ, ಕೆ ಕೆ ಬಾಗವಾನ ಬಸವರಾಜ ಮಾದರ ವಜೀರ ನಧಾಪ್ ಇದ್ದರು. ಶಿಕ್ಷಕರಾದ ಪರಶು ಹೋರಪೇಟಿ ನಿರೂಪಿಸಿದು, ಬಿ ಎಸ್ ಬಳಿಗೇರ ವಂದಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X