ವಿಜಯಪುರದ ಮುಸ್ಲಿಂ ಧಾರ್ಮಿಕ ಮುಖಂಡ ಸೈಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮಿಯವರಿಗೆ ಉಗ್ರರ ಸಂಪರ್ಕವಿದೆ. ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್, “ರಾಜಕೀಯ ಪಕ್ಷ ಬದಲಾದಂತೆ “ಹಿಂದೂ ಉಲಿ”ಯ ವೇಷವೂ ಬದಲಾಗುತ್ತದೆ” ಎಂದು ಮುಸ್ಲಿಮರ ಟೋಪಿ ಧರಿಸಿದ್ದ ಹಳೆಯ ಫೋಟೋ ಟ್ವೀಟ್ ಮಾಡಿ, ಕಾಲೆಳೆದಿದೆ.
“ರಾಜಕೀಯ ಪಕ್ಷ ಬದಲಾದಂತೆ ‘ಹಿಂದೂ ಉಲಿ’ಯ ವೇಷವೂ ಬದಲಾಗುತ್ತದೆ. ಮುಸ್ಲಿಮರೊಂದಿಗೆ ವ್ಯಾಪಾರ, ವ್ಯವಹಾರ. ಮುಸ್ಲಿಮರೊಂದಿಗೆ ಬದುಕು. ಹೊರಗೆ ಮಾತ್ರ ಮುಸ್ಲಿಮರ ಮೇಲೆ ದ್ವೇಷ ಭಾಷಣ. ಯತ್ನಾಳ್ ಅವರೇ, ಮುಸ್ಲಿಮರ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ” ಎಂದು ಟ್ವೀಟ್ ಮಾಡುವ ಮೂಲಕ ಮುಸ್ಲಿಮರ ವಿರುದ್ಧ ಮಾತನಾಡುವ ಬಿಜೆಪಿ ಶಾಸಕನ ವಿರುದ್ಧ ಆಕ್ರೋಶ ಹೊರಹಾಕಿದೆ.
ರಾಜಕೀಯ ಪಕ್ಷ ಬದಲಾದಂತೆ “ಹಿಂದೂ ಉಲಿ”ಯ ವೇಷವೂ ಬದಲಾಗುತ್ತದೆ!
ಮುಸ್ಲಿಮರೊಂದಿಗೆ ವ್ಯಾಪಾರ, ವ್ಯವಹಾರ.
ಮುಸ್ಲಿಮರೊಂದಿಗೆ ಬದುಕು.
ಹೊರಗೆ ಮಾತ್ರ ಮುಸ್ಲಿಮರ ಮೇಲೆ ದ್ವೇಷ ಭಾಷಣ.@BasanagoudaBJP ಅವರೇ, ಮುಸ್ಲಿಂ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತಿದಿರಿ!ನೀವು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿಕೊಂಡು, ಜನತೆಗೆ ದ್ವೇಷ ತುಂಬುವ… pic.twitter.com/zhqpmFkPdD
— Karnataka Congress (@INCKarnataka) December 9, 2023
“ನೀವು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿಕೊಂಡು, ಜನತೆಗೆ ದ್ವೇಷ ತುಂಬುವ ನಿಮ್ಮ ಬೂಟಾಟಿಕೆಯನ್ನು ಇನ್ನಾದರೂ ಬಿಡಿ” ಎನ್ನುವ ಮೂಲಕ ವಿಜಯಪುರದ ಬಿಜೆಪಿ ಶಾಸಕನಿಗೆ ಕಾಂಗ್ರೆಸ್ ಸಲಹೆ ನೀಡಿದೆ.