ರಾಷ್ಟ್ರೀಯ ಪಕ್ಷ ಸ್ಥಾನಮಾನ ಕಳೆದುಕೊಂಡ ಎನ್‌ಸಿಪಿ, ಟಿಎಂಸಿ,ಸಿಪಿಐ

Date:

Advertisements

ಭಾರತೀಯ ಚುನಾವಣಾ ಆಯೋಗವು ಟಿಎಂಸಿ, ಎನ್‌ಸಿಪಿ ಹಾಗೂ ಭಾರತೀಯ ಕಮ್ಯುನಿಸ್ಟ್ ಪಕ್ಷಗಳಿಗೆ ನೀಡಿರುವ ರಾಷ್ಟ್ರೀಯ ಪಕ್ಷಗಳ ಸ್ಥಾನಮಾನವನ್ನು ವಾಪಸ್‌ ಪಡೆದಿದೆ. ಅಂತೆಯೇ ಅರವಿಂದ್‌ ಕೇಜ್ರೀವಾಲ್‌ ನೇತೃತ್ವದ ಅಮ್‌ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಸ್ಥಾನಮಾನವನ್ನು ನೀಡಿದೆ.

“ಎರಡು ಲೋಕಸಭಾ ಚುನಾವಣೆಗಳು ಹಾಗೂ 21 ವಿಧಾನಸಭಾ ಚುನಾವಣೆಗಳಲ್ಲಿ ಮೂರು ಪಕ್ಷಗಳಿಗೂ ಸಾಕಷ್ಟು ಅವಕಾಶವನ್ನು ಒದಗಿಸಿದ ನಂತರ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿ ರಾಷ್ಟ್ರೀಯ ಪಕ್ಷಗಳ ಮಾನ್ಯತೆ ಹಿಂತೆಗೆದುಕೊಳ್ಳಲಾಗಿದೆ” ಎಂದು ಚುನಾವಣಾ ಸಮಿತಿ ತನ್ನ ಹೇಳಿಕೆಯಲ್ಲಿ ಪ್ರಕಟಿಸಿದೆ.

ಅದೇ ರೀತಿ ಆರು ಪ್ರಮುಖ ಪಕ್ಷಗಳಾದ ಉತ್ತರ ಪ್ರದೇಶದ ಆರ್‌ಎಲ್‌ಡಿ, ಆಂಧ್ರಪ್ರದೇಶದ ಬಿಆರ್‌ಎಸ್, ಮಣಿಪುರದಲ್ಲಿ ಪಿಡಿಎ, ಪುದುಚೇರಿಯ ಪಿಎಂಕೆ, ಪಶ್ಚಿಮ ಬಂಗಾಳದ ಆರ್‌ಎಸ್‌ಪಿ ಮತ್ತು ಮಿಜೋರಾಂನ ಎಂಪಿಸಿಗೆ ನೀಡಲಾಗಿದ್ದ ರಾಜ್ಯ ಪಕ್ಷದ ಸ್ಥಾನಮಾನವನ್ನು ರದ್ದುಗೊಳಿಸಲಾಗಿದೆ. ಅವು ನೋಂದಾಯಿತ ಗುರುತಿಸಲ್ಪಡದ ರಾಜಕೀಯ ಪಕ್ಷಗಳಾಗಿ ಉಳಿಯುತ್ತವೆ.

Advertisements

ನಾಗಲ್ಯಾಂಡಿನ ರಾಮ್‌ ವಿಲಾಸ್‌ ನೇತೃತ್ವದ ಲೋಕಜನಶಕ್ತಿ, ಮೇಘಾಲಯದ ವಾಯ್ಸ್ ಆಫ್‌ ದಿ ಪೀಪಲ್‌ ಪಾರ್ಟಿ ಹಾಗೂ ತ್ರಿಪುರಾದ ತಿಪ್ರಾ ಮೋತಾ ಪಕ್ಷಕ್ಕೆ ಗುರುತಿಸಲ್ಪಡುವ ರಾಜಕೀಯ ಪಕ್ಷಗಳ ಮಾನ್ಯತೆ ನೀಡಲಾಗಿದೆ.

ಆಮ್ ಆದ್ಮಿ ಪಕ್ಷವು, ಚುನಾವಣಾ ಆಯೋಗದ ನಿಯಮ 6 ಬಿ (iii) ಯ ಷರತ್ತನ್ನು ಪೂರೈಸಿದೆ. ಅಂದರೆ ದೆಹಲಿ, ಗೋವಾ, ಪಂಜಾಬ್ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಚುನಾವಣಾ ಕಾರ್ಯಕ್ಷಮತೆಯ ಆಧಾರದಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಲ್ಪಟ್ಟಿದೆ.

ರಾಷ್ಟ್ರೀಯ ಮಾನ್ಯತೆ ಕಳೆದುಕೊಂಡಿರುವ ಪಕ್ಷಗಳು ಕೂಡ ಮುಂದಿನ ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಯಕ್ಷಮತೆಯ ಆಧಾರದ ಮೇಲೆ ಸ್ಥಾನಮಾನವನ್ನು ಮರಳಿ ಪಡೆಯಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

ಪ್ರಸ್ತುತ ಬಿಜೆಪಿ, ಕಾಂಗ್ರೆಸ್, ಸಿಪಿಐ(ಎಂ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮತ್ತು ಎಎಪಿ ರಾಷ್ಟ್ರೀಯ ಪಕ್ಷಗಳಾಗಿವೆ.

ರಾಷ್ಟ್ರೀಯ ಪಕ್ಷದ ರಚನೆ ಹೇಗೆ?
ಭಾರತದ ಚುನಾವಣಾ ಆಯೋಗ ಕೆಲ ಮಾನದಂಡಗಳ ಮೇಲೆ ಚುನಾಯಿತ ಪಕ್ಷಗಳಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡುತ್ತದೆ.ಆಯೋಗ ನೀಡುವ ಷರತ್ತಿನಲ್ಲಿ ಒಂದನ್ನು ಪೂರೈಸಿದರೂ ಪಕ್ಷಗಳಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಲಾಗುತ್ತದೆ.

ಆಯೋಗದ ಷರತ್ತಿನ ಪ್ರಕಾರ 3 ರಾಜ್ಯಗಳ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಶೇ.2 ಸ್ಥಾನ ಗೆಲ್ಲಬೇಕು. ನಾಲ್ಕು ಲೋಕಸಭಾ ಸ್ಥಾನಗಳ ಜೊತೆಗೆ, ಪಕ್ಷವು ಲೋಕಸಭೆಯಲ್ಲಿ ಶೇ.6 ಮತಗಳನ್ನು ಅಥವಾ ಯಾವುದೇ ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ ಶೇ.6ರಷ್ಟು ಮತಗಳನ್ನು ಗಳಿಸಬೇಕು. 4 ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಪಕ್ಷವು ಪ್ರಾದೇಶಿಕ ಪಕ್ಷವಾಗಿ ಗುರುತಿಸಲ್ಪಡುವುದು.

ರಾಷ್ಟ್ರೀಯ ಪಕ್ಷವಾದರೆ ಏನು ಪ್ರಯೋಜನ?
ಭಾರತದಾದ್ಯಂತ ಬೇರಾವುದೇ ರಾಜಕೀಯ ಪಕ್ಷವು ರಾಷ್ಟ್ರೀಯ ಪಕ್ಷವಾದ ಬಳಿಕ ಅದರ ಚಿಹ್ನೆಯನ್ನು ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷದ ಕಚೇರಿ ಸ್ಥಾಪಿಸಲು ಸರಕಾರದಿಂದ ಭೂಮಿ ಅಥವಾ ಕಟ್ಟಡವನ್ನು ಪಡೆಯಬಹುದು.ರಾಷ್ಟ್ರೀಯ ಪಕ್ಷಗಳು ಗರಿಷ್ಠ 40 ಮಂದಿ ಸ್ಟಾರ್ ಪ್ರಚಾರಕರನ್ನು ಹೊಂದಬಹುದು. ಆದರೆ, ರಾಜ್ಯ ಅಥವಾ ಪ್ರಾದೇಶಿಕ ಪಕ್ಷಗಳಿಗೆ ಈ ಅವಕಾಶ ಕೇವಲ 20ಕ್ಕೆ ಸೀಮಿತ. ಅಲ್ಲದೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ನಿರ್ದಿಷ್ಟ ಪ್ರಸಾರ ಪಡೆದು, ಪಕ್ಷದ ಸಂದೇಶಗಳನ್ನು ರವಾನಿಸಬಹುದು.

ಪ್ರತಿ 10 ವರ್ಷಕ್ಕೊಮ್ಮೆ ಪರಿಶೀಲನೆ
ಪ್ರತಿ 10 ವರ್ಷಕ್ಕೊಮ್ಮೆ ಚುನಾವಣಾ ಆಯೋಗ ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ವಿಮರ್ಶೆಗೊಳಪಡಿಸುತ್ತದೆ. ಈ ಹಿಂದೆ ಪ್ರತಿ 5 ವರ್ಷಕ್ಕೊಮ್ಮೆ ರಾಷ್ಟ್ರೀಯ ಪಕ್ಷದ ಮಾನ್ಯತಾ ವಿಮರ್ಶೆಯನ್ನು ಆಯೋಗ ಮಾಡುತ್ತಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X