ಶಿವಮೊಗ್ಗದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ನೌಕರರ ಸಂಘ, ʼನ್ಯಾಷನಲ್ ಇನ್ನೋವೇಟಿವ್ ಅವಾರ್ಡ್ʼ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಅಭಿನಂದನೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, “ಶಿವಮೊಗ್ಗದ ಸಮಸ್ತ ಶಿಕ್ಷಕರು ಹಾಗೂ ಕಚೇರಿಯ ಕ್ರಿಯಾಶೀಲಾತ್ಮಕವಾದ ಕೆಲಸಗಳು ನನಗೆ ನ್ಯಾಷನಲ್ ಅವಾರ್ಡ್ ಬರಲು ಕಾರಣ” ಎಂದರು.
ಈ ವೇಳೆ ಶಿವಕುಮಾರ್ ಎಂ.ಎಲ್. ರವಿಕುಮಾರ್, ಎ.ಆರ್. ಸತೀಶ್, ತಿಪ್ಪೇಶ್, ಮುಖ್ಯ ಶಿಕ್ಷಕ ಸುಧೀಂದ್ರ, ಪೆಂಚಾಲಯ್ಯ, ರುದ್ರಪ್ಪ ಮಾರಕಳ್ಳಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಜರಿದ್ದರು.