ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಡಿಸೆಂಬರ್ 18ರಂದು ಹಾವೇರಿಯ ಅಂಬೇಡ್ಕರ್ ಭವನದಲ್ಲಿ ‘ಮಾದಿಗರ ಆತ್ಮಗೌರವ ಸಮಾವೇಶ’ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ಮುಖಂಡ ಉಡಚಪ್ಪ ಮಾಳಗಿ ತಿಳಿಸಿದ್ದಾರೆ.
ಜಿಲ್ಲೆಯ ಕಾಗಿನೆಲೆಯಲ್ಲಿ ನಡೆದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸದಾಶಿವ ಆಯೋಗದ ಜಾರಿಗಾಗಿ ಹಾಗೂ ಮಾದಿಗ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಮಾವೇಶದಲ್ಲಿ ಒತ್ತಾಯಿಸುತ್ತೇವೆ ಎಂದರು.
ಮಾದಿಗ ಸಮಾಜದವರು ಎಲ್ಲಾ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹೊಂದಬೇಕಾಗಿದೆ. ಡಿ.18, ಸೋಮವಾರ ಜರುಗುವ ಮಾದಿಗರ ಆತ್ಮಗೌರವ ಸಮಾವೇಶಕ್ಕೆ ಜಿಲ್ಲೆಯ ಮಾದಿಗ ಸಮಾಜದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಮುಖಂಡರು, ಹಿರಿಯರು, ಯುವಕರು, ಮಹಿಳೆಯರು, ಪ್ರತಿಯೊಬ್ಬರೂ ಮಾದಿಗರ ಆತ್ಮಗೌರವ ಸಮಾವೇಶಕ್ಕೆ ಪಕ್ಷಾತೀಕವಾಗಿ ಆತ್ಮಗೌರವದಿಂದ ಆಗಮಿಸಿ ಸಮಾಜವೇಶ ಯಶಸ್ವಿಗೊಳಿಸಿ ಎಂದು ಅವರು ಕೋರಿದರು.
ಈ ಸಂದರ್ಭದಲ್ಲಿ ಹಾವೇರಿ ವಿಧಾನಸಭಾ ಮೀಸಲು ಕ್ಷೇತ್ರದ ಪರಾಜಿತ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ, ನಿವೃತ್ತ ಉಪನಿರ್ದೇಶಕ ಎಂ. ಆಂಜನೇಯ, ದಲಿತ ಮುಖಂಡರಾದ ಸುರೇಶ ಆಸಾದಿ, ನಾಗರಾಜ ಹಾವನೂರ, ಮಾರುತಿ ಕಾಗಿನೆಲ್ಲೆ, ಸುಭಾಸ ಮಾಳಗಿ, ಹನಮಂತಪ್ಪ ಸಿ.ಡಿ, ನಿವೃತ್ತ ಶಿಕ್ಷಕರಾದ ನಾಗೇಂದ್ರಪ್ಪ ಹರಿಜನ, ಜಗದೀಶ ಹರಿಜನ, ನಾಗೇಂದ್ರ ಹರಿಜನ, ನಾಗರಾಜ ಮೊಟೆಬೆನ್ನೂರ, ಪ್ರಕಾಶ ಹರಿಜನ, ಲಲಿತಾ ಹರಿಜನ, ಈರಪ್ಪ ಹರಿಜನ, ಹನುಮಂತಪ್ಪ ಬೇವಿನಮರದ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಮುದಾಯದವರು ಪಾಲ್ಗೊಂಡಿದ್ದರು.