ಗದಗ | ದಿಕ್ಕಿಲ್ಲದ ವೃದ್ಧರಿಗೆ ಆಶ್ರಯ ನೀಡಿದ ವಿದ್ಯಾರ್ಥಿಗಳು

Date:

Advertisements

ತಮ್ಮ ತಮ್ಮ ಮನೆ ಮನೆಗಳಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಆನಂದದಿಂದ, ಖುಷಿಯಾಗಿ ವೃಧ್ದಾಪ್ಯ ಜೀವನವನ್ನು ಕಳಿಯುವ ಹಿರಿಯರು ಕಾರಣಾಂತರಗಳಿಂದ ಎಲ್ಲರಿಂದ ದೂರವಾಗಿ, ಎಲ್ಲರೂ ಇದ್ದರೂ ಇಲ್ಲದಂತೆ ಎಲ್ಲೆಂದರಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ಇಂದಿನದು. ಈವರಿಗಾಗಿ ವೃದ್ಧಾಶ್ರಮಗಳು ಎಲ್ಲೆಂದರಲ್ಲಿ ತಲೆ ಎತ್ತಿದ್ದು, ಇಲ್ಲೊಂದು ವಿಶೇಷ ವೃದ್ಧಾಶ್ರಮವಿದೆ. ಇದು ಯಾಕೆ ವಿಶೇಷವಾಗಿದೆ ಅಂದರೆ, ಈ ಆಶ್ರಮವನ್ನು ನಡೆಸುತ್ತಿರುವವರು ವಿದ್ಯಾರ್ಥಿಗಳು ಮತ್ತು ಯುವಕರು.

ಗದಗ ಜಿಲ್ಲೆಯ ನರಗುಂದ ಪಟ್ಟಣದ ಹೃದಯ ಭಾಗದಲ್ಲಿರುವ ಪುರಸಭೆಯ ಪಕ್ಕದಲ್ಲಿ ʼವೈಭವ ನಿರ್ಗತಿಕರ ವೃಧ್ದಾಶ್ರಮʼ ಇದೆ. ಈ ಆಶ್ರಮವನ್ನು ಬಹುಪಾಲು ವಿಧ್ಯಾರ್ಥಿಗಳು ಹಾಗೂ ಯುವಕರೇ ಸೇರಿ ʼಸ್ನೇಹ ಸಂಜೀವಿನಿʼ ಸಂಸ್ಥೆಯ ಅಡಿಯಲ್ಲಿ ಒಂದುವರೆ ವರ್ಷದಿಂದ ಈ ವೃಧ್ದಾಶ್ರಮವನ್ನು ನಡೆಸುತ್ತಾ ಬಂದಿದ್ದಾರೆ. ಈ ಕುರಿತು ವೈಭವ ನಿರ್ಗತಿಕ ವೃಧ್ದಾಶ್ರಮದ ಉಪಾಧ್ಯಕ್ಷ ಬಸವರಾಜ್ ಹವಳದ ಈದಿನ.ಕಾಮ್ ನೊಂದಿಗೆ ಮಾತನಾಡಿದ್ದಾರೆ.

ವೃದ್ಧಾಶ್ರಮ ಮಾಡುವ ಆಲೋಚನೆ ಹೇಗೆ ಬಂತು?

Advertisements

ಸ್ನೇಹ ಸಂಜೀವಿನಿ ಸಂಸ್ಥೆಯ ಆರಂಭಿಸಿದ ನಂತರ, ಸಂಸ್ಥೆಯ ಮೂಲಕ‌ ನಾವು ಸಮಾಜದ ಸೇವೆ ಮಾಡಬೇಕೆಂದು ನಿರ್ಧರಿಸಿದಾಗ, ಆಲೋಚನೆ ಬಂದಿದ್ದು ವೃದ್ಧಾಶ್ರಮ ಮಾಡಬೇಕೆಂದು. ಆಗ ನರಗುಂದ ಪಟ್ಟಣದಲ್ಲಿ ಬೀದಿ ಬದಿಯ ಹಿರಿಯ ವೃದ್ದರು, ಎಷ್ಟು ಇದ್ದಾರೆ ಎಂದು ಸಮೀಕ್ಷೆ ಮಾಡಿದಾಗ ಮೊದಲು  ʼಹಗಲು ಯೋಗ ಕ್ಷೇಮʼ ಆರಂಭಿಸಿ, ಅವರಿಗೆ ಮುಂಜಾನೆ ಉಪಹಾರ, ಮದ್ಯಾಹ್ನದ ಊಟ, ಸಾಯಂಕಾಲ ಊಟ ಕೊಡುತ್ತಿದ್ದೇವೆ.

ನಂತರದ ದಿನಗಳಲ್ಲಿ ಈ ರೀತಿ ಮಾಡುತ್ತೇವೆ ಎಂದು ಜನರಿಗೆ ತಿಳಿಸಿದಾಗ, ಬಸ್ ನಿಲ್ದಾಣದಲ್ಲಿ, ಬೀದಿ ಬದಿಯಲ್ಲಿ ಅನಾಥರು, ಅನಾರೋಗ್ಯದಿಂದ ಬಳಲುತ್ತಿರುವವರನ್ನು ಜನರ ಬಗ್ಗೆ ನಮಗೆ ಪೋನ್ ಮೂಲಕ ಕರೆ ಮಾಡಿ ತಿಳಿಸಿ ನಮ್ಮ ಬಳಿ ಕಳುಹಿಸುತ್ತಿದ್ದರು. ನಂತರದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದಲೂ ಪೋನ್ ಕರೆ ಮಾಡಿ ಕಳುಹಿಸಲಾರಂಭಿಸಿದರು. ಆಗ ಈ ʼಹಗಲು ಯೋಗ ಕ್ಷೇಮʼವನ್ನುʼ ವೈಭವ ನಿರ್ಗತಿಕರ ವೃಧ್ದಾಶ್ರಮʼ ಎಂದು ಹೆಸರನ್ನು ಬದಲಾಯಿಸಿ ಹಿರಿಯ ಜೀವಿಗಳಿಗೆ ಆಸರೆ ಮಾಡಿದೆವು.

ವೈಭವ ನಿರ್ಗತಿಕರ ವೃದ್ಧಾಶ್ರಮಕ್ಕೆ ದಿನದಿಂದ ದಿನಕ್ಕೆ ವೃದ್ದರು ಬರುವುದು ಹೆಚ್ಚಾದಂತೆ ಸ್ಥಳದ ಅಭಾವ ಉಂಟಾಯಿತು. ಆಗ ನರಗುಂದದ ಬಾಬಾ ಸಾಹೇಬ್ ಅವರ ಅರಮನೆಯು ಪುರಸಭೆಗೆ ಒಳಪಟ್ಟಿತು. ಪುರಸಭೆ ಅಧಿಕಾರಿಗಳ ಅನುಮತಿ ಪಡೆದು ಈ ಹಿರಿಯ ಜೀವಿಗಳ ಯೋಗಕ್ಷೇಮ ಇಲ್ಲಿ ನೋಡಿಕೊಳ್ಳುತ್ತಿದ್ದಾರೆ.

ಈ ವೃದ್ಧಾಶ್ರಮದಲ್ಲಿ ಇಪ್ಪತೈದಕ್ಕೂ ಹೆಚ್ಚು ಮಂದಿ ವೃದ್ಧರು, ಅನಾಥರು ಅಲ್ಲದೇ, ಮಾನಸಿಕ ಅಸ್ವಸ್ಥರು ಕೂಡ ಇದ್ದಾರೆ. ಒಂದೊಂದು ಸಲ ಆಸ್ಪತ್ರೆಯಲ್ಲಿ ಅಡ್ಮೀಟ್ ಆಗದ ಸ್ಥಿತಿಯಲ್ಲಿ ಇರುವಂತವರನ್ನು ಕೂಡ ಇಲ್ಲಿ ಇಟ್ಟುಕೊಂಡು ಯೋಗಕ್ಷೇಮ ನೋಡಿಕೊಂಡಿದ್ದಾರೆ. ಅವರಿಗೆ ನಿತ್ಯ ಉಪಹಾರ, ಮದ್ಯಾನದ ಊಟ ಹಾಗೂ ರಾತ್ರಿ ಊಟದ ವ್ಯವಸ್ಥೆ ಇದೆ.  ಜೊತೆಗೆ ಪ್ರತಿ ಹದಿನೈದು ದಿನಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಯುತ್ತದೆ. ಅವರಿಗೆ ಯಾವುದೇ ರೀತಿಯ ಕೊರತೆ ಆಗದ ಹಾಗೆ ಇಲ್ಲಿಯ ಯುವಕರು ಅವರ ನೋಡಿಕೊಳ್ಳುತ್ತಾರೆ. ಈ ವೃದ್ಧಾಶ್ರಮದಲ್ಲಿ ಹಿರಿಯ ಜೀವಿಗಳಿಗೆ ನಾವು ಎಂದಿಗೂ ಅನಾಥ ಪ್ರಜ್ಞೆ ಭಾವ ಅವರ ಮನಸ್ಸಿನಲ್ಲಿ ಒಂದಿಂಚು ಕಾಣದ ಹಾಗೆ ಆರೈಕೆ‌ ಮಾಡುತ್ತೇವೆ ಎನ್ನುತ್ತಾರೆ ಈ ಯುವಕರು.

ಮರಳಿ ಮನೆಗೆ ಕಾರ್ಯಕ್ರಮ

ʼವೈಭವ ನಿರ್ಗತಿಕರ ವೃದ್ಧಾಶ್ರಮʼದಲ್ಲಿ ಅನಾಥ ಹಿರಿಯ ಜೀವಿಗಳು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಿ ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸುತ್ತಾರೆ.  ಅವರ ಹೆಸರು, ಊರು ಎಲ್ಲ ಮಾಹಿತಿ ಕಲೆ ಹಾಕಿ ಅವರ ಕುಟುಂಬದವರನ್ನು ಸಂಪರ್ಕಿಸಿ ಮನವೊಲಿಸಿ ಮತ್ತೆ ಕುಟುಂಬ ಸೇರಿಸುವ ಪ್ರಯತ್ನ ಮಾಡುತ್ತಾರೆ. ಇದುವರೆಗೂ ಮರಳಿ ಮನೆಗೆ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು ಹನ್ನೆರಡು ಜನರನ್ನು ತಮ್ಮ ಕುಟುಂಬಗಳಿಗೆ ಸೇರಿಸಲಾಗಿದೆ.

ವೃದ್ದಾಶ್ರಮ ನಿರ್ವಹಣೆ ಹೇಗೆ

ವೈಭವ ನಿರ್ಗತಿಕ ವೃದ್ಧಾಶ್ರಮವನ್ನು ನಡೆಸಲಿಕ್ಕೆ ಅನೇಕರು ಸಹಾಯ ನೀಡುತ್ತಿದ್ದಾರೆ. ಎನ್ಎಸ್ಎಸ್‌ ವಿದ್ಯಾರ್ಥಿ ಬಳಗದ ವಿದ್ಯಾರ್ಥಿಗಳು ಅವರವರ ಊರುಗಳಲ್ಲಿ ಜೋಳ, ಗೋಧಿ, ಅಕ್ಕಿ ಹಾಗೂ ಹಣದ ಸಹಾಯವನ್ನು ಪಡೆದು ಸಂಗ್ರಹಿಸುತ್ತಾರೆ.

ವೃದ್ಧಾಶ್ರಮ ನಡೆಸಲು ಪ್ರತಿ ತಿಂಗಳು ಸುಮಾರು ಒಂದು ಲಕ್ಷದವರೆಗೆ ಬರುತ್ತದೆ. ದಾನಿಗಳಿಂದ ಸಂಗ್ರಹಿಸಿದ ದೇಣಿಗೆಯಿಂದ ವೃದ್ಧಾಶ್ರಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಜನ ಜಾಗೃತಿ ಕಾರ್ಯಕ್ರಮ

ಸ್ನೇಹ ಸಂಜೀವಿನಿ ಸಂಸ್ಥೆಯಿಂದ ನಾವೆಲ್ಲರೂ ಪ್ರತಿ ತಿಂಗಳಿಗೊಮ್ಮೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಜೀವಿಗಳ ಯೋಗ ಕ್ಷೇಮ ಎಷ್ಟು ಮುಖ್ಯ, ಅವರನ್ನು ನಾವು ಯಾಕೆ ಪ್ರೀತಿಯಿಂದ ಕಾಣಬೇಕು. ಯಾಕೆ ವೃಧ್ದಾಶ್ರಮಗಳು ಹೆಚ್ಚಾಗುತ್ತಿವೆ ಇತ್ಯಾದಿ ವಿಷಯಗಳ ಕುರಿತು ಜನರಲ್ಲಿ ಅರಿವನ್ನು ಮೂಡಿಸುತ್ತಿದ್ದಾರೆ.

ಹಿರಿಯ ಜೀವಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಿರುವುದು ಖುಷಿಯ ವಿಚಾರ ಎನ್ನುತ್ತಾರೆ ʼವೈಭವ ನಿರ್ಗತಿಕ ವೃಧ್ದಾಶ್ರಮʼದ ಉಪಾಧ್ಯಕ್ಷ ಬಸವರಾಜ್ ಹವಳದ.

ಮಕ್ಕಳನ್ನು ತಂದೆ ತಾಯಿಗಳು ಕಷ್ಟ ಪಟ್ಟು ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡುತ್ತಾರೆ. ಆದರೆ, ಅದೆಲ್ಲವನ್ನು ಮರೆತು ಅಮಾನವೀಯತೆಯಿಂದ ಅವರನ್ನು ಮನೆಯಿಂದ ಅಟ್ಟುತ್ತಿರುವುದರಿಂದ ವೃದ್ದಾಶ್ರಮಗಳು ಹುಟ್ಟುತ್ತಿವೆ. ನಿಮ್ಮಲ್ಲಿ ಕೇಳಿಕೊಳ್ಳುವುದಿಷ್ಟೆ ವೃದ್ದಾಶ್ರಮಗಳು ಹೆಚ್ಚಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ನಿಮ್ಮ ನಿಮ್ಮ ತಂದೆ ತಾಯಿಯನ್ನು ಪ್ರೀತಿಸಿ, ಪ್ರೀತಿಯಿಂದ ಸಲುಹಿರಿ ಎಂದು ಹೇಳುತ್ತೇನೆ ಅಷ್ಟೇ ಎಂದು ಕಳಕಳಿ ವ್ಯಕ್ತಪಡಿಸುತ್ತಾರೆ.

ಈ ವೈಭವ ನಿರ್ಗತಿಕ ವೃಧ್ದಾಶ್ರಮದ ಹಿರಿಯ ಜೀವಿಗಳ ಆರೋಗ್ಯ, ಊಟದ ವ್ಯವಸ್ಥೆ, ಯೋಗಕ್ಷೇಮಕ್ಕೆ ಸಾಕಷ್ಟು ಖರ್ಚು ವೆಚ್ಚವಾಗುತ್ತದೆ. ಹಾಗಾಗಿ ಈ ವೃದ್ದಾಶ್ರಮಕ್ಕೆ ಮಂಚ, ಹಾಸಿಗೆ, ವಾಹನದ ಅವಶ್ಯಕತೆ ಇದೆ. ಸಹಾಯ ಮಾಡಬಯಸುವವರು ಆಶ್ರಮವನ್ನು ಸಂಪರ್ಕಿಸಬಹುದು.

ಬಸವರಾಜ್ ಹವಳದ ಮೊಬೈಲ್ ನಂ: 7996875651
ಕಿರಣ ಮಳಲಿ ಮೊ ನಂ: 7996875651

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X