ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆ ಇದೆ ತನಿಖೆ ನಡೆಸಿ ಎಂದು ಯುವತಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೌದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಯೊಬ್ಬರು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಡಿಸೆಂಬರ್ 12ರ ರಾತ್ರಿ ಕೋರಮಂಗಲದ ಪಬ್ಗೆ ಯುವತಿ ತೆರಳಿದ್ದಳು. ಬಳಿಕ ಯುವತಿ ಮನೆಗೂ ಕೂಡ ತೆರಳಿರಲಿಲ್ಲ, ಆಕೆಗೆ ಪ್ರಜ್ಞೆ ಬಂದಾಗ ಆಡುಗೋಡಿ ದೇವೇಗೌಡ ಲೇಔಟ್ ಬಳಿ ಇದ್ದಳು. ಅಲ್ಲೇ ಇರುವ ಮನೆಯೊಂದಕ್ಕೆ ತೆರಳಿದ ಯುವತಿ, ಆ ಮನೆಯವರ ಸಹಾಯದಿಂದ 112 ಗೆ ಕರೆ ಮಾಡಿದ್ದಳು.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಆಡುಗೋಡಿ ಠಾಣೆ ಪೊಲೀಸರು ಯುವತಿಯನ್ನು ರಕ್ಷಿಸಿ, ಕೋರಮಂಗಲ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ನಾನು ರಾತ್ರಿ ಪಬ್ಗೆ ತೆರಳಿದ್ದೆ, ಬೆಳಗ್ಗೆ ಕಣ್ಣು ಬಿಟ್ಟು ನೋಡಿದಾಗ ಆಡುಗೋಡಿಯಲ್ಲಿದ್ದೆ, ನನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿರುವ ಶಂಕೆ ಇದೆ. ನಾನೆಲ್ಲಿದ್ದೆ ಎಂಬುದನ್ನು ತನಿಖೆ ನಡೆಸಿ ಹಾಗೂ ನನ್ನ ಮೇಲೆ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆ ಇದೆ ಹೀಗಾಗಿ, ತನಿಖೆ ನಡೆಸಿ ಎಂದು ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಳದಿ ಮಾರ್ಗದ ನಮ್ಮ ಮೆಟ್ರೋ ನಿಗದಿತ ಗಡುವಿಗಿಂತಲೂ ತಡವಾಗಿ ಕಾರ್ಯಾಚರಣೆ
ಯುವತಿ ನೀಡಿರುವ ಹೇಳಿಕೆ ಮೇಲೆ ದೂರು ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.