ಆನೆ ತುಳಿತಕ್ಕೆ ಒಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಬೇಕು ಮತ್ತು ನೊಂದ ಕುಟುಂಬಕ್ಕೆ ಅನುಕಂಪ ಆಧಾರದ ಮೇಲೆ ಉದ್ಯೋಗ ನೀಡಬೇಕು ಎಂದು ಆದಿವಾಸಿ ಸಂಘಟನೆ ಒತ್ತಾಯಿಸಿದೆ.
ಮೇಲುಕಾಮನ ಹಳ್ಳಿ ಗ್ರಾಮದ ಆಡಿ ಕಣಿವೆಯ ನಾಗೇಶ ಎಂಬ ವ್ಯಕ್ತಿ, ಮೂರು ತಿಂಗಳ ಹಿಂದೆ ಬಯಲು ಶೌಚಾಲಯಕ್ಕೆಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಮನೆ ಹಿಂಭಾಗ ತೆರಳಿದ್ದರು. ಈ ವೇಳೆ ಆನೆ ದಾಳಿ ಮಾಡಿತ್ತು. ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಈ ವಿಷಯವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಸೌಲಭ್ಯ ಒದಗಿಸಿಲ್ಲ ಮತ್ತು ಚಿಕಿತ್ಸೆ ಸಿಗದ ವ್ಯಕ್ತಿ ಡಿ.16ರಂದು ಮರಣ ಹೊಂದಿರುತ್ತಾರೆ. ಮೃತ ವ್ಯಕ್ತಿಯ ಕುಟುಂಬ ಅನಾಥವಾಗಿದ್ದು, ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಬೇಕು ಮತ್ತು ನೊಂದ ಕುಟುಂಬಕ್ಕೆ ಅನುಕಂಪ ಆಧಾರದ ಮೇಲೆ ಉದ್ಯೋಗ ನೀಡಬೇಕು ಎಂದು ಆದಿವಾಸಿ ಸಂಘಟನೆ ಒತ್ತಾಯಿಸಿದೆ.
ಈ ವೇಳೆ ಸಂಘಟನೆಯ ಸದಸ್ಯರಾದ ರಾಜೇಂದ್ರ.ಎಸ್ ಮತ್ತು ಸುರೇಶ್ ಜಿಗಲ್, ಮದ್ದೂರು ಕಾಲೋನಿ ನಾಗಮ್ಮ ಸುಲೋಚನಾ ತಾಯಮ್ಮ ಇನ್ನಿತರರು ಉಪಸ್ಥಿತರಿದ್ದರು.