ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಅನೇಕ ನೋವು ನಲಿವುಗಳನ್ನು ಎದುರಿಸುವ ಮೂಲಕ ಸಾಧನೆ ಮಾಡಬೇಕಾಗುತ್ತದೆ. ಆ ಸಾಧನೆಯ ಹಿಂದೆ ಪರಿಶ್ರಮವಿದೆ ಎಂದು ಸಾಂಸ್ಕೃತಿಕ ಸಮ್ಮೇಳನಾಧ್ಯಕ್ಷ ಡಾ. ಎಚ್. ದಿಡ್ಡಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಭಾನುವಾರ (ಡಿ.17) ಬೆಳಗಾವಿ ವಿಭಾಗೀಯ ಮಟ್ಟದ ಸಾಂಸ್ಕೃತಿಕ ಸಮ್ಮೇಳನದ ಈ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ಕನ್ನಡ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.
ಶಿಕ್ಷಣ, ಸಾಹಿತ್ಯ, ಸಂಘಟನೆ, ಸಮೂಹ ಮಾಧ್ಯಮ, ಸಮಾಜಸೇವೆ, ಉದ್ಯಮ, ಹೋರಾಟ, ಕಾನೂನು ಸೇವೆ, ಪರಿಸರ, ಬಯಲಾಟ, ಸಹಕಾರ, ಕೃಷಿ, ಆಡಳಿತ, ಮುಳುಗಡೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಸಾಧಕರನ್ನು ಸನ್ಮಾನಿಸಲಾಯಿತು.
ಬಾಗಲಕೋಟೆ ಜಿಲ್ಲಾ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಹೇಮಾ ದಡ್ಡಿ, ಬಿ.ಎಫ್. ಹೊರಕೇರಿ, ಸಿದ್ದರಾಮ ಶಿರೋಳ, ಆರ್.ಎಂ. ಸಾರವಾಡ, ಲೋಕಣ್ಣ ಭಜಂತ್ರಿ, ಪಿ.ಟಿ. ನೀಲಗುಂದ, ಶೈಲಜಾ ಸಿಂಪಿ, ಪ್ರೇಮಾ ಚಿಕ್ಕಣ್ಣವರ, ಡಿ.ಬಿ. ಹಡಗಲಿ ಮೊದಲಾದವರು ಇದ್ದರು.