ಈ ವರ್ಷ ಶಾರೂಖ್ ಖಾನ್ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಈ ಮೊದಲು ತೆರೆಕಂಡಿದ್ದ ಜವಾನ್, ಪಠಾಣ್ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ, ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿತ್ತು.
ಇಂದು(ಡಿ.21) ಅವರ ಮೂರನೇ ಚಿತ್ರ ಡಂಕಿ (Dunki) ದೇಶಾದ್ಯಂತ ಹಲವಾರು ಸಿನಿಮಾ ಥಿಯೇಟರ್ಗಳಲ್ಲಿ ಬಿಡುಗಡೆ ಆಗಿದೆ. ಬಾಲಿವುಡ್ನ ಸ್ಟಾರ್ ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರ ಜೊತೆ ಶಾರೂಖ್ ಖಾನ್ ಇದೇ ಮೊದಲ ಬಾರಿಗೆ ಕೈ ಜೋಡಿಸಿ, ನಟಿಸಿದ್ದಾರೆ. ಇಂದು ಬಿಡುಗಡೆಗೊಂಡಿರುವ ಸಿನಿಮಾದ ಮೊದಲ ಶೋ ಈಗಾಗಲೇ ಮುಗಿದಿದ್ದು, ಮತ್ತೊಮ್ಮೆ ಸೂಪರ್ ಹಿಟ್ ಆಗುವ ಲಕ್ಷಣಗಳು ಕಾಣುತ್ತಿವೆ. ಥಿಯೇಟರ್ನಿಂದ ಹೊರಬಂದ ಜನರು, “ಶಾರೂಕ್ ಖಾನ್ ಆ್ಯಕ್ಟಿಂಗ್ ಕಿ ಭಗವಾನ್” ಎಂದು ಹೊಗಳುತ್ತಿದ್ದಾರೆ.
ಒಂದು ವಿಶೇಷವಾದ ಕಾನ್ಸೆಪ್ಟ್ ಇಟ್ಟುಕೊಂಡು ರಾಜ್ಕುಮಾರ್ ಹಿರಾನಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ‘ಡಂಕಿ’ಯಲ್ಲಿ ಶಾರೂಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಂ ಕೊಚ್ಚಾರ್, ಅನಿಲ್ ಗ್ರೋವರ್ ಮುಂತಾದವರು ನಟಿಸಿದ್ದಾರೆ. ಎರಡು ವಾರಗಳ ಹಿಂದೆ ಬಿಡುಗಡೆಗೊಂಡಿದಗದ ಚಿತ್ರದ ಟ್ರೇಲರ್ ಈಗಾಗಲೇ ಯೂಟ್ಯೂಬ್ನಲ್ಲಿ 74 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆದಿತ್ತು.
Not a single negative review from the neutral Audience Unanimously Positive reviews from the public
SHAH RUKH KHAN ACTING KA BHAGWAN HAI 💥💥🔥🔥#Dunki #DunkiReview pic.twitter.com/vl0AjAwIRl
— Ahmed (FAN) (@AhmedKhanSrkMan) December 21, 2023
ದೇಶ ಬಿಟ್ಟು ವಿದೇಶಕ್ಕೆ ಹೋಗಿ ನೆಲೆ ನಿಲ್ಲಲು ಕನಸು ಕಾಣುವವರ ರೋಚಕ ಪಯಣದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ತಮ್ಮ ಈ ಹಿಂದಿನ ‘ಪಿಕೆ’ ಸೇರಿದಂತೆ ಇತರ ಸಿನಿಮಾಗಳ ರೀತಿಯೇ ಒಂದು ಗಂಭೀರವಾದ ವಿಷಯವನ್ನು ಕಾಮಿಡಿ ಮೂಲಕ ನಿರ್ದೇಶಕ ರಾಜ್ಕುಮಾರ್ ಹಿರಾನಿ ಜನರ ಮುಂದಿಟ್ಟಿದ್ದಾರೆ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಎಂದು ಜನರು ಮಾಹಿತಿ ನೀಡುತ್ತಿದ್ದಾರೆ.
ಈ ನಡುವೆ #DunkiReview ಎಂಬ ಹ್ಯಾಷ್ಟ್ಯಾಗ್ ಟ್ವಿಟ್ಟರ್, ಫೇಸ್ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ ಆಗಿದೆ.

50 ನಿಮಿಷ ‘ಲೈವ್ ಸ್ಟ್ರೀಮ್’ ಮಾಡಿದ ಕಿಡಿಗೇಡಿ ಅಭಿಮಾನಿ!
ಕಿಡಿಗೇಡಿ ಅಭಿಮಾನಿಯೊಬ್ಬ ಗುರುವಾರ ಬೆಳಗ್ಗೆ ಸಿನಿಮಾ ಹಾಲ್ನಿಂದ ಟ್ವಿಟ್ಟರ್ನಲ್ಲಿ ಡಂಕಿಯನ್ನು ‘ಲೈವ್ ಸ್ಟ್ರೀಮ್’ ಮಾಡಿದ್ದಾರೆ. ಈ ವೀಡಿಯೋವನ್ನು ಡಿಲೀಟ್ ಮಾಡುವುದಕ್ಕೂ ಮೊದಲು ಅವರು ಚಿತ್ರದ ಮೊದಲ 50 ನಿಮಿಷಗಳನ್ನು ‘ಲೈವ್ ಸ್ಟ್ರೀಮ್’ ಮೂಲಕ ಹಂಚಿಕೊಂಡಿದ್ದರು. ಸ್ಟ್ರೀಮ್ ಒಂದು ಹಂತದಲ್ಲಿ 1,37,000 ವೀಕ್ಷಕರನ್ನು ಹೊಂದಿತ್ತು ಎಂದು ‘ಹಿಂದುಸ್ಥಾನ್ ಟೈಮ್ಸ್’ ವರದಿ ಮಾಡಿದೆ.