ಗ್ರಾಮೀಣ ಮತ್ತು ಪಟಣಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಕಾರ್ಯನಿರ್ವಹಿಸಲು ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಕಂದಾಯ ಮತ್ತು ತಹಶೀಲ್ದಾರರ ಕಚೇರಿಯಲ್ಲಿ ನಡೆದ ಬರಗಾಲ ಟಾಸ್ಕ್ಫೋರ್ಸ್ ಸಭೆಯಲ್ಲಿ ಮಾತನಾಡಿದರು.
“ಗ್ರಾಮೀಣ ಪ್ರದೇಶಗಳಿಗೆ ನೀರಿನ ಕೊರತೆಯಾಗದಂತೆ ಎಚ್ಚರವಹಿಸಿ ಮತ್ತು ಜೆಜೆಎಂಗಳ ದುರಸ್ತಿ ಕಾಮಗಾರಿಯನ್ನು ಬೇಗ ಮುಗಿಸಿ. ಬೇಸಿಗೆಯಲ್ಲಿ ಗ್ರಾಮ ಮತ್ತು ಪಟ್ಟಣಗಳಲ್ಲಿ ನೀರಿನ ಕೊರೆತೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಎಚ್ಚರ ವಹಿಸಬೇಕು” ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿರಹಟ್ಟಿ ಕ್ಷೇತ್ರದ ಎರಡು ಕಡೆ ಗೋಶಾಲೆ ತೆರೆಯಲು ಸೂಕ್ತವಾದ ಜಾಗವನ್ನು ಪರಿಶೀಲಿಸಿ ಮಾಹಿತಿ ಕೊಡಲು ತಾಲೂಕಿನ ಪಶು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಪಶುವೈದ್ಯಾಧಿಕಾರಿ ಹವಳದ ಅವರು, “ಶೆಟ್ಟಿಕೇರಿ ಮತ್ತು ಬಾಲೇಹೊಸೂರು ಗ್ರಾಮದಲ್ಲಿ ಕೆರೆಗಳಿದ್ದು, ಅಲ್ಲಿ ನೀರಿನ ವ್ಯವಸ್ಥೆ ಇರುವುದರಿಂದ ಅಲ್ಲಿ ಗೋಶಾಲೆ ತೆರೆಯಲು ಸೂಕ್ತವಾದ ಸ್ಥಳಗಳಿವೆ” ಎಂದು ಸಲಹೆ ಕೊಟ್ಟರು.
“ಬಜಾಜ್ ಅಲೈನ್ಸ್ನಿಂದ ಬೆಳೆವಿಮೆ ರೈತರ ಖಾತೆಗೆ ಜಮೆ ಆಗಿದ್ದರಿಂದ ರೈತರಿಗೆ ಅನುಕೂಲವಾಗಿದೆ. ಇನ್ನು ಶೇ.50ರಷ್ಟು ವಿಮೆ ಜಮಾ ಆಗಬೇಕಾಗಿದೆ. ಅದರೂ ಇದರಿಂದ ನ್ಯೂನ್ಯತೆಗಳು ಕಡಿಮೆ ಆದಂತಾಗಿದೆ. ರೈತರ ಖಾತೆಗೆ ಬರಪರಿಹಾರ ಜಮಾ ಆಗಬೇಕಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ರೈತರ ಖಾತೆಗೆ ಪರಿಹಾರದ ಹಣ ಜಮಾ ಮಾಡುತ್ತದೆಂಬ ಭರವಸೆ ಇದೆ” ಎಂದು ಶಾಸಕ ಚಂದ್ರು ಲಮಾಣಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ; ದುರಸ್ತಿಗೆ ಗ್ರಾಮಸ್ಥರ ಆಗ್ರಹ
ಸಭೆಯಲ್ಲಿ ಶಾಸಕ ಚಂದ್ರು ಲಮಾಣಿ, ತಹಶೀಲ್ದಾರ್ ವಾಸುದೇವ್ ಸ್ವಾಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರಾ, ಗ್ರೇಡ್ ಟು ತಹಶೀಲ್ದಾರ್ ಮಂಜುನಾಥ ಅಮವಾಸೆ, ಕೃಷಿ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು, ಪಶು ವೈದ್ಯರು, ನೀರು ಸರಬರಾಜು ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.