ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ ಸದ್ಯ 10 ಸಾವಿರಕ್ಕೂ ಅಧಿಕ ಪಕ್ಷಿಗಳು ವಲಸೆ ಬಂದಿದ್ದು. ಮುಂದಿನ 3 ತಿಂಗಳಲ್ಲಿ ಇನ್ನೂ ಹೆಚ್ಚಿನ ಪಕ್ಷಿಗಳು ಬರುತ್ತವೆ. ಇವುಗಳ ಈಜು, ಚಿಲಿಪಿಲಿ ಕಲರವ ಒಂದಕ್ಕಿಂತ ಒಂದು ಭಿನ್ನವಾದ ಪಕ್ಷಿಗಳ ನೋಟ ಪ್ರವಾಸಿಗರನ್ನು ಕೆರೆಯತ್ತ ಸೆಳೆಯುತ್ತಿವೆ.
ಕೆರೆಯ ಸುತ್ತಮುತ್ತ ವಿದೇಶಿ ಹಕ್ಕಿಗಳ ಕಲರವ ಸಂಭ್ರಮ ಹೇಳತೀರದು. ಬೆಳಿಗ್ಗೆಯಿಂದ ಸಂಜೆಯವರೆಗೂ ಈ ವಲಸೆ ಪಕ್ಷಿಗಳ ಸಾಮ್ರಾಜ್ಯ ಎಂಥವರನ್ನು ಬೆರಗು ಮೂಡಿಸ್ತಾ ಇದೆ. ಮಾಗಡಿ ಗ್ರಾಮದಲ್ಲಿರುವ ಈ ಕೇರೆ 138 ಎಕರೆಯಲ್ಲಿ ವಿಶಾಲವಾಗಿದೆ.
ಗದಗ ದಿಂದ ಬೆಂಗಳೂರಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಲಕ್ಷ್ಮೇಶ್ವರ ದಿಂದ 12 ಕಿಲೋ ಮೀಟರ್ ಅಂತರದಲ್ಲಿ ಮಾಗಡಿ ಗ್ರಾಮವಿದೆ. 138 ಎಕರೆ ವಿಸ್ತಾರದ ಈ ಕೆರೆಯಲ್ಲಿ 23 ವರ್ಷಗಳಿಂದ, ಇಟಲಿ, ರಷ್ಯಾ, ಬಾಂಗ್ಲಾದೇಶ, ನೇಪಾಳ, ಸೈಬೇರಿಯಾ, ಮಲೇಷಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಲಢಾಕ್, ಟಿಬೆಟ್ ಗಳಿಂದ ಸಹಸ್ರಾರು ಪಕ್ಷಿಗಳು ಬರುತ್ತಿವೆ.
ಪಕ್ಷಿಗಳನ್ನು ನೋಡಲು ಸುತ್ತಮುತ್ತಲ ಶಾಲಾ ಮಕ್ಕಳು ಈಗಾಗಲೇ ಪ್ರವಾಸ ಬರುತ್ತಿದ್ದು ವಿದೇಶಿ ಪಕ್ಷಿಗಳ ಕಲರವಕ್ಕೆ ಮನಸೋತಿದ್ದಾರೆ.