ಬೆಂಗಳೂರು | ಜಿನೊಮಿಕ್ ಸೀಕ್ವೆನ್ಸ್​ಗೆ 45 ಸ್ಯಾಂಪಲ್ ಕಳಿಸಿದ ಆರೋಗ್ಯ ಇಲಾಖೆ

Date:

Advertisements

2019ರಲ್ಲಿ ಸಾವಿರಾರು ಜನರನ್ನು ಬಲಿ ಪಡೆದ ಕೊರೋನಾ ಕೆಲಕಾಲದ ವಿರಾಮದ ಬಳಿಕ ಮತ್ತೆ ಹೊಸ ರೂಪಾಂತರದೊಂದಿಗೆ ಆಗಮಿಸಿದೆ. ಮೊದಲಿಗೆ ಕಾಣಿಸಿಕೊಂಡಾಗಿನಿಂದ ಈವರೆಗೆ ಕೊರೋನಾ ವೈರಸ್‌ ರೂಪಾಂತರಗೊಳ್ಳುತ್ತಲೇ ಸಾಗಿದೆ. ಡೆಲ್ಟಾ, ಒಮೈಕ್ರಾನ್‌ ಇವು ಕೊರೋನಾ ವೈರಸ್‌ನ ರೂಪಾಂತರಗೊಂಡ ತಳಿಗಳು. ಇವುಗಳಲ್ಲಿ ಹಲವು ಉಪತಳಿಗಳು ರೂಪಗೊಂಡಿವೆ. ಬಿಎ.2.86 ಒಮೈಕ್ರಾನ್‌ನ ಒಂದು ಉಪತಳಿಯಾಗಿದೆ. ಇದರ ಉಪತಳಿಯೇ ಜೆಎನ್‌ 1 ಆಗಿದೆ. ಇದೀಗ ದೇಶದಲ್ಲಿ ಜೆಎನ್‌ 1 ಆತಂಕ ಹೆಚ್ಚಾಗಿದೆ.

ಸದ್ಯ ರಾಜ್ಯದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಗುರುವಾರ 24 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಬೆಂಗಳೂರಿನಲ್ಲಿ 23 ಪ್ರಕರಣ ದಾಖಲಾಗಿವೆ. ನಗರದಲ್ಲಿಯೇ 93 ಕೋವಿಡ್‌ ಪ್ರಕರಣಗಳಿವೆ.

ಸದ್ಯ ಬೆಂಗಳೂರಿನಲ್ಲಿರುವ 93 ಕೋವಿಡ್ ಪ್ರಕರಣಗಳ ಪೈಕಿ 45 ಪ್ರಕರಣಗಳಲ್ಲಿ ಸೋಂಕಿನ ಲಕ್ಷಣ ಹೆಚ್ಚಾಗಿದೆ. ಈ ಹಿನ್ನೆಲೆ, 45 ಸ್ಯಾಂಪಲ್‌ಗಳನ್ನು ಜಿನೊಮಿಕ್‌ ಸೀಕ್ವೆನ್ಸ್‌ ನಡೆಸಲು ಆರೋಗ್ಯ ಇಲಾಖೆ ಕಳುಹಿಸಿದೆ ಎನ್ನಲಾಗಿದೆ.

Advertisements

ಜಿನೊಮಿಕ್ ಸೀಕ್ವೆನ್ಸ್‌ ವರದಿ ಬರುವವರೆಗೂ ಇದು ಜೆಎನ್ 1 ಅಥವಾ ಬೇರೆ ತಳಿಯಾ ಎಂಬುದು ಆತಂಕಕ್ಕೆ ಎಡೆ ಮಾಡಿದೆ.

ಸದ್ಯ ದೇಶದಲ್ಲಿ ಕೊರೋನಾದ ಉಪತಳಿ ಜೆಎನ್‌ 1 ಆತಂಕ ಹೆಚ್ಚಾಗಿದೆ. ನೆರೆಯ ರಾಜ್ಯಗಳಾದ ಗೋವಾ, ಕೇರಳ, ಮಹಾರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಈ ಸುದ್ದಿ ಓದಿದ್ದೀರಾ? ಮಗುವಿಗೆ ಕೊರೋನಾ ದೃಢ; ರಾಜ್ಯದಲ್ಲಿ 105 ಮಂದಿಗೆ ಕೋವಿಡ್-19

ರಾಜ್ಯದಲ್ಲಿ ದಾಖಲಾಗುವ ಒಟ್ಟಾರೆ ಕೇಸ್​ಗಳ ಪೈಕಿ ಬೆಂಗಳೂರಿನಲ್ಲಿ ಶೇ.90 ರಷ್ಟು ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ನಗರದ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಆರೋಗ್ಯ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೂಡ ಕೊರೋನಾ ವೈರಸ್ ತಡೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಆರೋಗ್ಯ ಇಲಾಖೆ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, 60 ವರ್ಷ ಮೇಲಪಟ್ಟವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಸೂಚನೆ ನೀಡಿದೆ. ಜತೆಗೆ ಜನಸಂದಣಿ ಇರುವ ಪ್ರದೇಶಗಳಿಗೆ ತೆರಳದಂತೆ ಸೂಚಿಸಿದೆ.

ಅಲ್ಲದೇ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವಾಗ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸೂಚಿಸಿದ್ದರು. ಇನ್ನು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲು ಚಿಂತನೆ ನಡೆದಿದೆ.

ಮತ್ತೊಮ್ಮೆ ಚಳಿಗಾಲ ಬಂದಿದೆ. ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ಕೂಡ ಮುಂದೆ ಇದೆ. ಈ ಸಮಯದಲ್ಲಿ ಕೊರೋನಾ ವೈರಸ್‌ನ ಹೊಸದೊಂದು ರೂಪ ಜೆಎನ್‌ 1 ಕಾಣಿಸಿಕೊಂಡಿದೆ. ಜೆಎನ್‌ 1 ವೈರಾಣು ಮೊದಲು ಅಮೆರಿಕದಲ್ಲಿ ಕಾಣಿಸಿಕೊಂಡಿದೆ. ಈ ಉಪತಳಿ ಈಗ ಇತರ ಕೆಲವು ದೇಶಗಳಿಗೂ ಹಬ್ಬಿದೆ.

ಕೊರೋನಾ ವೈರಾಣು ಕಾಲ ಕಾಲಕ್ಕೆ ರೂಪಾಂತರಗೊಳ್ಳುತ್ತಿದೆ. ಹಾಗಾಗಿ, ರೂಪಾಂತರಗೊಂಡು ಸೃಷ್ಟಿಯಾಗುವ ಉಪತಳಿಗಳ ಕುರಿತು ಅಧ್ಯಯನ ಮಾಡುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಧ್ಯಯನ ಆಗದ ಹೊರತು ಉಪತಳಿಯ ಗುಣಲಕ್ಷಣಗಳು ಮತ್ತು ಪ್ರಭಾವವನ್ನು ತಿಳಿಯಲು ಸಾಧ್ಯವಿಲ್ಲ. ಸದ್ಯ ಜೆಎನ್‌ 1 ಉಪತಳಿಯ ಅಧ್ಯಯನವು ಈಗ ಮೊದಲ ಹಂತದಲ್ಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X