ವಿಜಯಪುರ | ರೈತರಿಗೆ ತಾಂತ್ರಿಕ ಸಲಹೆ ನೀಡಿದರೆ ಕೃಷಿ ಉದ್ದಿಮೆದಾರರಾಗುತ್ತಾರೆ: ಡಾ. ಪಿ.ಎಲ್ ಪಾಟೀಲ್

Date:

Advertisements

ರೈತರಿಗೆ ಸಕಾಲದಲ್ಲಿ ಅಗತ್ಯ ನೆರವು, ಬೆಳೆ ಬೆಳೆಯಲು ತಾಂತ್ರಿಕ ಸಲಹೆ ನೀಡಿದರೆ ಅವರು ಕೂಡ ಉತ್ತಮ ಇಳುವರಿ ಪಡೆದು ಲಾಭಗಳಿಸಿ, ಟಾಟಾ ಬಿರ್ಲಾರ್ ಅಂತೆ ಕೃಷಿ ಉದ್ಯಮದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂದು ಧಾರವಾಡ ಕೃಷಿ ವಿವಿ ಕುಲಪತಿ ಪಿ.ಎಲ್.ಪಾಟೀಲ್ ಹೇಳಿದರು.

ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜಯಪುರ ಮತ್ತು ಇಂಡಿ ಕೃಷಿ ವಿಜ್ಞಾನ ಕೇಂದ್ರಗಳ ಕ್ರಮವಾಗಿ 25 ಮತ್ತು 5ನೇಯ ವೈಜ್ಞಾನಿಕ ಸಲಹಾ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಮಳೆ ಕಡಿಮೆಯಾಗಿ  ಬರ ಪರಿಸ್ಥಿತಿ ತಲೆದೂರಿದೆ, ಕೃಷಿ ಅಥವಾ ತೋಟಗಾರಿಕೆ ಬೆಳೆಗಳಲ್ಲಿ ಅಧಿಕ ಕೀಟ ರೋಗ ಬಾದೆ, ಮಣ್ಣಿನಲ್ಲಿ ಅಗತ್ಯ ಪೋಷಕಾಂಶಗಳ ಕೊರತೆ ಇತ್ಯಾದಿ ಸಮಸ್ಯೆಗಳಿಂದಾಗಿ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಕೃಷಿ ವಿಜ್ಞಾನಿಗಳು ಹಾಗೂ ಕೃಷಿ, ಕೃಷಿ ಸಂಬಂಧಿ ಇಲಾಖೆ ಅಧಿಕಾರಿಗಳು ಸಮನ್ವತೆಯಿಂದ ಕೆಲಸ ಮಾಡಬೇಕು ಎಂದರು.

Advertisements

ಜಿಲ್ಲೆಯ ಎರಡೂ ಕೃಷಿ ವಿಜ್ಞಾನ ಕೇಂದ್ರಗಳು ರೈತರ ಗಾಗಿಯೇ ಸೇವೆ ಸಲ್ಲಿಸುತ್ತಿದ್ದು, ಕಬ್ಬು, ತೊಗರಿ, ಕಡಲೆ, ಜೋಳ, ಗೋಧಿ, ಅವಜಾನ ಇತ್ಯಾದಿ ಕೃಷಿ ಬೆಳೆಗಳು ದ್ರಾಕ್ಷಿ, ನಿಂಬೆ, ಬಾಳೆ, ದಾಳಿಂಬೆ ಹಾಗೂ ತರಕಾರಿ ಬೆಳೆಗಳ ಕುರಿತು ಕ್ಷೇತ್ರ ಪರಿಶೀಲನ ಪ್ರಯೋಗಗಳು, ಮುಂಚೂಣಿ ಪ್ರತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ರೈತರ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ವಿವಿಧ ವಿಷಯಗಳಲ್ಲಿ ಹಾಗೂ ಉಪ ಕಸುಬುಗಳಾದ ಕೋಳಿ, ಕುರಿ ಸಾಕಾಣಿಕೆ, ಹೈನುಗಾರಿಕೆ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ರೈತರು ಇದರ ಲಾಭ ಪಡೆಯಬೇಕೆಂದು ತಿಳಿಸಿದರು.

ವಿಸ್ತರಣಾ ನಿರ್ದೇಶಕ ಡಾ. ಎಸ್‌.ಎಸ್. ಅಂಗಡಿ ಮಾತನಾಡಿ, ಜಿಲ್ಲೆಯು ಒಣ ಪ್ರದೇಶವಾಗಿದ್ದು, ಈಗ ನೀರಾವರಿ ಸೌಲಭ್ಯಕ್ಕೊಳಪಟ್ಟಿರುವುದರಿಂದ ವಿವಿಧ ಪದ್ಧತಿಗಳಾದ ಮೇಲ್ಮೈ, ಹನಿ, ತುಂತುರು ನೀರಾವರಿಯು ತೊಲನಾತ್ಮಕ ಪ್ರಯೋಗ ಮಾಡಬೇಕು. ಕಬ್ಬಿನಲ್ಲಿ ಉರಿ ಮಲ್ಲಿಗೆ ಸಮಸ್ಯೆ, ಅಜ್ವಾನ ಬೆಳೆಯ ಸಾಗುವಳಿ ಕ್ರಮಗಳು, ದ್ರಾಕ್ಷಿ ಮತ್ತು ಲಿಂಬೆಯಲ್ಲಿ ನಿಖರ ನಿರಾವರಿ, ತೋಟಗಾರಿಕೆ ಬೆಳೆಗಳಲ್ಲಿ ಚಾಟಿನಿ ಮಾಡುವ ಸಮಯ ಕುರಿತಂತೆ ಮಾಹಿತಿ ಒದಗಿಸಲು ಸಲಹೆ ನೀಡಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ್, ತೋಟಗಾರಿಕೆ ಉಪ ನಿರ್ದೇಶಕ ಡಾ. ರಾಹುಲ್ ಬಾವಿದೊಡ್ಡಿ ಅವರು ಇಲಾಖೆಯಿಂದ ಸಿಗುವ ಅಗತ್ಯ ಸಲಕರಣೆ, ಸೌಲಭ್ಯ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಇಂಡಿ ಹಾಗೂ ವಿಜಯಪುರ ಕೃಷಿ ವಿಜ್ಞಾನ ಕೇಂದ್ರದಿಂದ ವಿವಿಧ ವಿಷಯಗಳ 12 ವಿಸ್ತರಣಾ ಅಸ್ತ ಪ್ರತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಕೃಷಿ ವಿದ್ಯಾಧಿಕಾರಿ ಡಾ. ಎ.ಭೀಮಪ್ಪ ಅಟಾರಿ ಬೆಂಗಳೂರು ಪ್ರತಿನಿಧಿ, ಡಾ. ಕೊಳೆಕರ, ಕೆವಿಕೆ ನೋಡಲ್ ಅಧಿಕಾರಿ ಡಾ. ಪಿ. ನಾಗರಾಜು, ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ್ ಸಜ್ಜನ್, ನವಾಡ್ ಜಿಲ್ಲಾ ವ್ಯವಸ್ಥಾಪಕ ವಿಕಾಸ ರಾಥೋಡ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದು ಪೂಜಾರಿ, ಪ್ರಗತಿಪರ ರೈತರದ ಸಿದ್ದಪ್ಪ ಬೂಸುಗೊಂಡ, ರಾಘವೇಂದ್ರ , ಇಂಡಿ ಹಾಗೂ ವಿಜಯಪುರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸೇರಿದಂತೆ ಜಿಲ್ಲೆಯ ಸಲಹಾ ಸಮಿತಿಯ ಸದಸ್ಯರುಗಳು, ವಿವಿಧ ಇಲಾಖೆಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

ವಿಜಯಪುರ ಹಿರಿಯ ವಿಜ್ಞಾನಿ ಡಾ. ಎಸ್.ಎಂ. ವಸ್ತ್ರ ಸ್ವಾಗತಿಸಿದರು, ಇಂಡಿ ಹಿರಿಯ ವಿಜ್ಞಾನಿ ಡಾ. ಶಿವಶಂಕರ್ ಮೂರ್ತಿ ವಂದಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X