ಉಡುಪಿ | ಮೀನುಗಾರಿಕಾ ಬೋಟ್ ಮುಳುಗಡೆ: 8 ಮಂದಿ ಮೀನುಗಾರರ ರಕ್ಷಣೆ

Date:

Advertisements

ಉಡುಪಿ ಜಿಲ್ಲೆಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಡಿಸೆಂಬರ್‌ 19ರ ಬೆಳಿಗ್ಗೆ ಆಳ ಸಮುದ್ರದಲ್ಲಿ ಮುಳುಗಡೆಗೊಂಡಿದ್ದು, ಇದರಲ್ಲಿದ್ದ ಒಟ್ಟು ಎಂಟು ಮಂದಿ ಮೀನುಗಾರರು ರಕ್ಷಿಸಲ್ಪಟ್ಟಿದ್ದಾರೆ.

ಕಡೆಕಾರು ರಕ್ಷಾ ಎಂಬುವವರಿಗೆ ಸೇರಿದ ‘ಶ್ರೀ ನಾರಾಯಣ’ ಬೋಟು ಡಿಸೆಂಬರ್‌ 12ರ ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು, ಡಿಸೆಂಬರ್‌ 19ರ ಬೆಳಿಗ್ಗೆ 6:30ರ ಸುಮಾರಿಗೆ ಬಂದರಿನಿಂದ 26 ಮಾರು ಆಳ ದೂರದಲ್ಲಿ ಮೀನುಗಾರಿಕೆ ನಡೆಸುವಾಗ ನೀರಿನಡಿಯಲ್ಲಿದ್ದ ವಸ್ತುವೊಂದು ಬೋಟಿಗೆ ಬಡಿದಿತ್ತು ಎನ್ನಲಾಗಿದೆ.

ಬೋಟಿಗೆ ಹಾನಿಯಾದ ಕಾರಣ ನೀರು ಬೋಟಿನ ಒಳಗೆ ನುಗ್ಗಲು ಆರಂಭಿಸಿತು. ವಯರ್‌ಲೆಸ್ ಮೂಲಕ ಇತರ ಬೋಟಿನವರಿಗೆ ಸಂದೇಶ ರವಾನಿಸಿದರು. ಈ ವೇಳೆ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಶ್ರೀಮೂಕಾಂಬಿಕ ಅನುಗ್ರಹ ಬೋಟಿನವನರು ಧಾವಿಸಿದ್ದು, ಬೋಟನ್ನು ಮೇಲೆತ್ತಲು ಪ್ರಯತ್ನಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಎನ್‌ಎಚ್‌66ರ ರಸ್ತೆ ಕಾಮಗಾರಿ ಮಾರ್ಚ್‌ ವೇಳೆಗೆ ಪೂರ್ಣ: ಮೇಯರ್ ಸುಧೀರ್ ಶೆಟ್ಟಿ

ನೀರಿನ ಅಬ್ಬರ ಹೆಚ್ಚಾದ ಪರಿಣಾಮ ನೀರು ಬೋಟಿನ ಒಳಗೆ ಬರುವುದನ್ನು ತಡೆಯಲು ಸಾಧ್ಯವಾಗಿಲ್ಲ. ಸುಮಾರು 8 ಗಂಟೆ ವೇಳೆಗೆ ಬೋಟು ಪೂರ್ಣ ಮುಳುಗಡೆಗೊಂಡಿತು. ಮೀನುಗಾರರನ್ನು ಮೂಕಾಂಬಿಕ ಬೋಟಿನವರು ರಕ್ಷಣೆ ಮಾಡಿ ಮಲ್ಪೆ ಬಂದರಿನ ದಡಕ್ಕೆ ಕರೆ ತಂದಿದ್ದಾರೆ. ಬೋಟು ಮುಳುಗಡೆಯಿಂದ ಸುಮಾರು ₹18 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಿದ್ದಾರೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿಂದನೆ ಆರೋಪ : ಬಂಧಿತರಾಗಿದ್ದ ವಕೀಲ ಕೆ ಎನ್‌ ಜಗದೀಶ್‌ಗೆ ಜಾಮೀನು ಮಂಜೂರು

ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದ ಆರೋಪದ ಮೇಲೆ ಶುಕ್ರವಾರ ಸಂಜೆ ಬಂಧಿತರಾಗಿದ್ದ ಬಿಗ್‌...

ಚಿಕ್ಕಮಗಳೂರು l ಅತ್ತೆಯನ್ನು ಹತ್ಯೆಗೈದ ಸೊಸೆ

ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಸೊಸೆಯೇ ಅತ್ತೆಯನ್ನು ಹತ್ಯೆ ಮಾಡಿರುವ ಘಟನೆ...

ಧರ್ಮಸ್ಥಳ ಪ್ರಕರಣ | ಸೌಜನ್ಯ ಹೋರಾಟ ಮುಂದುವರಿಯಲಿದೆ: ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಕೋಲಾರ | ಪ್ರಗತಿಪರ ರೈತ ತುರಾಂಡಹಳ್ಳಿ ರವಿ ತೋಟಕ್ಕೆ ಅಂತಾರಾಷ್ಟ್ರೀಯ ಅಧಿಕಾರಿಗಳು ಭೇಟಿ

ಕೋಲಾರ ತಾಲೂಕಿನ ತುರಾಂಡಹಳ್ಳಿ ಗ್ರಾಮದ ಪ್ರಗತಿಪರ ರೈತ ಟಿ.ಎನ್ ರವಿ ಅವರ...

Download Eedina App Android / iOS

X