ಕ್ಷೌರಿಕ ವೃತ್ತಿ ನಿರತ ಹಡಪದ ಸಮಾಜದ ಬಗ್ಗೆ ಕಾನೂನು ನಿಷೇದಾತ್ಮಕ ಪದ ಬಳಸಿ ನಮ್ಮ ಸಮಾಜದ ಬಂಧುಗಳಿಗೆ ಅವಮಾನ ಹಾಗೂ ಜಾತಿ ನಿಂದನೆ ಮಾಡಿದ ಶಾಮನೂರ ಶಿವಶಂಕ್ರಪ್ಪ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಅವರ ಮೇಲೆ ಸ್ವಯಂ ಪ್ರೇರಿತ ಪಿರ್ಯಾದಿ ದಾಖಲಿಸುವ ಕುರಿತು ಬಾಗಲಕೋಟೆ ಜಿಲ್ಲೆಯ ಬೀಳಗಿ ಪೋಲಿಸ್ ಇನ್ಸ್‌ಪೆಕ್ಟರ್‌ಗೆ ಮನವಿ ಮಾಡಿದರು.
“ನಾವು ಕ್ಷೌರಿಕ ವೃತ್ತಿಯನ್ನು ತಲಾತಲಾಂತರದಿಂದ ಮಾಡಿಕೊಂಡು ಬಂದಿದ್ದೇವೆ. ಈ ಮೂಲಕ ಜನರ ಸೇವೆಯನ್ನು ಮಾಡುತ್ತಿದ್ದೇವೆ” ಎಂದು ಹಡಪದ ಸಮಾಜದ ಮುಖಂಡರು ಹೇಳಿದರು.
“ವೀರಶೈವ ಲಿಂಗಾಯತ ಮಹಾಸಭಾದ ಮುಖಂಡ, ಮಾಜಿ ಸಚಿವ ಶಾಮನೂರ ಶಿವಶಂಕ್ರಪ್ಪ ಅವರು ಮಹಾ ಸಭಾದ ಬಗ್ಗೆ ಪತ್ರಿಕಾ ಪ್ರಕಟನೆ ಮಾಡುವ ಸಮಯದಲ್ಲಿ ನಮ್ಮ ನಮ್ಮ ಸಮಾಜದ ನಾಗರಿಕರಿಗೆ ಕಾನೂನು ನಿಷೇಧಾತ್ಮಕ ಪದ ಬಳಸಿ ಅವಮಾನ ಹಾಗೂ ಜಾತಿ ನಿಂದನೆ ಮಾಡಿದ್ದಾರೆ. ಹಾಗಾಗಿ ಅವರು ನಮ್ಮ ಸಮಾಜದ ಬಂಧುಗಳಿಗೆ ಮಾಡಿದ ಜಾತಿನಿಂದನೆಗೆ ಕ್ಷಮೆಯಾಚಿಸಬೇಕು” ಎಂದು ಹಡಪದ ಸಮಾಜದ ಗುರುಹಿರಿಯರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ವಿದ್ಯಾರ್ಥಿಗಳಲ್ಲಿ ಅನ್ವೇಷಣೆ ಸಾಮರ್ಥ್ಯ ಬೆಳೆಸಲು ಕೆ ಟಿ ಬೇಬಿಮ್ಯಾಥ್ಯೂ ಕರೆ
“ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಮೇಲೆ ಸ್ವಯಂ ಪ್ರೇರಿತ ಪಿರ್ಯಾದಿ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.