ಅಲೆವೂರು ಗ್ರೂಪ್ ಫೋರ್ ಎಜುಕೇಷನ್ ವತಿಯಿಂದ ನೀಡಲಾಗುವ 2023ನೇ ಸಾಲಿನ ಅಲೆವೂರು ಗ್ರೂಪ್ ಪ್ರಶಸ್ತಿಯನ್ನು ನ್ಯಾಯವಾದಿ ಎಂ ಶಾಂತಾರಾಮ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.
ಉಡುಪಿ ಜಿಲ್ಲೆಯ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ 19ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಎಲ್ಐಸಿ ಆಫ್ ಇಂಡಿಯಾದ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಪ್ರಬಂಧಕ ರಾಜೇಶ್ ವಿ ಮುಧೋಳ್, ಶಾಂತಾರಾಮ್ ಶೆಟ್ಟಿ ಅವರಿಗೆ ಬೆಳ್ಳಿ ಫಲಕ ಸಹಿತ ಪ್ರಶಸ್ತಿ ಪ್ರದಾನ ಮಾಡಿದರು.
“ಪ್ರಸ್ತುತ ಯಾಂತ್ರಿಕ ಯುಗದಲ್ಲಿ ಮಕ್ಕಳ ಬಾಲ್ಯವನ್ನು ಕಸಿಯುವ ಪ್ರಯತ್ನವನ್ನು ಪೋಷಕರು ಮಾಡುತ್ತಿದ್ದಾರೆ. ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳು ತಮ್ಮ ಬಾಲ್ಯದ ಅನುಭವ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಆದುದರಿಂದ ಪೋಷಕರು ತಮ್ಮ ಮಕ್ಕಳಿಗೆ ಪಾಠದಷ್ಟೇ ಆಟಕ್ಕೂ ಸಮಯ ನೀಡಬೇಕು” ಎಂದು ಶಾಂತಾರಾಮ್ ಶೆಟ್ಟಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಬೇಡಿ; ಮಾಧ್ಯಮಗಳಿಗೆ ಜಿಲ್ಲಾಧಿಕಾರಿ ಮನವಿ
“ವಿದ್ಯಾರ್ಥಿಗಳಲ್ಲಿ ಕನಸು, ಕಠಿಣ ಪರಿಶ್ರಮ ಹಾಗೂ ದೇವರ ಮತ್ತು ಸಮಾಜದ ಆಶೀರ್ವಾದ ಮುಖ್ಯ. ಇವುಗಳು ವಿದ್ಯಾರ್ಥಿಗಳಲ್ಲಿ ಇದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ದೇವರ ಬಗ್ಗೆ ಭಯ ಇರಬಾರದು. ಆದರೆ, ಅರಿವು ಇರಬೇಕು” ಎಂದು ಅಭಿಪ್ರಾಯಪಟ್ಟರು.
ಅಲೆವೂರು ಗ್ರೂಪ್ ಫೊರ್ ಎಜುಕೇಶನ್ ಅಧ್ಯಕ್ಷ ಅಲೆವೂರು ಗಣಪತಿ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯೆ ಶಾಂತಾ ಕಿಣಿ, ನೀತಾ ಕಿಣಿ ಇದ್ದರು.