ಮಗುವಿನ ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗುತ್ತದೆ ಮತ್ತು ಪೋಷಕರೇ ಅವರ ಮೊದಲ ಶಿಕ್ಷಕರು. ಮಗುವಿನ ವ್ಯಕ್ತಿತ್ವ, ಸ್ವಭಾವ, ಅಭ್ಯಾಸಗಳು, ಭಾವನಾತ್ಮಕ ಬೆಳವಣಿಗೆ ಇತ್ಯಾದಿಗಳನ್ನು ರೂಪಿಸುವಲ್ಲಿ ಪಾಲಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಎಂದು ಸಿಆರ್‌ಪಿ ಗುಂಡೂರಾವ್ ಮಕ್ಕಳ ಪೋಷಕರಿಗೆ ಕಿವಿಮಾತು ಹೇಳಿದರು.
ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಬಳಿ ಇರುವ ರತ್ನಂ ಶಾಲಾ ವಾರ್ಷಿಕೋತ್ಸವ ದಿನ ಮತ್ತು ಕ್ರಿಸ್‌ಮಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಯಾವುದೇ ಶಾಲೆಯಲ್ಲಿ ನಮ್ಮ ಮಕ್ಕಳು ಕಲಿಯಲು ಆ ಶಾಲೆ ಶಿಕ್ಷಕರ ಜೊತೆಗೆ ತಂದೆ-ತಾಯಿ ಅವರ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ಅವರಿಗೆ ಬೆಂಬಲವನ್ನು ನೀಡಬೇಕು. ಮನೆಯ ಮೊದಲ ಗುರು ಎಂದರೆ ಅದು ತಂದೆ ತಾಯಿ. ಹಾಗಾಗಿ ಶಾಲೆಯಿಂದ ಬಂದ ಮಕ್ಕಳನ್ನು ತಾವೂ ಕೂಡ ಮಕ್ಕಳ ನಡವಳಿಕೆ ಮುಕ್ತವಾಗಿ ಆಲಿಸಬೇಕು. ಮಕ್ಕಳ ಕಲಿಕೆ ಮತ್ತು ಅವರನ್ನು ಗಮನಿಸಿ ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯಲು ಶಿಕ್ಷಕರ ಜೊತೆಗೆ ಪೋಷಕರ ಅರ್ಧ ಪಾತ್ರವಿದೆ” ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಮಾತನಾಡಿ, “ನಿಮ್ಮ ಮಕ್ಕಳನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನಾಗಿ ಮಾಡಲು ಪೋಷಕರು ಪಣತೊಡಬೇಕು. ಮಕ್ಕಳನ್ನು ಎಲ್ಲ ರಂಗದಲ್ಲಿ ಬೆಳೆಸಲು ಪೋಷಕರ ಸಹಕಾರ ಕೂಡಾ ಇದೆ. ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ. ಪೋಷಕರೂ ಕೂಡ ಕೈ ಜೋಡಿಸಿದಾಗ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುತ್ತದೆ. ಶಿಕ್ಷಣ ಎಂಬುದು ಹುಲಿಯ ಹಾಲು ಇದ್ದಂತೆ. ಹಾಗಾಗಿ ನೀವು ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
“ನಿಮ್ಮ ಮಕ್ಕಳು ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಕಲೆ ನೋಡಿ ನೀವು ತುಂಬಾ ಖುಷಿಯಾಗಿದ್ದೀರಿ. ನಮಗೂ ಕೂಡ ಪುಟ್ಟ ಮಕ್ಕಳ ಕಲೆ ನೋಡಿ ತುಂಬಾ ಖುಷಿ ತಂದಿದೆ. ಹೀಗೆ ಮಕ್ಕಳು ಉತ್ತಮ ಶಿಕ್ಷಣ ಪಡೆದು ಶಾಲೆಯ ಹೆಸರು ಮತ್ತು ತಂದೆ ತಾಯಿ ಹೆಸರು ತರಬೇಕೆಂಬುದು ನಮ್ಮ ಆಶಯ” ಎಂದು ಬಿ ಶ್ಯಾಮವೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಕ್ಕಳ ನೃತ್ಯಕ್ಕೆ ಪೋಷಕರ ಮೆಚ್ಚುಗೆ
ರತ್ನಂ ಶಾಲಾ ವಾರ್ಷಿಕೋತ್ಸವ ದಿನ ಮತ್ತು ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿ ಮಕ್ಕಳು ಬಣ್ಣಬಣ್ಣದ ಉಡುಪು ಧರಿಸಿ ನೃತ್ಯ ಮಾಡಿದ ಕಲೆ ನೋಡಿ ಶಿಕ್ಷಕರು ಮತ್ತು ಪೋಷಕರು ಖುಷಿಪಟ್ಟರು.
ಪೋಷಕರ ಮನಸ್ಸು ಸೆಳೆದ ಪುಟಾಣಿ ಮಕ್ಕಳು
ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿದ ಪುಟಾಣಿ ಮಕ್ಕಳು ಪೋಷಕರು ಉಬ್ಬೇರುಸುವಂತೆ ಮಾಡಿದರು. ಇದೇ ವೇಳೆ ರತ್ನಂ ಶಾಲಾ ವಾರ್ಷಿಕೋತ್ಸವ ದಿನ ಮತ್ತು ಕ್ರಿಸ್‌ಮಸ್ ಕಾರ್ಯಕ್ರಮದ ಪ್ರಯುಕ್ತ ವಿವಿಧ ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಕಪ್ ಮತ್ತು ವಿಜೇತ ಪತ್ರ ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ನ್ಯಾ. ಶಾಂತಾರಾಮ್ ಶೆಟ್ಟಿಗೆ ‘ಅಲೆವೂರು ಗ್ರೂಪ್ ಪ್ರಶಸ್ತಿ’ ಪ್ರದಾನ
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಫಾದರ್ ಜಾನ್ ವೆಸ್ಲಿ, ಮಲ್ಲಣ್ಣ ದಾಸನಕೇರಿ, ಸಲೋಚನ್, ಸೌಮ್ಯಶ್ರಿ, ಪೀಭ್ಭ, ನಾಗಪ್ಪ, ರಷೀಮಿ, ಸೈಲಾಜ, ಸುನೀತಾ, ಗೀತಾಂಜಲಿ, ಅಂಬಿಕಾ, ಯೋಸುರಾಜ, ಅಂಜನಾ ಸೇರಿದಂತೆ ಇತರರು ಇದ್ದರು.