ಕಳೆದ ಡಿ.13ರಂದು ನಡೆದಿದ್ದ ಭದ್ರತಾ ಲೋಪ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಪಾಸ್ ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೊನೆಗೂ ಮೌನ ಮುರಿದಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಇಂದು ಬೆಳಗ್ಗೆ ಮಾತನಾಡಿದ್ದು, “ಪ್ರತಾಪ್ ಸಿಂಹ ದೇಶದ್ರೋಹಿಯೋ, ದೇಶಪ್ರೇಮಿಯೋ ಎಂಬುದನ್ನು ತಾಯಿ ಚಾಮುಂಡೇಶ್ವರಿ, ಕಾವೇರಿ ತಾಯಿ, ನನ್ನ ಓದುಗರು ಹಾಗೂ ಮೈಸೂರು ಕೊಡಗಿನ ಜನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದ್ದಾರೆ.
”2024ರ ಏಪ್ರಿಲ್‌ನಲ್ಲಿ ನಡೆಯುವಂತಹ ಲೋಕಸಭಾ ಚುನಾವಣೆಯಲ್ಲಿ ಜನರು ನನ್ನ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನು ಏನು ಎಂಬುದನ್ನು ಅಂತಿಮವಾಗಿ ತೀರ್ಮಾನ ಕೊಡಬೇಕಾದವರು ನನ್ನ ಕ್ಷೇತ್ರದ ಜನ. ಅದರಾಚೆಗೆ ನಾನು ಏನೂ ಹೇಳುವುದಿಲ್ಲ” ಎಂದು ಹೇಳುವ ಮೂಲಕ ಕೊನೆಗೂ ಪ್ರತಾಪ್ ಸಿಂಹ ಘಟನೆಗೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ.