2024ರ ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ರಾಮಮಂದಿರ ಆಂದೋಲನದ ಮುಂಚೂಣಿಯಲ್ಲಿದ್ದ ಬಿಜೆಪಿಯ ಹಿರಿಯರಾದ ಎಲ್ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರು ಮುಂದಿನ ತಿಂಗಳು ನಡೆಯಲಿರುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬರದಂತೆ ಟ್ರಸ್ಟ್ ಸೂಚಿಸಿದ್ದು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆ ಬಳಿಕ ವಿಶ್ವ ಹಿಂದೂ ಪರಿಷತ್ನ ಮುಖಂಡರು ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಮನೆಗೆ ತೆರಳಿ ಆಹ್ವಾನ ಪತ್ರಿಕೆ ಕೂಡ ನೀಡಿತ್ತು. ಈ ಬೆಳವಣಿಗೆ ಮಾಸುವ ಮುನ್ನವೇ ಕರ್ನಾಟಕದ ಬಿಜೆಪಿ ಐಟಿ ಸೆಲ್ ಎಡವಟ್ಟು ಮಾಡಿಕೊಂಡಿದೆ.
ಕಟ್ಟಿದೆವು ನಾವು ರಾಮ ಮಂದಿರ#RamMandir #ModiKiGurantee pic.twitter.com/Jk6F9yWknF
— BJP Karnataka (@BJP4Karnataka) December 24, 2023
“ಕಟ್ಟಿದೆವು ನಾವು ರಾಮ ಮಂದಿರ” ಎಂಬ ಶೀರ್ಷಿಕೆ ಬಳಸಿ, ಕರ್ನಾಟಕದ ಬಿಜೆಪಿ ಐಟಿ ಸೆಲ್ AI ಟೂಲ್ ಅನ್ನು ಬಳಸಿಕೊಂಡು ಫೋಟೋವೊಂದನ್ನು ಡಿ.24ರ ಮಧ್ಯಾಹ್ನ 12:15ರ ಸುಮಾರಿಗೆ ಹಂಚಿಕೊಂಡಿದೆ.
ಈ ಫೋಟೋದಲ್ಲಿ ‘ಶತಮಾನಗಳ ಕಾಯುವಿಕೆಗೆ ತೆರೆ’ ಎಂದು ಬರೆದುಕೊಂಡು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ದಿನಾಂಕ 2024ರ ಜನವರಿ 22 ದಿನಾಂಕವನ್ನು ಬರೆದುಕೊಂಡಿದೆ. ಜೊತೆಗೆ, ಈ ಫೋಟೊದಲ್ಲಿ ರಾಮ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಿನ್ನೆಲೆಯಲ್ಲಿ ರಾಮಮಂದಿರವನ್ನು ಬಳಸಿಕೊಳ್ಳಲಾಗಿದೆ. ಆದರೆ, ರಾಮನಿಗಿಂತಲೂ ಮೋದಿ ಫೋಟೋ ದೊಡ್ಡದಾಗಿ ಹಾಕಿ ಎಡವಟ್ಟು ಮಾಡಿಕೊಂಡಿದೆ. ಇದು ನೆಟ್ಟಿಗರು ಸೇರಿದಂತೆ ರಾಮನ ಅನುಯಾಯಿಗಳ ಕಣ್ಣು ಕೆಂಪಗಾಗಿಸಿದೆ.
Achhaaa bjp ne kiya hai to chala denge kisi aur ne Kiya hota to abhi outrage shuru kar dete aur kisi na kisi kone main case bhi kar dete VHP, ya bajrang dal vale..
Modiji is bigger than lord Ram
NO SHAME LEFT pic.twitter.com/5vB6kHv2nZ— भाई साहब (@Bhai_saheb) December 24, 2023
@Bhai_saheb ಎನ್ನುವ ಟ್ವಿಟ್ಟರ್ ಬಳಕೆದಾರೊಬ್ಬರು ಟ್ವೀಟ್ ಮಾಡಿದ್ದು, ರಾಮನಿಗಿಂತಲೂ ಮೋದಿ ಫೋಟೋ ದೊಡ್ಡದಾಗಿ ಚಿತ್ರಿಸಲಾಗಿದೆ. ಇದನ್ನು ಬಿಜೆಪಿಯವರು ಮಾಡಿದ್ದಾರೆ. ಒಂದು ವೇಳೆ ಬೇರೆಯವರು ಯಾರಾದರೂ ಮಾಡಿದ್ದಿದ್ದರೆ ಇಷ್ಟೊತ್ತಿಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳದವರು ಇದನ್ನು ದೇಶಾದ್ಯಂತ ವಿವಾದ ಮಾಡಿಬಿಡುತ್ತಿದ್ದರು. ಅಷ್ಟಕ್ಕೂ, ರಾಮನಿಗಿಂತಲೂ ಮೋದಿ ದೊಡ್ಡವರಾದರೇ? ಎಂದು ಪ್ರಶ್ನಿಸಿದ್ದಾರೆ.
ಈ ಫೋಟೋವನ್ನು ಹಂಚಿಕೊಂಡಿರುವ ದೇಶದ ಖ್ಯಾತ ಪತ್ರಕರ್ತ ಹಾಗೂ ಆಲ್ಟ್ ನ್ಯೂಸ್ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್, ಕರ್ನಾಟಕ ಬಿಜೆಪಿ ಐಟಿ ಸೆಲ್ ಅನ್ನು ನೋಡಿಕೊಳ್ಳುತ್ತಿರುವವರು ಯಾರು? ಎಂದು ಪ್ರಶ್ನಿಸಿ ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಟ್ಯಾಗ್ ಮಾಡಿದ್ದಾರೆ.
Who’s handling this @BJP4Karnataka Twitter account? @Tejasvi_Surya 😳 pic.twitter.com/KdCY0CA4lA
— Mohammed Zubair (@zoo_bear) December 24, 2023
ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಸ್ಥಾನಕ್ಕೆ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ಹಾಗೂ ಕರ್ಲಿ ಟೇಲ್ಸ್ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಕಾಮಿಯಾ ಜಾನಿ ಭೇಟಿ ಕೊಟ್ಟಿದ್ದರು. ಆಕೆ ಗೋಮಾಂಸದ ಪ್ರಚಾರಕಿ, ಆಕೆಯನ್ನು ದೇವಸ್ಥಾನಕ್ಕೆ ಹೇಗೆ ಬಿಟ್ರು? ಅಪವಿತ್ರಗೊಳಿಸಿದ ಆಕೆಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಬಲಪಂಥೀಯರು ದ್ವೇಷ ಹರಡಿದ್ದರು. ಅದನ್ನು ದೊಡ್ಡ ವಿವಾದ ಮಾಡಿದವರಿಗೆ ಈ ಫೋಟೋ ಯಾಕೆ ಕಾಣಿಸುತ್ತಿಲ್ಲ? ಎಂದು ಹಲವರು ಪ್ರಶ್ನಿಸಿದ್ದಾರೆ.
हिन्दू धर्म के लोगो को जरूर बुरा लगेगा…
ये उचित नहीं है ।#RamMandir #Ayodhya https://t.co/fC7UC4wmGb
— VIVEK (@vvkydvtalks) December 24, 2023
ಈ ನಡುವೆ ಈ ಫೋಟೋವನ್ನು ಬಿಜೆಪಿ ಬೆಂಬಲಿಗರು ಹಾಗೂ ಬಲಪಂಥೀಯ ಮಂದಿ, ಅದು ಬಾಲ ರಾಮ ಎನ್ನುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.
Modi is now bigger than Lord Ram? pic.twitter.com/hS0SFtrZTW
— Srinivas BV (@srinivasiyc) December 24, 2023