ನೂತನವಾಗಿ ಆಯ್ಕೆಯಾಗಿರುವ ಡಬ್ಲ್ಯುಎಫ್ಐ (ಭಾರತೀಯ ಕುಸ್ತಿ ಒಕ್ಕೂಟ) ಅನ್ನು ಅಮಾನತುಗೊಳಿರುವ ಸರಕಾರದ ನಿರ್ಧಾರವು ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ನ್ಯಾಯ ಒದಗಿಸಲು ಸಾಕಾಗುವುದಿಲ್ಲ ಎಂದು ಪ್ರತಿಪಕ್ಷ ನಾಯಕರು ಹೇಳಿದ್ದಾರೆ.
ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬೆಂಬಲಿಗರಿಗೆ ಕ್ರೀಡಾ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಏಕೆ ಅವಕಾಶ ನೀಡಲಾಯಿತು ಎಂದು ಅವರು ಪ್ರಶ್ನಿಸಿದ್ದಾರೆ.
ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ, ಬಿಜೆಪಿ ನೇತೃತ್ವದ ಸಚಿವಾಲಯವು ಮಹಿಳಾ ಕುಸ್ತಿಪಟುಗಳಿಗೆ ಸಹಾಯ ಮಾಡದೆ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ಉದಿತ್ ರಾಜ್, “ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರು ಪ್ರತಿಭಟನಾ ರೀತಿಯು ಡಬ್ಲ್ಯು ಎಫ್ಐ ಚುನಾವಣೆಯನ್ನು ಅಮಾನತುಗೊಳಿಸುವಂತೆ ಕ್ರೀಡಾ ಸಚಿವಾಲಯದ ಮೇಲೆ ಒತ್ತಡ ಹೆಚ್ಚಿಸಿದೆ. ಇದು ಸ್ವಾಗತಾರ್ಹವದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದ ಸಾಂಸ್ಥೀಕರಣದತ್ತ ಭಾರತ, ಇನ್ನೊಂದು ಗುಲಾಮಗಿರಿಯತ್ತ ದೇಶ
ಬ್ರಿಜ್ ಭೂಷಣ್ ಅವರ ಬೆಂಬಲಿಗರ ಆಯ್ಕೆಯಿಂದ ಉಂಟಾದ ಆಕ್ರೋಶದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಫಕ್ರುಲ್ ಹಸನ್ ಚಾಂದ್ ಆರೋಪಿಸಿದ್ದಾರೆ.
ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್ಐ) ಚುನಾವಣೆಗಳು ಡಿಸೆಂಬರ್ 21 ರಂದು ನಡೆದಿದ್ದು, ಸಂಜಯ್ ಸಿಂಗ್ ಮತ್ತು ಅವರ ತಂಡ ಚುನಾವಣೆಯಲ್ಲಿ ಹೆಚ್ಚಿನ ಅಂತರದಿಂದ ಗೆದ್ದಿದೆ.
ಕುಸ್ತಿ ಸಂಸ್ಥೆಯು ಅಂಡರ್ 15 ಮತ್ತು ಅಂಡರ್ 20 ರಾಷ್ಟ್ರೀಯ ಕ್ರೀಡೆಗಳನ್ನು ಸೂಕ್ತ ಮಾನಡಂಡಗಳನ್ನು ಅನುಸರಿಸದೆ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಕ್ರೀಡಾ ಸಚಿವಾಲಯ ಅಮಾನತು ನಿರ್ಧಾರ ಕೈಗೊಂಡಿದೆ.