ರೈತರ ಶ್ರಮ ಮತ್ತು ಸಂಕಷ್ಟಗಳ ಬಗ್ಗೆ ಮತ್ತೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಇದೀಗ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಸಾಲ ಮನ್ನಾ ಆಗುತ್ತದೆಂದು ಬರಗಾಲ ಬರಲಿ ಅಂತ ರೈತರು ಆಸೆ ಪಡುತ್ತಾರೆ ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಆಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ರೈತರ ವಿರುದ್ಧ ಮಾತನಾಡಿದ್ದಾರೆ. “ಸರ್ಕಾರಗಳು ಪಕ್ಕಟ್ಟೆ ನೀರು, ಕರೆಂಟ್ ಕೊಡುತ್ತವೆ. ಕೆಲವು ಸರ್ಕಾರಗಳು ಬಿತ್ತನೆ ಬೀಜ, ಗೊಬ್ಬರವನ್ನೂ ಕೊಟ್ಟಿವೆ. ಆದರೆ, ರೈತರು ಸಾಲಮನ್ನ ಮಾಡಬೇಕೆಂದು ನಿರೀಕ್ಷಿಸುತ್ತಾರೆ” ಎಂದು ಹೇಳಿದ್ದಾರೆ.
“ಬರಗಾಲ ಬರಲಿ ಎಂದು ರೈತರಿಗೆ ಆಸೆ. ಹಿಂದಿನ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿವೆ. ಆದರೆ,ಸರ್ಕಾರವೇ ಸಂಕಷ್ಟದಲ್ಲಿದ್ದಾಗ ಸಾಲ ಮನ್ನಾ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಈ ಹಿಂದೆ ಕೂಡ ಇಂತದ್ದೇ ಹೇಳಿಕೆ ನೀಡಿದ್ದ ಶಿವಾನಂದ ಪಾಟೀಲ್, “ರೈತರು ಕುಡಿದು ಸತ್ತರೂ, ಹೃದಯಾಘಾತದಿಂದ ಸತ್ತರೂ ಆತ್ಮಹತ್ಯೆ ಎಂದು ದೂರು ಕೊಟ್ಟರೆ ಪರಿಹಾರ ಸಿಗುತ್ತದೆಂದು ಸಂಬಂಧಿಕರು ದುರಾಸೆ ಪಡುತ್ತಾರೆ. ಪರಿಹಾರ ಸಿಗುತ್ತದೆಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ” ಎಂದು ಹೇಳಿದ್ದರು.
ನಿಮ್ಮಂತಹ ಅಯೋಗ್ಯರನ್ನು ಆಯ್ಕೆ ಮಾಡಿ, ಬೇರೇನು ನಿರೀಕ್ಷೆ ಮಾಡಲು ಸಾಧ್ಯ?