ಶಕ್ತಿ ಯೋಜನೆಯಡಿ ಉಪಯೋಗ ಪಡೆದುಕೊಳ್ಳಲು ರಾಜ್ಯಾದ್ಯಂತ ಹೆಚ್ಚುವರಿ ಬಸ್ಗಳನ್ನು ಬಿಡುವಂತೆ ಆಗ್ರಹಿಸಿ ಭಾರತೀಯ ಮಹಿಳಾ ಒಕ್ಕೂಟ ದಾವಣಗೆರೆ ಜಿಲ್ಲಾ ಘಟಕದಿಂದ ನಗರದ ಉಪ ವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಎಂ ಬಿ ಶಾರದಮ್ಮ ಮಾತನಾಡಿ,”ಶಕ್ತಿ ಯೋಜನೆ ತಂದಿರುವುದು ಸ್ವಾಗತಾರ್ಹ, ಇದರಿಂದ ಮಹಿಳೆಯರು ಸ್ವಾವಲಂಬನೆಯಿಂದ ಓಡಾಡುವಂತಾಗಿದೆ. ಆದರೆ ರಾಜ್ಯಾದ್ಯಂತ ಬಸ್ಗಳ ಸಂಖ್ಯೆ ಕಡಿಮೆ ಇದರಿಂದ ಪ್ರಯಾಣಿಕರಿಗೆ ನೂಕುನುಗ್ಗಲು ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಹೆಚ್ಚುವರಿ ಬಸ್ ಸೌಲಭ್ಯ ನೀಡಿ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ʼಚಿಗುರು ಕಲಿಕಾ ಕೇಂದ್ರಗಳ ಮಕ್ಕಳ ಮೇಳʼ
ಮಹಿಳಾ ಸಂಘಟನೆಯ ಕಾರ್ಯದರ್ಶಿ ಎಸ್ ಎಸ್ ಮಲ್ಲಮ್ಮ, ಖಜಾಂಚಿ ಸರೋಜಾ, ಮುಖಂಡರುಗಳಾದ ಹೆಚ್ ಜಿ ಮಂಜುಳಾ, ಕುಸುಮ ಎಂ ಆರ್, ಎಚ್ ಇಂದಿರಾ ಗಾಂಧಿ, ತಬ್ರೇಜ್, ಬಿ ಜೆ ರೇಖಾ ಸೇರಿದಂತೆ ಇತರರು ಇದ್ದರು.