ಇಂಡಿ ಪ್ರತ್ಯೇಕ ಜಿಲ್ಲಾ ರಚನೆ ಘೋಷಣೆ ಹಾಗೂ ಸಂವಿಧಾನ ವಿಧಿ 371(ಜೆ) ಸೇರ್ಪಡೆಗೆ ಆಗ್ರಹಿಸಿ ಇಂಡಿ ಜಿಲ್ಲಾ ಹೋರಾಟ ಸಮಿತಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇಂಡಿ ಅಡತ(ಎಪಿಎಂಸಿ) ವ್ಯಾಪಾರಸ್ಥರು, ಎಪಿಜೆ ಅಬ್ದುಲ್ ಕಲಾಂ, ಡಿಎಸ್ಎಸ್ ಒಕ್ಕೂಟ, ಮಾಜಿ ಸೈನಿಕರ ಸಂಘ, ಅನುದಾನ ರಹಿತ-ಸಹಿತ ಶಾಲಾ ಕಾಲೇಜುಗಳು, ಸಮಸ್ತ ಕಿರಾಣಿ ವ್ಯಾಪಾರಸ್ಥರ ಸಹಯೋಗದಲ್ಲಿ ಪ್ರತಿಭಟನೆ ನಡೆಸಿದರು.
“ವಿಜಯಪುರ ಜಿಲ್ಲೆಯಲ್ಲಿನ ಸಮಗ್ರವಾದ ಇಂಡಿ ತಾಲೂಕು ತೀವ್ರ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನೂ ಪ್ರಗತಿ ಕಾಣಬೇಕಾಗಿದೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಇಂಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ಒಂದು ಜಿಲ್ಲೆಯಾಗಲು ಸಂಬಂಧಿಸಿದಂತೆ ಆ ಪರಿಸರದಲ್ಲಿ ಬೇಕಾಗಿರುವ ಪೂರಕ ಅಂಶಗಳು ಇಂಡಿಯಲ್ಲಿ ಸಾಕಷ್ಟು ಇವೆ. ಅದರಂತೆ ಪದವಿ ಕಾಲೇಜುಗಳು, ಎಂಜಿನಿಯರಿಂಗ್/ಡಿಪ್ಲೋಮಾ ಕಾಲೇಜುಗಳು, ಪ್ಯಾರಾ ಮೆಡಿಕಲ್/ನರ್ಸಿಂಗ್ ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳು ಸೇರಿದಂತೆ ಹಲವಾರು ವೈವಿದ್ಯಮಯ ಸ್ವರೂಪದ ಕಾಲೇಜುಗಳ ಸ್ಥಾಪನೆಗೆ ಹಾಗೂ ಅವುಗಳ ಸಂಬಧಿತ ಗಡಿನಾಡು ಅಭಿವೃದ್ಧಿಗಾಗಿ ಸದರಿ ಇಂಡಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು. ಹಾಗೆಯೇ ಇಂಡಿ ನಗರವನ್ನು ಸಂವಿಧಾನದ ವಿಧಿ 371(ಜೆ) ಅಡಿ ಸೇರ್ಪಡೆಗೆ ಶೀರ್ಘದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಜ್ಯಾದ್ಯಂತ ಹೆಚ್ಚುವರಿ ಬಸ್ ಒದಗಿಸಲು ಆಗ್ರಹ
ಈ ವೇಳೆ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಜಟ್ಟಪ್ಪ ರವಳಿ, ಗೌರವಾಧ್ಯಕ್ಷ ಭೀಮಣ್ಣ ಕೌಲಗಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಾಳೆ, ಉಪಾಧ್ಯಕ್ಷ ಇಲಿಯಾಸ್ ಬೋರಾಮಣಿ, ಜಾವೀದ್ ಮೋಮಿನ, ಬಾಬುರಾವ ಗುಡಿಮಣಿ ಡಿಎಸ್ಎಸ್ ತಾಲೂಕು ಮುಖಂಡರುಗಳಾದ ಧರ್ಮರಾಜ ವಾಲಿಕಾರ, ಮೆಹಬೂಬ್ ಅರಬ್, ಸದಾಶಿವ ಪ್ಯಾಟಿ, ರಮೇಶ್ ಕಲ್ಯಾಣಿ, ಮಹೇಶ್ ಹೊನ್ನ ಬಿಂದ್ಗಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರುಗಳಾದ ರುಕುಮುದ್ದೀನ್ ತದ್ದೇವಾಡಿ, ಶೇಖರ್ ನಾಯಕ್, ಮಹಿಳಾ ಬ್ಲಾಕ್ ಅಧ್ಯಕ್ಷರುಗಳಾದ ನಿರ್ಮಲ ತಳಕೇರಿ, ಸುಗಂಧ ಬಿರಾದಾರ, ಸಂಜುದಾದ ರಾಥೋಡ್, ಮಲ್ಲನಗೌಡ ಪಾಟೀಲ್, ಜೀತಪ್ಪ ಕಲ್ಯಾಣಿ, ಶಿವಯೋಗಪ್ಪ ಚೆನ್ನಗೊಂಡ, ಹುಚ್ಚಪ್ಪ ತಳವಾರ, ಆಸಿಫ್ ಕಾರಬಾರಿ ಸೇರಿದಂತೆ ಹಲವು ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು, ಗಣ್ಯರು ಇದ್ದರು.