ಭಾರತದ ಇತಿಹಾಸದಲ್ಲಿಯೇ ಸಾಮಾಜಿಕವಾಗಿ ಅತ್ಯಂತ ಕೆಟ್ಟ ಕಟ್ಟಪಣೆ ಹೇರಿದ ಗ್ರಂಥ ಮನುಸ್ಮೃತಿ, ಮಹಿಳೆಯರಿಗೆ ಸ್ವಾತಂತ್ರ್ಯ ನೀಡದೇ ವರ್ಣಾಶ್ರಮ ಪದ್ಧತಿ ಮುಂದುವರೆಯುವಂತೆ ಮಾಡುವ ಮೂಲಕ ಮನುಷ್ಯರ ಮಧ್ಯೆ ಭೇದ ಸೃಷ್ಟಿಸಿದ ಮನುಸ್ಮೃತಿಯನ್ನು ಅಂಬೇಡ್ಕರ್ ಅವರು ದಹಿಸಿದರು ಎಂದು ದಲಿತ್ ಯುನಿಟಿ ಮೂವ್ಮೆಂಟ್ ರಾಜ್ಯಾಧ್ಯಕ್ಷ ಪ್ರಕಾಶ್ ರಾವಣ ಹೇಳಿದರು.
ಬೀದರ ನಗರದ ನೌಬಾದ ಬಾಬಾ ಸಾಹೇಬ್ ಅಂಬೇಡ್ಕರ ಅವರ ಪುತ್ತಳಿ ಎದುರು ಮನುಸ್ಮೃತಿ ದಹನ ಕಾರ್ಯಕ್ರಮ ದಲಿತ್ ಯುನಿಟಿ ಮೂವ್ಮೆಂಟ್ ವತಿಯಿಂದ ಮನುಸ್ಮೃತಿ ಪ್ರತಿಕೃತಿಯನ್ನು ಬೆಂಕಿಯಿಟ್ಟು ಹೊತ್ತಿಸಿ ಆಕ್ರೋಶ ವ್ಯಕ್ತಪಡಿಸಿದರು.
“ಮೊಟ್ಟ ಮೊದಲ ಬಾರಿಗೆ ಗೌತಮ ಬುದ್ಧರು ಪ್ರಜಾಪ್ರಭುತ್ವ ವ್ಯವಸ್ಥೆ ಹುಟ್ಟು ಹಾಕಿ ದೇಶದ ಪ್ರತಿ ಪ್ರಜೆಯು ಸ್ವಘನತೆ ಮತ್ತು ಸ್ವಾಭಿಮಾನದಿಂದ ಬದುಕು ನಿಟ್ಟಿನಲ್ಲಿ ಎಲ್ಲರಿಗೂ ಸಮಾನತೆ ಬೋಧಿಸಿದರು, ಅಂದಿನ ವಿಚಾರಗಳೇ ಇಂದು ನಮ್ಮ ಸಂವಿಧಾನದಲ್ಲಿ ಅಳವಡಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತೀಯರಿಗೆ ಕಾನೂನಾತ್ಮಕವಾಗಿ ನೀಡಿದ್ದಾರೆ. ಆದರೆ, ಭಾರತೀಯ ಸಂವಿಧಾನದ ಮೌಲ್ಯಗಳಾದ ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಭಾತ್ರುತ್ವವನ್ನು ಎತ್ತಿ ಹಿಡಿಯುವ ಸಂವಿಧಾನದ ಬದಲು ದೇಶದಲ್ಲಿ ಮನುಸ್ಮೃತಿ ಜಾರಿಗೊಳಿಸುವ ಹುನ್ನಾರ ನಡೆಯುತ್ತಿದೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಸಂಸದರ ಅಮಾನತು ಪೂರ್ವ ನಿರ್ಧಾರಿತ, ಪೂರ್ವ ನಿಯೋಜಿತ: ಧನಕರ್‌ಗೆ ಖರ್ಗೆ ಪತ್ರ
ಈ ಸಂಧರ್ಭದಲ್ಲಿ ಪ್ರಮುಖರಾದ ವಿನೀತ್ ಗಿರಿ, ಸಿದ್ಧಾರ್ಥ ಭಾವಿದೊಡ್ಡಿ, ಮಹೇಶ್ ಸಿಂಧೆ, ಸಂವಿಧಾನ ಸಿಂಧೆ, ಸಿದ್ಧಾರ್ಥ ಗೌರೆ, ನೀಲಕಂಠ ಕಾಂಬ್ಳೆ, ಪೃಥ್ವಿ, ಲಿಂಗು ನಾಟಿಕರ, ಶ್ರೀಕಾಂತ್, ಶಿವು, ಕುಶಾಲ್ ಸೇರಿದಂತೆ ಇತರರಿದ್ದರು.