ಆಟವಾಡುತ್ತಿದ್ದಾಗ ಇನ್ನೋವಾ ಕಾರು ಹತ್ತಿಸಿದ ಪರಿಣಾಮ ಸ್ಥಳದಲ್ಲೇ ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಬೀದರ್ ನಗರದ ಹಾರೋಗೆರಿ ಬಡವಾಣೆಯ ಗುರುಪಾದಪ್ಪಾ ನಾಗಮಾರಪಳ್ಳಿ ಆಸ್ಪತ್ರೆ ಎದುರು ಮಂಗಳವಾರ ನಡೆದಿದೆ.
ನಗರದ ಹಾರೂಗೇರಿಯ ನಿವಾಸಿಗಳಾದ ಸತೀಶ ಪಾಟೀಲ ಹಾಗೂ ಸಂಗೀತಾ ದಂಪತಿ ಪುತ್ರ ಬಸವ ಚೇತನ (2) ಮೃತ ಕಂದಮ್ಮ, ಈ ಹೃದಯ ವಿದ್ರಾವಕ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
“ಮಗುವಿನ ದಂಪತಿಗಳು ಸಂಬಂಧಿಕರ ಮನೆಗೆ ಬಂದಿದ್ದರು, ಸಂಜೆ 4.40ರ ಸುಮಾರಿಗೆ ಮಗು ಹೊರಗಡೆ ರಸ್ತೆ ಮೇಲೆ ಆಟವಾಡುತ್ತಿದ್ದಾಗ ಮಗುವಿನ ಮೇಲೆ ಇನ್ನೋವಾ ಕಾರು ಹರಿದ ದುರ್ಘಟನೆ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯದಿಂದ ಎರಡು ವರ್ಷದ ಮಗು ಪ್ರಾಣ ಕಳೆದುಕೊಂಡಿದೆ. ಇನ್ನೋವಾ ಕಾರು ಚಾಲಕ ವೃತ್ತಿಯಲ್ಲಿ ದಂತ ವೈದ್ಯ ಎನ್ನಲಾಗುತ್ತಿದೆ” ಎಂದು ಸಂಬಂಧಿಕರು ಈದಿನ.ಕಾಮ್ ದೊಂದಿಗೆ ಮಾತನಾಡಿ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.