ಕನ್ನಡದ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಹೃದಯಾಘಾತದಿಂದ ನಿಧನ

Date:

Advertisements

ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನೂರಾರು ಸಿನಿಮಾಗಳಲ್ಲಿ ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ್ದ ಜಾಲಿ ಬಾಸ್ಟಿನ್ (57) ಹೃದಯಾಘಾತದಿಂದ ಡಿಸೆಂಬರ್ 26 (ಮಂಗಳವಾರ) ನಿಧನರಾಗಿದ್ದಾರೆ.

ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಜಾಲಿ ಬಾಸ್ಟಿನ್ ಅವರನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿಸಿದರು ಎನ್ನಲಾಗಿದೆ. ‘ಪ್ರೇಮಲೋಕ’, ‘ಪುಟ್ನಂಜ’, ‘ಅಣ್ಣಯ್ಯ’, ‘ಶಾಂತಿ ಕ್ರಾಂತಿʼ ಸೇರಿದಂತೆ ಕ್ರೇಜಿಸ್ಟಾರ್ರವಿಚಂದ್ರನ್ಅವರ ಹಲವು ಸಿನಿಮಾಗಳಲ್ಲಿ ಇವರು ಕೆಲಸ ಮಾಡಿದ್ದರು.

ಸಾಹಸ ನಿರ್ದೇಶನ ಹಾಗೂ ಸಾಹಸ ಕಲಾವಿದನಾಗಿ ಕನ್ನಡ ಮಾತ್ರವಲ್ಲದೆ, ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಅವರು ‘ಮಾಸ್ಟರ್ಪೀಸ್’, ʼʼಏಕಾಂಗಿʼ, ʼಸೂಪರ್ರಂಗʼ, ʼಗಾಳಿಪಟʼ, ʼಪಾಪ್ಕಾರ್ನ್ಮಂಕಿ ಟೈಗರ್‌ʼ, ʼಬೆಂಗಳೂರು ಡೇಸ್‌ʼ, ʼಆಪರೇಷನ್ಜೀವʼ, ‘ಅಂಗಮಲಿ ಡೈರೀಸ್’(ಮಲಯಾಳಂ), ʼಅಣ್ಣಯ್ಯʼ, ʼನಕ್ಷತ್ರಂ’(ತೆಲುಗು), ʼದಿ ಬಾಡಿ’(ಹಿಂದಿ), ‘ಇರಿದ’(ತಮಿಳು) ಸೇರಿದಂತೆ 900 ಕ್ಕೂ ಹೆಚ್ಚಿನ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದರು.

Advertisements

ಜಾಲಿ ಬಾಸ್ಟಿನ್ ಅವರು 1966ರಲ್ಲಿ ಕೇರಳದಲ್ಲಿ ಜನಿಸಿದ್ದರು. ಅವರು ಬೆಳೆದದ್ದು ಬೆಂಗಳೂರಿನಲ್ಲಿ. ಹೀಗಾಗಿ, ಇಲ್ಲಿಯೇ ಶಿಕ್ಷಣವನ್ನು ಪಡೆದರು. ಆರಂಭದಲ್ಲಿ ಬೈಕ್ಮೆಕ್ಯಾನಿಕ್ಆಗಿ ಕೆಲಸ ಮಾಡುತ್ತಿದ್ದಜಾಲಿ ಬಾಸ್ಟಿನ್ಸಿನಿಮಾದಲ್ಲಿ ಬೈಕ್ಸಾಹಸದ ದೃಶ್ಯಗಳನ್ನು ಮಾಡುತ್ತಿದ್ದರು. ರವಿಚಂದ್ರನ್ಅವರ ʼಪ್ರೇಮ ಲೋಕʼ ಸಿನಿಮಾದಲ್ಲಿ ಡ್ಯೂಪ್ಹಾಕಿದ್ದರು. ಸಮಯದಲ್ಲಿ ಅವರಿಗೆ 17 ವರ್ಷ ಆಗಿತ್ತು.

ಈ ಸುದ್ದಿ ಓದಿದ್ದೀರಾ? ಡಿ.26 ರಂದು ಕರ್ನಾಟಕದಲ್ಲಿ 74 ಹೊಸ ಕೋವಿಡ್​ ಕೇಸ್ ಪತ್ತೆ: ಇಬ್ಬರು ಬಲಿ

‘ನಿನಗಾಗಿ ಕಾದಿರುವೆ’ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ಧರಿಸಿದ್ದರು. ಒಂದು ಕಾಲಕ್ಕೆ ಅತಿಹೆಚ್ಚು ಸಂಭಾವನೆ ಪಡೆಯೋ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಅವರಿಗೆ ಇತ್ತು. ಇತ್ತೀಚೆಗಷ್ಟೇ ಅವರು ದುನಿಯಾ ವಿಜಯ್ ನಿರ್ದೇಶನದ ‘ಭೀಮ’ ಸಿನಿಮಾಗಾಗಿ ಕೆಲಸ ಮಾಡಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

Download Eedina App Android / iOS

X