ಜನರ ಬದುಕಿನ ಪ್ರಶ್ನೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಸಿಐಟಿಯು ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು. “ಜನರ ಸಂಕಷ್ಟಗಳಿಗೆ ಕಾರಣವಾಗಿರುವ ಬೆಲೆ ಏರಿಕೆ, ದುಡಿವ ಜನರಿಗೆ ಬದಕುಲು ಯೋಗ್ಯ ಕನಿಷ್ಟ ಕೂಲಿ, ಸಾಮಾಜಿಕ ಭದ್ರತೆ, ನಿರುದ್ಯೋಗ, ಕೃಷಿ ಬಿಕ್ಕಟಿನಿಂದ ರೈತರ ಅತ್ಮಹತ್ಯೆಗಳಂತಹ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ. ಸಮಾಜದಲ್ಲಿ ಒಡುಕು ಉಂಟುಮಾಡುವ ಶಕ್ತಿಗಳಿಗೆ ಸರ್ಕಾರ ಬೆಂಬಲಿಸುತ್ತಿದೆ. ಇದನ್ನು ಜನತೆ ಅರ್ಥೈಸಿಕೊಳ್ಳಬೇಕು” ಎಂದರು.
ಅಂಗವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಮಾತನಾಡಿ, “ದೇಶದಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಅದನ್ನು ತೊಲಗಿಸಲು ಇರುವ ಐಸಿಡಿಎಸ್ ಯೊಜನೆಗೆ ಕೇಂದ್ರ ಅನುದಾನ ಕಡಿತ ಮಾಡಿರುವುದು ನ್ಯಾಯ ಸಮ್ಮತವಲ್ಲ” ಎಂದರು.
ಬಿಸಿಊಟದ ನೌಕರರ ಸಂಘದ ಕೆಂಚಮ್ಮ ಮಾತನಾಡಿ, “22 ವರ್ಷಗಳ ಕಾಲ ಯೋಜನೆಯಲ್ಲಿ ದುಡಿದ ನೌಕರರಿಗೆ ನಿವೃತ್ತಿಯಾದಗ ಬಿಡಿಗಾಸು ಸಿಗಲ್ಲ, ಕೆಳೆದ 8-9 ವರ್ಷಗಳಿಂದ ಕೇಂದ್ರ ಸರ್ಕಾರ ಸಂಬಳವನ್ನು ಹೆಚ್ಚಿಸಿಲ್ಲ” ಎಂದು ಆರೋಪಿಸಿದರು.
ಸಭೆಯಲ್ಲಿ ಜಿ. ಕಮಲ, ರಂಗಧಾಮಯ್ಯ, ಸೈಯದ್ ಮುಜೀಬ್, ಕಲೀಲ್, ಶಂಕರಪ್ಪ, ಪಿ.ಎಪ್. ಪಿಂಚಣಿದಾರರ ಸಂಘದ ಟಿ.ಜಿ. ಶಿವಲಿಂಗಯ್ಯ, ಗ್ರಾಮ ಪಂಚಾಯತ್ ನೌಕರ ಸಂಘದ ಎನ್,ಕೆ ಸುಬ್ರಮಣ್ಯ ಇನ್ನಿತರರು ಇದ್ದರು.