ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಜನವರಿ 26 ರಂದು ಹಮ್ಮಿಕೊಂಡಿರುವ ಸಂವಿಧಾನ ಸಂರಕ್ಷಣೆ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಬೃಹತ್ ಸಮಾವೇಶದ ಕರಪತ್ರವನ್ನು ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಿಡುಗಡೆ ಮಾಡಲಾಯಿತು.
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಉಪಾಧ್ಯಕ್ಷ ಚಂದ್ರಕಾಂತ ನಿರಾಟೆ ಮಾತನಾಡಿ, “ಭಾರತೀಯ ಸಂವಿಧಾನ ದೇಶದ ಎಲ್ಲಾ ಪ್ರಜೆಗಳಿಗೆ ಸಮಾನ ಅವಕಾಶ, ಸಮಾನ ಪ್ರಗತಿಗೆ ಅನುವು ನೀಡಿದೆ, ಆದರೆ ದೇಶದಲ್ಲಿ ಸಂವಿಧಾನ ಪ್ರಕಾರ ಆಡಳಿತ ನಡೆಯುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕೂಟದ ಖಜಾಂಚಿ ನಸಿಂಗ ಸಾಮ್ರಾಟ್ ಮಾತನಾಡಿ, “ಸಂವಿಧಾನದ ಅಂಶಗಳು ದೇಶದ ಸರ್ವ ಪ್ರಜೆಗಳ ಹಿತ ಬಯಸುತ್ತವೆ , ಆದರೆ ಆಡಳಿತ ನಡೆಸುವುವವರು ಕೆಟ್ಟ ಆಡಳಿತ ನಡೆಸುತ್ತಿದ್ದಾರೆ” ಎಂದರು.
ಈ ಸುದ್ದಿಓದಿದ್ದೀರಾ? ಬೀದರ್ | ಬಿಎಸ್‌ಎಸ್‌ಕೆ ಆಡಳಿತ ಮಂಡಳಿ ವಜಾಕ್ಕೆ ಆಗ್ರಹ
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಂಬೇಡ್ಕರ್ ಸಾಗರ, ಜಿಲ್ಲಾ ಗೌರವಾಧ್ಯಕ್ಷ ಸಂಜಯ ಭೋಸ್ಲೆ, ಕಾರ್ಯಧ್ಯಕ್ಷ ರಾಜಕುಮಾರ ಗುನ್ನಳ್ಳಿ, ಕಾರ್ಯದರ್ಶಿ ರಾಜಕುಮಾರ ಭಾವಿಕಟ್ಟಿ ಹಾಗೂ ಪದಾಧಿಕಾರಿಗಳಾದ ರಾಘವೇಂದ್ರ ಮೀನಕೇರಾ, ಜಗನ್ನಾಥ ಹೊನ್ನಾ ಅಂಬಾದಾಸ ಸೋನಿ ಅಭಿಲಾಸ ಶಿಂಧೆ, ಗೌತಮ ಭೋಸ್ಲೆ, ಅರವಿಂದ ದಯಾಳ, ಮುಕೇಶ ಶಾಹಗಂಜ್, ಅಂಬಾದಾಸ ಸೈನೆ, ಸಾಹಿತಿ ಸುಬ್ಬಣ್ಣ ಕರಕನಳ್ಳಿ, ನಿತೀನ ಉಪ್ಪೆ, ಲಕ್ಷ್ಮಣ ಚಕ್ರವರ್ತಿ, ತುಕರಾಮ ಬೌದ್ದೆ, ಸ್ವರೂಪ ಸಿಂಧೆ ರಮೇಶ ಮಂದಕನಳ್ಳಿ ಕುಮಾರ ಕಾಂತೆ ಸೇರಿದಂತೆ ಇತರರಿದ್ದರು.