ಮದ್ಯದ ನಶೆಯಲ್ಲಿ ಅಪಾರ್ಟ್‌ಮೆಂಟ್‌ನ 33ನೇ ಫ್ಲೋರ್‌ನ ಬಾಲ್ಕನಿಯಿಂದ ಬಿದ್ದು ಎಂಜಿನಿಯರ್‌ವೊಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರು ಕೆ.ಆರ್.ಪುರಂನ ಅಯ್ಯಪ್ಪನಗರದಲ್ಲಿ ನಡೆದಿದೆ.
ದಿಪಾಂಶು ಶರ್ಮಾ ಮೃತ ವ್ಯಕ್ತಿ. ಇವರು ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ದಿಪಾಂಶು ಶರ್ಮಾ ಅವರು ಗುರುವಾರ ರಾತ್ರಿ ಕುಡಿದು ಪಾರ್ಟಿ ಮಾಡಿದ್ದಾರೆ. ಬಳಿಕ ಶುಕ್ರವಾರ ಬೆಳಗ್ಗೆ 6:45ರ ಸುಮಾರಿಗೆ ತಮ್ಮ ಅಯ್ಯಪ್ಪನಗರದಲ್ಲಿರುವ ಮನೆಗೆ ತೆರಳಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಅವರು ತಮ್ಮ ಅಪಾರ್ಟ್‌ಮೆಂಟ್‌ನ 33ನೇ ಫ್ಲೋರ್‌ನ ಬಾಲ್ಕನಿಗೆ ತೆರಳಿದ್ದಾರೆ. ಈ ವೇಳೆ, ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಈ ಸುದ್ದಿ ಓದಿದ್ದೀರಾ? ವೃದ್ಧೆಗೆ ವಂಚನೆ | ರಾಕಲೈನ್ ವೆಂಕಟೇಶ್ ಪುತ್ರ ಅಭಿಲಾಷ್‌ಗೆ ಮತ್ತೆ ನೋಟಿಸ್ ನೀಡಿದ ಸಿಸಿಬಿ
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.