ಕೇರಳದ ತ್ರಿಶೂರ್‌ನ ಚಾವಕ್ಕಾಡ್‌ನಲ್ಲಿ ವ್ಯಕ್ತಿಯೊಬ್ಬರು ಇತ್ತೀಚೆಗೆ ಸಣ್ಣ ತುಂಡು ಭೂಮಿಯನ್ನು ನೋಂದಾಯಿಸಿಕೊಂಡಿದ್ದು, ಲಿಂಗತ್ವ ಅಲ್ಪಸಂಖ್ಯಾತ (ಟಿಜಿ) ಗುರುತಿನ ಅಡಿಯಲ್ಲಿ ಭೂಮಿ ನೋಂದಣಿ ಮಾಡಿಕೊಂಡ ದೇಶದ ಮೊದಲಿಗರಾಗಿದ್ದಾರೆ.
38 ವರ್ಷ ವರ್ಷದ ಲೈಂಗಿಕ ಅಲ್ಪಸಂಖ್ಯಾತರಾದ ಫೈಸಲ್ ಫೈಸು ಅವರು ತಮ್ಮ ಸ್ವಂತ ಲಿಂಗತ್ವದ ಗುರುತಿನ ಅಡಿಯಲ್ಲಿ ತಾವು ಕೊಂಡುಕೊಂಡ ಭೂಮಿಯನ್ನು ನೋಂದಾಯಿಸಬೇಕಾದರೆ ಸಮುದಾಯದ ಇತರ ಸದಸ್ಯರು ಎದುರಿಸುತ್ತಿರುವ ಹಲವು ತೊಂದರೆಗಳನ್ನು ಇವರು ಎದುರಿಸಬೇಕಾಯಿತು.
ಏಕೆಂದರೆ ಆನ್‌ಲೈನ್ ವ್ಯವಸ್ಥೆಯ ಲಿಂಗದ ವಿಭಾಗದಲ್ಲಿ ‘ಪುರುಷ’ ಅಥವಾ ‘ಮಹಿಳೆ’ ಎಂದು ನಮೂದಿಸಲು ಮಾತ್ರ ನಿಬಂಧನೆಗಳಿತ್ತು.
ಫೈಸು ಅವರು ತಾವು ಕೊಂಡುಕೊಳ್ಳುವ ಭೂಮಿಯನ್ನು ಕಾನೂನುಬದ್ಧವಾಗಿ ನೋಂದಾಯಿಸಿಕೊಳ್ಳಲು ಬಯಸಿದ್ದರು. ಅದೇ ಸಮಯದಲ್ಲಿ, ಲೈಂಗಿಕ ಅಲ್ಪಸಂಖ್ಯಾತ ಗುರುತನ್ನು ಉಳಿಸಿಕೊಳ್ಳಲು ಬಯಸಿದ್ದರು. ಮೇಲಾಗಿ, ಆಧಾರ್ ಕಾರ್ಡ್ ಸೇರಿದಂತೆ ಇತರ ಎಲ್ಲ ದಾಖಲೆಗಳಲ್ಲಿ “ಟಿಜಿ”(ಲಿಂಗತ್ವ ಅಲ್ಪಸಂಖ್ಯಾತ) ಲಿಂಗದ ಗುರುತನ್ನು ಇವರು ಹೊಂದಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ; ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಏನು ಮಾಡುತ್ತಿವೆ?
ಫೈಸು ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಕೊಂಡೊಯ್ದರು. ಮೂರು ವಾರಗಳಲ್ಲಿ ‘ಟಿಜಿ’ ಲಿಂಗವನ್ನು ನಮೂದಿಸುವ ಕಾನೂನು ಇರುವುದಾಗಿ ಅವರಿಗೆ ಮನವರಿಕೆ ಮಾಡಿದರು.
ಅಂತಿಮವಾಗಿ, ಫೈಸು ಅವರ ಆಶಯದಂತೆ ಚಾವಕ್ಕಾಡ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸುಮಾರು ಐದು ಸೆಂಟ್ಸ್ ಜಮೀನನ್ನು ನೋಂದಾಯಿಸಿಕೊಂಡರು.
“ಟಿಜಿ ಸಮುದಾಯದ ವ್ಯಕ್ತಿಯೊಬ್ಬರು ‘ಟಿಜಿ’ ಗುರುತನ್ನು ನಮೂದಿಸುವ ಮೂಲಕ ಭೂಮಿಯನ್ನು ನೋಂದಣಿ ಮಾಡಿಸಿಕೊಂಡಿರುವುದು ದೇಶದಲ್ಲಿ ಇದೇ ಮೊದಲಾಗಿದೆ. ಈ ಹಿಂದೆ ಕೇರಳ ಸರ್ಕಾರದ ‘ಲೈಫ್ ಮಿಷನ್ ಯೋಜನೆಯಡಿ’ಯಲ್ಲಿ ಮನೆ ಮಂಜೂರು ಮಾಡಿದ ಟಿಜಿ ಸಮುದಾಯದ ಸದಸ್ಯರು ಹಲವು ತೊಂದರೆಗಳಿಂದಾಗಿ ನೋಂದಣಿ ಸಮಯದಲ್ಲಿ ಲಿಂಗವನ್ನು ‘ಪುರುಷ’ ಎಂದು ನಮೂದಿಸಬೇಕಾಗಿತ್ತು” ಎಂದು ಫೈಸು ತಿಳಿಸುತ್ತಾರೆ.