ಇಡೀ ವಿಶ್ವವೇ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ಐತಿಹಾಸಿಕ ರಾಮ ಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಕಾಯುತ್ತಿದೆ. ಆದರೆ ಆ ದಿನದಂದು ಜನರು ನಗರಕ್ಕೆ ಬರಬೇಡಿ ಎಂದು ಸಾರ್ವಜನಿಕರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಕೆಲವು ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅವರು ಆಗಮಿಸಿ ಐತಿಹಾಸ ದಿನಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಮೋದಿ ಹೇಳಿದರು.
ಅಯೋಧ್ಯೆಯಲ್ಲಿ ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣ ನವೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಭಿವೃದ್ಧಿ ಹಾಗೂ ಪರಂಪರೆ ದೇಶವನ್ನು ಮುನ್ನಡೆಸುತ್ತಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ; ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಏನು ಮಾಡುತ್ತಿವೆ?
ಜನವರಿ 22 ರಂದು ದೇಶದ ಎಲ್ಲ ಜನರು ತಮ್ಮ ಮನೆಗಳಲ್ಲಿ ದೀಪವನ್ನು ಬೆಳಗಿಸಿ ಇಡೀ ದೇಶವನ್ನು ಪ್ರಜ್ವಲಿಸುವಂತೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಜನವರಿ 14 ರಿಂದ 22ರವರೆಗೆ ದೇಶಾದ್ಯಂತವಿರುವ ದೇಗುಲಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಶುಚಿತ್ವ ಅಭಿಯಾನವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರಿಗೆ ಮೋದಿ ಕರೆ ನೀಡಿದರು.
ಭಗವಾನ್ ರಾಮನು ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕಾಲವೊಂದಿತ್ತು, ಆದರೆ ಈಗ ದೇಶದ ಕೋಟ್ಯಂತರ ಬಡವರಂತೆ ಕಾಂಕ್ರೀಟ್ ಮನೆಯನ್ನು ಪಡೆದಿದ್ದಾನೆ. ಉಜ್ವಲ ಯೋಜನೆಯಿಂದ ಕೋಟ್ಯಂತರ ತಾಯಿ ಮತ್ತು ಸಹೋದರಿಯರು ತಮ್ಮ ಜೀವನವನ್ನು ಹಸನಾಗಿಸಿಕೊಂಡಿದ್ದಾರೆ ಎಂದರು.
ಅವರಿಗೆ ಮೊದಲೇ ಗೊತ್ತು ಯಾರು ಬರುವದಿಲ್ಲ ಎಂದು.
ಕರೋನಾ ಸಮಯದಲ್ಲಿ ದಿಯಾ ಜಲಾವೊ ಗಂಟಿ ಬಜಾವೋ,,,ದೇಶದ ಜನರ ಹಿತಾಸಕ್ತಿ ಕಾಪಾಡುವ ಮುಖ್ಯಸ್ಥ ದೇವರು ಧರ್ಮ ಅಂದುಕೊಂಡು ಕೇವಲ ಚುನಾವಣೆ ದುರುದ್ದೇಶದಿಂದ ಭಾಷಣ ಮಾಡಿಕೊಂಡು ಕೆಲವೇ ಆಪ್ತ ಬಂಡವಾಳಿಗರ ಬೊಕ್ಕಸ ತುಂಬಿಸಲು ಹಗಲಿರುಳು ದುಡಿದವರು ,, ಮೆದುಳು ಹಳಸಿದ ಎರಡು ರೂಪಾಯಿ ಭಕ್ತರ ದೊಡ್ಡ ಪಡೆಯನ್ನು ಸೃಷ್ಟಿ ಮಾಡಿ,,,ಬಿಕರಿಯಾದ ಮೋಧ್ಯಮಗಳು, ಕೋಮು ದ್ವೇಷ ಬಿತ್ತುವ ಬಿಸ್ಕೆಟ್ ಚಾನಲ್ ಗಳು,, ಗ್ಯಾಸ್ ಸಿಲಿಂಡರ್ ದರ ಮೂರು ಪಟ್ಟು , ಅಡುಗೆ ಎಣ್ಣೆ ಮೂರು ಪಟ್ಟು, ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ ಡೀಸೆಲ್ ಪೆಟ್ರೋಲ್ ಬೆಲೆ ಹೇಳುವವರಿಲ್ಲ ಕೇಳುವವರಿಲ್ಲ , ಇಂಥಾ ವಿಷಯಗಳ ಕಡೆ ಗಮನ ಕೊಡಬೇಕಾದವರು ಅಧಿಕಾರಕ್ಕಾಗಿ ಬಹುಕೃತ ವೇಷ ಹಾಕಿದರೆ,,,ಆ ದೇಶದ ಜನರ ಸ್ಥಿತಿ ಏನಾಗಬೇಡ,,,